ಚುನಾವಣಾ ಸಿಬ್ಬಂದಿಗೆ ಇಂದು ಮತದಾನದ ಅವಕಾಶ

By Kannadaprabha News  |  First Published May 3, 2023, 6:01 AM IST

ಚುನಾವಣಾ ಕರ್ತವ್ಯ ನಿಯೋಜಿತರಿಗಾಗಿ ಮೇ 3 ರಂದು ವೋಟರ್‌ ಫೆಸಿಲಿಟೇಷÜನ್‌ ಸೆಂಟರ್‌ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.


 ತುಮಕೂರು     :  ಚುನಾವಣಾ ಕರ್ತವ್ಯ ನಿಯೋಜಿತರಿಗಾಗಿ ಮೇ 3 ರಂದು ವೋಟರ್‌ ಫೆಸಿಲಿಟೇಷÜನ್‌ ಸೆಂಟರ್‌ ಸ್ಥಾಪನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಮೇ 3 ರಂದು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ 2 ನೇ ಹಂತದ ತರಬೇತಿಯನ್ನು ಆಯೋಜಿಸಲಾಗಿದ್ದು, ತರಬೇತಿ ಕೇಂದ್ರದಲ್ಲಿ ಫೆಸಿಲಿಟೇಷÜನ್‌ ಸೆಂಟರ್‌ ಅನ್ನು ಸ್ಥಾಪಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ತಪ್ಪದೇ ಮೇ 3ರಂದು ಫೆಸಿಲಿಟೇಷÜನ್‌ ಸೆಂಟರ್‌ನಲ್ಲಿ ಅಂಚೆ ಮತದಾನ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

Tap to resize

Latest Videos

ತರಬೇತಿ ದಿನದಂದು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗುವ ವೋಟರ್‌ ಫೆಸಿಲಿಟೇಷÜನ್‌ ಸೆಂಟರ್‌ಗೆ ಒಬ್ಬ ಗ್ರೇಡ್‌-2 ತಹಶೀಲ್ದಾರರನ್ನು ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಬೇಕು. ಫೆಸಿಲಿಟೇಷÜನ್‌ ಕೇಂದ್ರದಲ್ಲಿ ಒಬ್ಬ ವಿಡಿಯೋಗ್ರಾಫರ್‌ ಹಾಗೂ ಅವಶ್ಯಕ ಸಿಬ್ಬಂದಿ, ಲೇಖನ ಸಾಮಗ್ರಿಗಳನ್ನು ಒದಗಿಸಬೇಕು. ಪ್ರತಿಯೊಂದು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಫೆಸಿಲಿಟೇಷನ್‌ ಕೇಂದ್ರ ಸ್ಥಾಪಿಸಿದ ಬಗ್ಗೆ ಮಾಹಿತಿ ನೀಡಬೇಕು. ಚುನಾವಣಾ ಅಭ್ಯರ್ಥಿಗಳಿಂದ ನಿಯೋಜಿತರಾದ ವ್ಯಕ್ತಿಗಳು ಫೆಸಿಲಿಟೇಷÜನ್‌ ಸೆಂಟರ್‌ನಲ್ಲಿ ಅಂಚೆ ಮತದಾನ ವಿಧಾನವನ್ನು ಪರಿಶೀಲಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು ಎಂದರು.

ಫೆಸಿಲಿಟೇಷÜನ್‌ ಕೇಂದ್ರದಲ್ಲಿ ಗೌಪ್ಯತೆ ಕಾಪಾಡಿಕೊಂಡು ಅಂಚೆ ಮತ ಪತ್ರಗಳನ್ನು ಹಾಕಲು ದೊಡ್ಡ ಸ್ಟೀಲ್‌ ಟ್ರಂಕನ್ನು ಇಡಬೇಕು. ಈ ಟ್ರಂಕಿನ ವ್ಯವಸ್ಥೆಯನ್ನು ಮೇ 9 ರಂದು ನಡೆಯಲಿರುವ ಮಸ್ಟರಿಂಗ್‌ ಕೇಂದ್ರದಲ್ಲಿಯೂ ಮಾಡಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದವರು ಮೇ 9 ರಂದು ನಡೆಯುವ ಮಸ್ಟರಿಂಗ್‌ ಕೇಂದ್ರದಲ್ಲಿ ಅಂಚೆ ಮತದಾನ ಮಾಡತಕ್ಕದ್ದು. ತರಬೇತಿ ದಿನದಂದು ಹಾಗೂ ಮಸ್ಟರಿಂಗ್‌ ದಿನದಂದು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸದಿರುವ ಚುನಾವಣಾ ಸಿಬ್ಬಂದಿಗಳು ನೋಂದಾಯಿತ ಅಂಚೆ ಮೂಲಕ ತಮ್ಮ ಮತಪತ್ರವನ್ನು ಕಳುಹಿಸಬೇಕು. ಬೇರೆ ಜಿಲ್ಲೆಯಲ್ಲಿರುವ ಚುನಾವಣಾ ಸಿಬ್ಬಂದಿಗಳಿಗೆ ಅಂಚೆ ಮತಪತ್ರವನ್ನು ನೇರವಾಗಿ ನೋಂದಾಯಿತ ಅಂಚೆ ಮೂಲಕ ಯಾವುದೇ ರೀತಿಯಲ್ಲಿ ವಿಳಂಬ ಮಾಡದೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ಪಾಲಿಕೆ ಆಯುಕ್ತ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ದರ್ಶನ್‌, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಹೋಟೆಲ್‌ ಶಿವಪ್ಪ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್‌, ತಹಶೀಲ್ದಾರ್‌ ಸಿದ್ದೇಶ್‌ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇ 3 ರಂದು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ 2 ನೇ ಹಂತದ ತರಬೇತಿಯನ್ನು ಆಯೋಜಿಸಲಾಗಿದ್ದು, ತರಬೇತಿ ಕೇಂದ್ರದಲ್ಲಿ ಫೆಸಿಲಿಟೇಷÜನ್‌ ಸೆಂಟರ್‌ ಅನ್ನು ಸ್ಥಾಪಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ತಪ್ಪದೇ ಮೇ 3ರಂದು ಫೆಸಿಲಿಟೇಷÜನ್‌ ಸೆಂಟರ್‌ನಲ್ಲಿ ಅಂಚೆ ಮತದಾನ ಮಾಡಬೇಕು.

ಮತ ಚಲಾಯಿಸುವ ಸಿಬ್ಬಂದಿಗಳ ಹೆಸರು ಮತ್ತು ವಿಳಾಸದ ಮಾಹಿತಿಯನ್ನು ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳಿಗೆ ನೀಡಬಾರದು. ಮತದಾನದ ದಿನ ನಿಯೋಜನೆ ಮಾಡಿದ ಸಿಬ್ಬಂದಿಗಳೊಂದಿಗೆ ಮೈಕ್ರೋ ಅಬ್ಸರ್ವರ್‌ಗಳು, ಸೆಕ್ಟರ್‌ ಅಧಿಕಾರಿಗಳು, ಲೈಸನ್‌ ಅಧಿಕಾರಿಗಳು ಹಾಗೂ ಇತರೆ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಅಂಚೆ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ್‌ ಆದೇಶ ನೀಡಿದ್ದಾರೆ. 

click me!