ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗದ ನಡೆ: ಆರೋಪ

By Kannadaprabha NewsFirst Published Oct 2, 2019, 9:13 AM IST
Highlights

ಬಿಜೆಪಿ ತನ್ನ ಅಧಿಕಾರದಿಂದ ಸರ್ಕಾರದ ಅಂಗ ಸಂಸ್ಥೆಗಳಾದ ಸಿಬಿಐ, ಇಡಿ, ಆರ್‌ಬಿಐ, ಚುನಾವಣೆ ಆಯೋಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನಗೆ ಇಷ್ಟಬಂದಂತೆ ಆಟ ಆಡಿಸುತ್ತಿದೆ. ಚುನಾವಣಾ ಆಯೋಗ ಒಂದೊಂದು ದಿನ ಒಂದೊಂದು ರೀತಿಯ ನಿಲುವು ಕೈಗೊಳ್ಳುತ್ತಿದೆ ಎಂದು  ಕೆಪಿಸಿಸಿ ರಾಜ್ಯ ವಕ್ತಾರ ಎಂ. ಲಕ್ಷಣ್‌ ಆರೋಪಿಸಿದ್ದಾರೆ.

ಮೈಸೂರು(ಅ.02): ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದಾಗಿನಿಂದಲೇ ನೀತಿ ಸಂಹಿತೆ ಜಾರಿಗೊಳಿಸಬೇಕು. ಚುನಾವಣೆ ಆಯೋಗ ಬಿಜೆಪಿಯ ಅಂಗ ಸಂಸ್ಥೆಯಂತೆ ಕೆಲಸ ಮಾಡಬಾರದು ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ. ಲಕ್ಷಣ್‌ ಕಿಡಿಕಾರಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತನ್ನ ಅಧಿಕಾರದಿಂದ ಸರ್ಕಾರದ ಅಂಗ ಸಂಸ್ಥೆಗಳಾದ ಸಿಬಿಐ, ಇಡಿ, ಆರ್‌ಬಿಐ, ಚುನಾವಣೆ ಆಯೋಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನಗೆ ಇಷ್ಟಬಂದಂತೆ ಆಟ ಆಡಿಸುತ್ತಿದೆ. ಚುನಾವಣಾ ಆಯೋಗ ಒಂದೊಂದು ದಿನ ಒಂದೊಂದು ರೀತಿಯ ನಿಲುವು ಕೈಗೊಳ್ಳುತ್ತಿದೆ ಹಾಗೂ ಯಾವುದೇ ಕಾರಣಕ್ಕೂ ಚುನಾವಣೆಯನ್ನು ಮುಂದೂಡಬಾರದು. ಕೂಡಲೇ ನೀತಿ ಸಂಹಿತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮೊದಲು ಚುನಾವಣೆ ಆಯೋಗ ನಿಗದಿ ಮಾಡಿದ್ದ ದಿನಾಂಕವನ್ನು ರದ್ದು ಮಾಡಿ ಈಗ ಮತ್ತೊಮ್ಮೆ ಹೊಸ ದಿನಾಂಕ ಮಾಡಿದೆ. ಇದರ ಜೊತೆಗೆ ನೀತಿ ಸಂಹಿತೆ ನ.11 ರಿಂದ ಜಾರಿಯಾಗಲಿದೆ ಎಂದು ಘೋಷಿಸಿರುವುದು ಸರಿಯಲ್ಲ. ಇದು ಬಿಜೆಪಿಯವರೆಗೆ ಸಹಾಯ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದರು.

ಬಿಜೆಪಿಗೆ ಸೋಲು ಖಚಿತ:

ಈ ಉಪ ಚುನಾವಣೆಯಲ್ಲಿ ಬಿಜೆಪಿ 15 ಕ್ಕೆ 15 ಕ್ಷೇತ್ರದಲ್ಲೂ ಸೋಲುವುದು ಖಚಿತ ಮತ್ತು ಅದು ಆಶ್ಚರ್ಯ ಏನಲ್ಲ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಮತ್ತು ಈಗಿನ ಸಿಎಂ ಯಡಿಯೂರಪ್ಪ ಅವರು ಮೈಸೂರಿನ ಅಭಿವೃದ್ಧಿಗೆ ಒಂದು ಕಾಸು ಕೂಡ ಕೊಟ್ಟಿಲ್ಲ ಎಂದು ಟೀಕಿಸಿದರು.

ಬ್ಯಾನರ್ ಬದಲಾಯಿಸದ್ದಕ್ಕೆ ಸಚಿವರು ಫುಲ್ ಗರಂ..

ಕೆಪಿಸಿಸಿ ರಾಜ್ಯ ಮಹಿಳಾ ವಕ್ತಾರೆ ಮಂಜುಳಾ ಮಾನಸ ಮಾತನಾಡಿ, ತಂತಿ ಮೇಲೆ ನಾನು ನೆಡೆಯುತ್ತಿದ್ದೇನೆ ಎಂಬ ಮಾತನ್ನು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದು ಬರೀ ಸುಳ್ಳು. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಮಾಡದೆ ಕುಂಟು ನೆಪ ಹೇಳಿಕೊಂಡು ಸುಳ್ಳು ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಕೇಂದ್ರದಿಂದ ನೆರೆ ಪರಿಹಾರ ತರಲಾಗದೆ ಇರುವುದು ನಾಚಿಕೆಯ ಸಂಗತಿ. ಇನ್ನು ಮೋದಿಯವರಿಗೆ ಸಂತ್ರಸ್ತರ ಗೋಳು ಕೇಳದೆ ಕಿವುಡರಾಗಿದ್ದಾರೆ. ಉಪ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ದಸರಾ ಕ್ರೀಡಾಕೂಟ ಉದ್ಘಾಟಿಸಿದ ಪಿವಿ ಸಿಂಧು!

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುರ್ಮಾ ಮಾತನಾಡಿ, ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಐತಿಹಾಸಿಕ ದಸರಾವನ್ನು ಬಿಜೆಪಿ ದಸರಾ ಮಾಡಿದ್ದಾರೆ. ಯಾವುದೇ ಸಮಿತಿಯಲ್ಲಿ ಬಿಜೆಪಿ ಕಡೆಯವರನ್ನು ಆಯ್ಕೆ ಮಾಡಿದ್ದು. ಜೆಡಿಎಸ್‌ ಮತ್ತು ಕಾಂಗ್ರೆಸ್‌ನವರಿಗೆ ದಸರಾ ಆಹ್ವಾನವನ್ನು ಸಹ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಪ್ರತಾಪ್ ಸಿಂಹ ನಾಡಹಬ್ಬವನ್ನು ಕೋಮುಗಲಭೆ ಹಬ್ಬವಾಗಿ ಮಾಡಿದ್ದಾರೆ. ಬೇರೆಯವರು ಆಚರಣೆ ಮಾಡುವ ಮಹಿಷ ದಸರಕ್ಕೆ ತಡೆ ನೀಡಿ 7 ವರ್ಷದಿಂದ ನಡೆದುಕೊಂಡು ಬಂದ ಆಚರಣೆಯನ್ನು ರದ್ದು ಮಾಡಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಮತ್ಸ್ಯಲೋಕ..!

ಕಾಂಗ್ರೆಸ್‌ ಹೈ ಕಮಾಂಡ್‌ ಮತ್ತು ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರ ಜೊತೆ ಚರ್ಚಿಸಿ ಮಹಿಷ ದಸರಾ ಮತ್ತು ಈ ವಿಷಯದ ಬಗ್ಗೆ ಮುಂದಿನ ಕ್ರಮ ಮತ್ತು ನಿರ್ಧಾರ ಕೈಗೊಳ್ಳಲಾಗುವುದು. ಪ್ರತಾಪ್‌ ಸಿಂಹ ಪೊಲೀಸರು, ಮಹಿಷ ದಸರ ಸಮಿತಿಯವರಿಗೆ ಆಡಿರುವ ಮಾತುಗಳಿಂದ ಧಾರ್ಮಿಕ ಧಕ್ಕೆ ತರುವಂತೆ ಆಡಿದ್ದಾರೆ. ಇದರ ವಿರುದ್ಧ ಕೃಷ್ಣರಾಜ ಪೊಲೀಸ್‌ ತಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್‌ ಮುಖಂಡ ಪೊ. ರಾಮಪ್ಪ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿಯ ಕಾರ್ಯದರ್ಶಿ ಎಸ್‌. ದೀಪಕ್‌ ಕುಮಾರ್‌ ಇದ್ದರು.

ಮೈಸೂರು ದಸರಾದಲ್ಲಿ ದಂಪತಿಗಳಿಂದ ಪಾಕೋತ್ಸವ

click me!