ಮಾ.4ರಂದು ದಾವಣಗೆರೆಯಲ್ಲಿ ಆಪ್‌ ಬೃಹತ್‌ ಸಮಾವೇಶ: ಕೇಜ್ರಿವಾಲ್, ಭಗವಂತ್ ಮಾನ್ ಭಾಗಿ

By Govindaraj S  |  First Published Mar 2, 2023, 10:22 PM IST

ನಗರದ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 4 ರಂದು ಎಎಪಿಯ ಬೃಹತ್ ಸಮಾವೇಶ ನಡೆಯಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಾಗು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. 


ದಾವಣಗೆರೆ (ಮಾ.02): ನಗರದ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 4 ರಂದು ಎಎಪಿಯ ಬೃಹತ್ ಸಮಾವೇಶ ನಡೆಯಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಾಗು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಎಎಪಿ ಕಾರ್ಯಕರ್ತರು ಆಗಮಿಸಲಿದ್ದು 50 ಸಾವಿರಕ್ಕೂ ಹೆಚ್ಚು ಎಎಪಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. 

ಮಧ್ಯ ಕರ್ನಾಟಕದ ದಾವಣಗೆರೆ ರಾಜಕೀಯ ಸಮಾವೇಶಗಳಿಗೆ ಅದೃಷ್ಟದ ನೆಲವಾಗಿದ್ದು ರಾಜ್ಯದಲ್ಲಿಯೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಸಮಾವೇಶ ನಡೆಸುತ್ತಿದ್ದೇವೆ. ಎಎಪಿ ಪಕ್ಷದ ಅಧಿಕೃತ ಪ್ರಚಾರ ದಾವಣಗೆರೆ ನೆಲದಿಂದ ಆರಂಭವಾಗಿದ್ದು, ಈ ವಿಧಾನಸಭೆಯಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲು ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈಗಾಗಲೇ ರಾಜ್ಯದ 185 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಟಿಕೇಟ್ ಆಕಾಂಕ್ಷಿತರಾಗಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

Tap to resize

Latest Videos

ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ಕಾಂಗ್ರೆಸ್ ಪಕ್ಷದ ಟಿಕೇಟ್ ಹಂಚಿಕೆ ನಂತರ ಮತ್ತಷ್ಟು ಅಭ್ಯರ್ಥಿಗಳು ಎಎಪಿಗೆ ಬಂದು ಸ್ಪರ್ಧಿಸುವ ಸಾಧ್ಯತೆ ಇದೆ. ಈ ಭಾರಿ ಕರ್ನಾಟಕದ ನೆಲದಲ್ಲಿ ಎಎಪಿ ತನ್ನ ಖಾತೆ ತೆರೆಯುವ ವಿಶ್ವಾಸ ಇದೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಡಾ ವಿಶ್ವನಾಥ್ ಅಭಿಪ್ರಾಯಿಸಿದರು.  ದೆಹಲಿ ಮತ್ತು ಪಂಜಾಬ್‌ನಲ್ಲಿ ಆದಂತಹ ರಾಜಕೀಯ ಕ್ರಾಂತಿ ಕರ್ನಾಟಕದಲ್ಲಿ ಆಗಲಿದೆ. ರಾಜ್ಯದಲ್ಲಿ ಎಎಪಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಪ್ರೇರಿತರಾಗಿ ಪ್ರಾಮಾಣಿಕವಾಗಿದ್ದವರು ಪಕ್ಷ ಸೇರುತ್ತಿದ್ದಾರೆ. ರಾಜಕೀಯ ಚೇಂಜ್ ಆಗಬೇಕು ಅಂದ್ರೆ ಪಕ್ಷ ಬದಲಾವಣೆ ಮಾಡಬೇಕು. 

ಅದಕ್ಕಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗು ಕಾಂಗ್ರೆಸ್, ಸ್ಥಳೀಯ ಜೆಡಿಎಸ್‌ಗೆ ಪ್ರತಿಸ್ಪರ್ಧಿಯಾಗಿ ಎಎಪಿ ಸೆಣಸಲಿದೆ. ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರದಲ್ಲಿ ಪಂಜಾಬ್ ದೆಹಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 40 ಪರ್ಸೆಂಟ್ ಸರ್ಕಾರಗಳನ್ನು ಕಿತ್ತೊಗೆಯಬೇಕೆಂದ್ರೆ ಎಎಪಿ ಬರಬೇಕು. ನಮ್ಮ ಎಂಎಲ್ಎ ಆರು ಲಕ್ಷ ಕೇಳಿದ್ದಕ್ಕೆ ಅವನನ್ನು ಜೈಲಿಗೆ ನಮ್ಮ ಪಕ್ಷ ಕಳಿಸಿತು. ಎಂಎಲ್ಎ ಫಂಡ್, ಎಂಪಿ ಫಂಡ್ ತುಂಬಾ ದುರ್ಬಳಕೆಯಾಗಿದೆ. ಪ್ರಮಾಣಿಕ ರಾಜಕೀಯದಲ್ಲಿದ್ದವರಿಗೆ ನಮ್ಮ ಪಕ್ಷ ಮುಕ್ತ ಅವಕಾಶ ನೀಡುತ್ತದೆ ಎಂದರು.

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಆಹ್ವಾನ: ಸಮಾಜದಲ್ಲಿರುವ ಸತ್ಯನಿಷ್ಠರು, ವಿದ್ಯಾವಂತರು, ಸುಸಂಸ್ಕೃತರು, ಪ್ರಾಮಾಣಿಕರಿಗೆ ಆಮ್‌ ಆದ್ಮಿ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಆದರೆ, ಹಿಂದೆ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರನ್ನು ಭ್ರಷ್ಟಮತ್ತು ಕೋಮುವಾದಿ ಹಾಲಿ, ಮಾಜಿ ಶಾಸಕರು, ಸಂಸದರಿಗೆ ಆಪ್‌ನಲ್ಲಿ ಎಂದಿಗೂ ಅವಕಾಶ ಸಿಗುವುದಿಲ್ಲ. ಅವರಲ್ಲಿ ಸೂಕ್ತ ವ್ಯಕ್ತಿಗಳು ಪಕ್ಷಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬಂದರೆ, ಅವರಿಗೆ ಅವಕಾಶ ನೀಡಲಿದೆ ಎಂದು ಆಮ್‌ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. 

click me!