ಈರುಳ್ಳಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಇದೀಗ ಹೊಸ ರೀತಿಯ ಐಡಿಯಾ ಒಂದನ್ನು ನೀಡಲಾಗಿದೆ.
ಶಿವಮೊಗ್ಗ (ಅ.04): ಈರುಳ್ಳಿ ದರ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಪಡಿತರ ಕಾಡರ್ಉದಾರರಿಗೆ ಗೋವಾ ಸರ್ಕಾರದ ಮಾದರಿಯಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿ ವಿತರಣೆ ಮಾಡಬೇಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿಉವ ಅವರು ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಕೆಲವೇ ತಿಂಗಳ ಹಿಂದೆ ಪ್ರತೀ ಕೆಜಿಗೆ 10 ರಿಂದ 20 ರು ಗೆ ಸಿಗುತ್ತಿದ್ದ ಈರುಳ್ಳಿ ಇದೀಗ ಕೆಜಿಗೆ 80 ರು. ನಿಂದ 100 ರುಗೆ ತಲುಪಿದೆ. ಹೀಗಾಗಿ ಗ್ರಾಹಕರಿಗೆ ಈರುಳ್ಳಿ ಖರೀದುಸುವು ಕಣ್ಣೀರು ತರಿಸುವಂತಾಗಿದೆ.
ಭಾರೀ ಏರಿದ್ದ ಈರುಳ್ಳಿ ದರ ಭರ್ಜರಿ ಇಳಿಕೆ ..
ಕೊರೋನಾ ಸಂಕಷ್ಟದಿಂದ ಸಾಮಾನ್ಯರು ಬಡವರು ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಜಿಗೆ 30 ರು.ನಂತೆ ತಲಾ 5 ಕೆಜಿ ಈರುಳ್ಳಿ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಗೋವಾ ಸರ್ಕಾರ ಈ ರೀತಿ ವಿತರಣೆಗೆ ಮುಂದಾಗಿದೆ ಎಂದರು.