ಪಕ್ಷಾಂತರ ಮಾಡಿದ ಬಿಜೆಪಿಗರಿಗೆ ಬಂತು ನೋಟಿಸ್‌..!

By Kannadaprabha News  |  First Published Feb 9, 2021, 1:29 PM IST

ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಬಿಜೆಪಿ ಸದಸ್ಯರು| ಪಕ್ಷಾಂತರ ಮಾಡಿದ್ದ ಸದಸ್ಯರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ| ನೋಟಿಸ್‌ ಜಾರಿಯಿಂದ ದೂರಿನ ವಿಚಾರಣೆ ಪ್ರಾರಂಭ| 


ಕೊಪ್ಪಳ(ಫೆ.09):  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದ ಬಿಜೆಪಿಯ 6 ಸದಸ್ಯರಿಗೆ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದೆ. ಇದರಿಂದ ಪಕ್ಷಾಂತರ ಮಾಡಿದ ಸದಸ್ಯರು ಇಕ್ಕಟ್ಟಿಗೆ ಸಿಲುಕಲಿದ್ದಾರೆ.

ರಾಜಶೇಖರ ಹಿಟ್ನಾಳ ಹಾಗೂ ಬಿಜೆಪಿಯಿಂದ ಗಂಗಮ್ಮ ಈಶಣ್ಣ ಗುಳಗಣ್ಣನವರ್‌ ಸ್ಪರ್ಧೆ ಮಾಡಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಬಿಜೆಪಿಯಿಂದ 10 ಸದಸ್ಯರಿಗೆ ವಿಪ್‌ ಜಾರಿ ಮಾಡಲಾಗಿತ್ತು. ಆದರೆ, ಬಿಜೆಪಿಯ ನೀಲಮ್ಮ ಭಾವಿಮನಿ, ಪ್ರೇಮಾ ಕುಡಗುಂಟಿ, ವಿಜಯ ನಾಯಕ್‌ ಲಮಾಣಿ, ವಿಜಯಲಕ್ಷ್ಮೀ ಪಲ್ಲೇದ್‌, ಭಾಗ್ಯವತಿ ಬೋಲಾ, ಶರಣಮ್ಮ ಜೈನರ್‌ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಪರ ಮತ ಚಲಾಯಿಸಿದ್ದರು.

Tap to resize

Latest Videos

ಇದ್ದದ್ದು 26, ಚಲಾವಣೆಯಾಗಿದ್ದು 27 ಮತ: ಹೇಗಂತೀರಾ..?

ಇದರ ವಿರುದ್ಧ ಬಿಜೆಪಿ ದೂರು ಸಲ್ಲಿಸಿತ್ತು. ನೋಟಿಸ್‌ ಜಾರಿಯಿಂದ ದೂರಿನ ವಿಚಾರಣೆ ಪ್ರಾರಂಭವಾಗಲಿದೆ.
 

click me!