Tumakur : ಬಿಜೆಪಿ ಪಕ್ಷಕ್ಕೆ ಮಾದಿಗರ ಸಂಪೂರ್ಣ ಬೆಂಬಲ

By Kannadaprabha News  |  First Published May 3, 2023, 5:56 AM IST

ಮೂವತ್ತು ವರ್ಷದ ಮಾದಿಗ ಸಮಾಜದ ಒಳಮೀಸಲಾತಿ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಲು ಹೋರಟಿದೆ. ಆದರೇ ಕಾಂಗ್ರೆಸ್‌ ಪಕ್ಷ ಒಳಮೀಸಲಾತಿ ಆದೇಶವನ್ನು ಮತ್ತೆ ತೆಗೆಯುವ ಶಪಥ ಮಾಡಿದೆ.. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯು ನಮ್ಮ ಮಾದಿಗ ಸಮಾಜವು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಎಲ್‌.ಮುರುಗನ್‌ ತಿಳಿಸಿದರು.


 ಕೊರಟಗೆರೆ :  ಮೂವತ್ತು ವರ್ಷದ ಮಾದಿಗ ಸಮಾಜದ ಒಳಮೀಸಲಾತಿ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಲು ಹೋರಟಿದೆ. ಆದರೇ ಕಾಂಗ್ರೆಸ್‌ ಪಕ್ಷ ಒಳಮೀಸಲಾತಿ ಆದೇಶವನ್ನು ಮತ್ತೆ ತೆಗೆಯುವ ಶಪಥ ಮಾಡಿದೆ.. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯು ನಮ್ಮ ಮಾದಿಗ ಸಮಾಜವು ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರ ಸಚಿವ ಎಲ್‌.ಮುರುಗನ್‌ ತಿಳಿಸಿದರು.

ಕೊರಟಗೆರೆ ಪಟ್ಟಣದ ಪಂಚಾಜನ್ಯ ಕಚೇರಿಯಲ್ಲಿ ರಾಜ್ಯ ಮಾದಿಗ ದಂಡೋರ ಸಂಘದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

Tap to resize

Latest Videos

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ಮಾದಿಗ ಸಮಾಜಕ್ಕೆ ಬಿಜೆಪಿ ಪಕ್ಷವು 12ಸೀಟು ನೀಡಿದೆ. ಆದರೇ ಕಾಂಗ್ರೆಸ್‌ ಪಕ್ಷ ಕೇವಲ 6 ಸೀಟು ನೀಡಿ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದೆ. ಮಾದಿಗ ಸಮಾಜವನ್ನು ಕಾಂಗ್ರೆಸ್‌ ಪಕ್ಷ ಕೇವಲ ಪ್ರಚಾರ ಮತ್ತು ಮತಕ್ಕಾಗಿ ಮಾತ್ರ 70 ವರ್ಷದಿಂದ ಬಳಕೆ ಮಾಡಿಕೊಂಡಿದೆ. 2023ರ ಚುನಾವಣೆಗೆ ಮೀಸಲು ಕ್ಷೇತ್ರಗಳಲ್ಲಿ ರಾಜ್ಯದ ಮಾದಿಗ ಸಮಾಜ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದು

ರಾಷ್ಟ್ರೀಯ ಮಾದಿಗ ದಂಡೋರ ಅಧ್ಯಕ್ಷ ಮಂದಕೃಷ್ಣ ಮಾದಿಗ ಮಾತನಾಡಿ, 30ವರ್ಷ ಮಾದಿಗ ಸಮಾಜ ಒಳಮೀಸಲಾತಿಗೆ ಹೋರಾಟ ನಡೆಸಿದೆ. ಬಿಜೆಪಿ ಸರ್ಕಾರ ಒಳಮೀಸಲಾತಿ ಪುರಸ್ಕರಿಸಿ ಕೇಂದ್ರಕ್ಕೆ ಕಳುಹಿಸಿದೆ. ಆದರೇ ಕಾಂಗ್ರೆಸ್‌ ಸರ್ಕಾರ ತೆಗೆಯುವ ಮಾತನಾಡಿದೆ. ನಮ್ಮ ಮಾದಿಗ ಸಮಾಜ ಬಿಜೆಪಿ ಪಕ್ಷದ ಪರವಾಗಿದೆ. ಕೇಂದ್ರ ಸರ್ಕಾರ ಆಂಧ್ರಪ್ರದೇಶ ಮತ್ತು ತೆಲಂಗಣ ರಾಜ್ಯದಲ್ಲಿಯು ಒಳಮೀಸಲಾತಿ ಜಾರಿಗೆ ತರಬೇಕಿದೆ. ಕೊರಟಗೆರೆ ಕ್ಷೇತ್ರದಲ್ಲಿ ಅನಿಲ್‌ಕುಮಾರ್‌ ಪರವಾಗಿ ಮತಯಾಚನೆ ಮಾಡ್ತೀವಿ ಎಂದು ತಿಳಿಸಿದರು.

ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ, ಒಳಮೀಸಲಾತಿ ತೆಗೆಯುವ ಕಾಂಗ್ರೆಸ್‌ ಪಕ್ಷದ ವಿರುದ್ದವಾಗಿ ರಾಜ್ಯದಲ್ಲಿ ಸಂಘಟನೆ ಮಾಡ್ತೀವಿ. ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದ ಬಿಜೆಪಿ ಪಕ್ಷಕ್ಕೆ ಬೆಂಬಲಿಸಲು ಮಾದಿಗ ದಂಡೋರ ತಿರ್ಮಾನ ಮಾಡಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತೇವೆ. ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್‌ ಗೆಲುವು ಖಚಿತ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಹೆಚ್‌.ಅನಿಲ್‌ಕುಮಾರ್‌, ಮುಖಂಡರಾದ ದಾಸಲುಕುಂಟೆ ರಘು, ದಾಡಿವೆಂಕಟೇಶ್‌, ದಲಿತ ಆನಂದ್‌, ನಾಗರಾಜು, ಯೋಗಿಶ್‌, ಹನುಮಂತರಾಜು, ರವಿವರ್ಮ, ಸಿದ್ದೇಶ್‌, ಬಾಲರಾಜು, ರವಿಚಂದನ್‌, ಲಕ್ಷ್ಮೇಪತಿ, ಶ್ರೀನಿವಾಸ್‌, ರಂಗರಾಜು, ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.

ಮೂವತ್ತು ವರ್ಷದ ಮಾದಿಗ ಸಮಾಜದ ಒಳಮೀಸಲಾತಿ ಕನಸನ್ನು ಬಿಜೆಪಿ ಸರ್ಕಾರ ನನಸು ಮಾಡಲು ಹೋರಟಿದೆ. ಈ ಕಾರಣದಿಂದ 2023ರ ಚುನಾವಣೆಗೆ ಮೀಸಲು ಕ್ಷೇತ್ರಗಳಲ್ಲಿ ರಾಜ್ಯದ ಮಾದಿಗ ಸಮಾಜ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದೆ.

ಎಲ್‌. ಮುರುಗನ್‌, ಕೇಂದ್ರ ಸಚಿವ

ಬಿಜೆಪಿ ಸರ್ಕಾರ ಒಳಮೀಸಲಾತಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಿದೆ. ಆದರೇ ಕಾಂಗ್ರೆಸ್‌ ಪಕ್ಷವು ರಾಜಕೀಯ ಪ್ರೇರಿತವಾಗಿ ಒಳ ಮೀಸಲಾತಿಗೆ ವಿರೋದಿಸಿ ರದ್ದು ಮಾಡಲು ಹೋರಟಿದೆ. ಕೊರಟಗೆರೆ ಮೀಸಲು ಕ್ಷೇತ್ರದ ಜನತೆ ಯೋಚನೆ ಮಾಡಿ ಮತ ಚಲಾಯಿಸಬೇಕಿದೆ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಮಾದಿಗ ಸಮಾಜ ಆರ್ಶಿವಾದ ಮಾಡಬೇಕಿದೆ.

ಅನಿಲ್‌ಕುಮಾರ್‌. ಬಿಜೆಪಿ ಅಭ್ಯರ್ಥಿ. ಕೊರಟಗೆರೆ

click me!