ವಿದ್ಯುತ್ ಸ್ಪರ್ಶಿಸಿ ಕಾಡಾನೆಗಳೆರಡು ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿ ಸಮೀಪದ ಪುಷ್ಪಗಿರಿ ಖಾಸಗಿ ತೋಟದಲ್ಲಿ ನಡೆದಿದೆ
ಸಿದ್ದಾಪುರ (ಜು.26) : ವಿದ್ಯುತ್ ಸ್ಪರ್ಶಿಸಿ ಕಾಡಾನೆಗಳೆರಡು ಮೃತಪಟ್ಟಿರುವ ಘಟನೆ ನೆಲ್ಯಹುದಿಕೇರಿ ಸಮೀಪದ ಪುಷ್ಪಗಿರಿ ಖಾಸಗಿ ತೋಟದಲ್ಲಿ ನಡೆದಿದೆ ನೆಲ್ಯಹುದಿಕೇರಿಯ ಕಾಫಿ ಬೆಳೆಗಾರರಾದ ಕೊಣೇರೀರ ಪ್ರಕಾಶ್ ಹಾಗೂ ಮಂಡ್ಯಪಂಡ ಸುಮನ್ ಚಂಗಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಮರದ ಕೊಂಬೆ ಬಿದ್ದು 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ತಳಮಟ್ಟದಲ್ಲಿ ತೂಗಾಡುತಿದ್ದ ಪರಿಣಾಮ ಸೋಮವಾರ ಬೆಳಗ್ಗೆ ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳು ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿವೆ. ಮೃತ ಆನೆಗಳನ್ನು ಸುಮಾರು 19 ವರ್ಷದ ಗಂಡಾನೆ ಹಾಗೂ 15 ವರ್ಷದ ಹೆಣ್ಣಾನೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಆಗಮಿಸಿ ಅರಣ್ಯ ಇಲಾಖೆ ಮತ್ತು ವಿದ್ಯುತ್ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತರಾಟೆಗೆ ತೆಗೆದುಕೊಂಡರು.
undefined
ಚಿಕ್ಕಮಗಳೂರು: ವಿದ್ಯುತ್ ಬೇಲಿ ತಗುಲಿ ಕಾಡಾನೆ ಸಾವು
ಈ ಸಂದರ್ಭ ಮಾತನಾಡಿದ ರೈತ ಸಂಘ(Rait Sangha) ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡ್ಯಪಂಡ ಪ್ರವೀಣ್ ಬೋಪಣ್ಣ,(Praveen Bopaiah) ಕಾಡಾನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ(Forest Depertment) ವಿಫಲವಾಗಿದ್ದು, ಪದೇಪದೆ ಆನೆಗಳು ತೋಟಕ್ಕೆ ಬರುತ್ತಿವೆ. ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳೆರಡು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದೆ. ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಈ ಅನಾಹುತ ಸಂಭವಿಸಿದೆ. ವಿದ್ಯುತ್ ತಂತಿ ಕೆಲ ದಿನಗಳ ಹಿಂದೆಯೇ ತುಂಡಾಗಿ ಬಿದ್ದಿದ್ದು, ತೂಗಾಡುತ್ತಿರುವ ಬಗ್ಗೆ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದರೂ ಸಿಬ್ಬಂದಿ ಬೇಜವಾಬ್ದಾರಿ ತೋರಿದೆ. ಪರಿಣಾಮ ಆನೆಗಳೆರಡು ಸಾವಿಗೀಡಾಗಿವೆ ಎಂದು ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೃತ ಕಾಡಾನೆಗಳನ್ನು(Wild Elephants) ತೋಟದ ಒಳಗಡೆ ಹೂತು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ, ಜಾಂಗೋ ಕ್ರೇನ್ ಸಹಾಯದಿಂದ ಮೃತ ಆನೆಗಳನ್ನು ತೋಟದಿಂದ ಹೊರತಂದು ನಂಜರಾಯಪಟ್ಟಣ ಸಮೀಪದ ಮೀನುಕೊಲ್ಲಿಯ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು.\
ಡಿಸಿಎಫ್ ಪೂವಯ್ಯ(DCF Poovaiah), ಎಸಿಎಫ್ ಎ.ಎ.ಗೋಪಾಲ((ACF A.A.Gopal)…, ಆರ್‌ಎಫ್‌ಒ ಶಿವರಾಂ((RFO Shivaram), ವೈದ್ಯಾಧಿಕಾರಿ ಚೆಟ್ಟಿಯಪ್ಪ,(Chettiyappa) ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೆಲ್ಯಹುದಿಕೇರಿ ಭಾಗದ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆಗಳೆರಡು ಸಾವನ್ನಪ್ಪಿದೆ. ತೋಟದ ಮಧ್ಯೆ ಹಾದು ಹೋಗುವ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ಮರದ ಕೊಂಬೆ ಬಿದ್ದು ವಿದ್ಯುತ್ ತಂತಿ ಕೆಲ ಭಾಗದಲ್ಲಿ ತೂಗಾಡುತ್ತಿದ್ದು, ಆಹಾರ ಅರಸಿ ಬಂದ ಕಾಡಾನೆಗಳಿಗೆ ತಂತಿ ತಾಗಿರುವ ಪರಿಣಾಮ ಆನೆಗಳು ಸಾವನ್ನಪ್ಪಿವೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದ್ದು, ವಿದ್ಯುತ್ ಇಲಾಖೆ ವಿರುದ್ಧ ನಾವು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿದ್ದೇವೆ.
ಪೂವಯ್ಯ, ಡಿಸಿಎಫ್ ಅರಣ್ಯ ಇಲಾಖೆ ಮಡಿಕೇರಿ