ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಿಡಿಗೇಡಿ ಕೃತ್ಯ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಮಧ್ಯರಾತ್ರಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಶಿವಮೊಗ್ಗ (ಅ.2): ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಕಿಡಿಗೇಡಿ ಕೃತ್ಯ ಹಿನ್ನೆಲೆ ಇದೇ ಕಾರಣಕ್ಕೆ ಹಲವು ಮನೆಗಳ ಮೇಲೆ ಕಲ್ಲುತೂರಾಟ ನಡೆದಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಅಕ್ಟೋಬರ್ 1ರ ಮಧ್ಯರಾತ್ರಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದಾದ್ಯಂತ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕಳೆದ ರಾತ್ರಿಯಿಂದಲೇ ಪೂರ್ವ ವಲಯದ ತ್ಯಾಗರಾಜನ್ ಶಿವಮೊಗ್ಗದಲ್ಲಿ ಮೊಕ್ಕಂ ಹೂಡಿದ್ದಾರೆ.
ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಶಿವಮೊಗ್ಗಕ್ಕೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಚಹಾವೇರಿ ಎಸ್ ಪಿ ಬಂದೋಬಸ್ತ್ ಆಗಮಿಸಿದ್ದಾರೆ. ರಾಗಿಗುಡ್ಡದ ಪ್ರವೇಶ ದ್ವಾರದಲ್ಲಿ ಅಳವಡಿಸಿದ್ದ ವಿವಾದಿತ ಟಿಪ್ಪು ಸುಲ್ತಾನ್ ಕಟ್ ಔಟ್ ಮಹಾನಗರ ಪಾಲಿಕೆ ತೆರವುಗೊಳಿಸಿದೆ. ಈದ್ ಮಿಲಾದ್ ಘಟನೆಯ ಹಿನ್ನೆಲೆ ಪೊಲೀಸರು ಸಿಸಿ ಕ್ಯಾಮೆರಾ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಬಂದೋಬಸ್ ಗಾಗಿ 20 ಕೆ ಎಸ್ ಆರ್ ಪಿ , 10 ಡಿ ಏ ಆರ್ ನಾಲ್ಕು ಆರ್ ಎ ಎಫ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಇಂದು ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಶಿವಮೊಗ್ಗ ನಗರದಾದಂತ ಸೆಕ್ಷನ್ 144 ವಿಸ್ತರಣೆಗೆ ಚಿಂತನೆ ಮಾಡಲಾಗಿದೆ.
ಉರಿಗೌಡ ನಂಜೇಗೌಡ ಹೆಸರಿನಿಂದ ಪ್ರಚೋದನೆ, ರಾಗಿಗುಡ್ಡ ಹಿಂಸಾಚಾರ ಕುರಿತು ಶಾಸಕರ ಹೇಳಿಕೆ!
ಇನ್ನು ಕಿಡಿಗೇಡಿ ಕೃತ್ಯ ಹಿನ್ನೆಲೆ ಸುಮಾರು 30ಕ್ಕೂ ಹೆಚ್ಚು ಜನ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಸುಮಾರು 20ಕ್ಕೂ ಹೆಚ್ಚು ಜನ ಕಲ್ಲೇಟಿನಿಂದ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕಳೆದ ತಿಂಗಳು 28ರಂದು ಗುರುವಾರ ಈದ್ ಮಿಲಾದ್ ಅನ್ನು ಮುಸಲ್ಮಾನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವೇಳೆ ಜಿಲ್ಲೆಯ ರಾಗಿಗುಡ್ಡದಲ್ಲಿ ಮತ್ತು ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆದಿತ್ತು. ಈ ವೇಳೆ ರಾಗಿಗುಡ್ಡದಲ್ಲಿ ಸಾವಿರಾರು ಮುಸ್ಲಿಂಮರು ಭಾಗವಹಿಸಿದ್ದರು. ಈ ವೇಳೆ ಪುಂಡರ ಗುಂಡ ಪೊಲೀಸರ ಮತ್ತು ಮೆರವಣಿಗೆ ಗುಂಪು ಮೇಲೆ ಕಲ್ಲೆಸೆದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು. ಲಾಠಿಚಾರ್ಜ್ ನಡೆಯಿತು.
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ: 144 ಸೆಕ್ಷನ್ ಜಾರಿ
ಘಟನೆಯ ನಷ್ಟಗಳು, ನಲುಗಿದ ನಿವಾಸಿಗಳು
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಉಂಟಾದ ಘರ್ಷಣೆಯ ಕಾರಣ ಕಲ್ಲುತೂರಾಟದ ಘಟನೆ ನಡೆದಿದ್ದು, ಉದ್ರಿಕ್ತರ ಗುಂಪೊಂದು ರಾಗಿ ಗುಡ್ಡದ ಹಲವು ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ ಮನೆಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದೆ.
ಹಲವು ಮನೆಗಳ ಮುಂದೆ ನಿಲ್ಲಿಸಿದ ಬೈಕ್ ಮತ್ತು ಕಾರುಗಳ ಜಖಂಗೊಳಿಸಿ ಕಿಡಿಗೇಡಿ ಕೃತ್ಯ ನಡೆಸಲಾಗಿದೆ. ಮನೆಯಲ್ಲಿ ತನ್ನ ಪುಟ್ಟ ಮಕ್ಕಳ ಜೊತೆ ಮಲಗಿದ್ದ ತಾಯಿ ಒಬ್ಬಳು ಪುಂಡರ ಪುಂಡಾಟಿಕೆಗೆ ನಲುಗಿ ಹೋಗಿದ್ದಾರೆ. ಪುಂಡರು ಮನೆಯ ಕಿಟಕಿ ಗಾಜುಗಳನ್ನು ಹೊಡೆಯುತ್ತಿದ್ದಂತೆ ಮನೆ ಒಳಗೆ ಬಿದ್ದ ಗಾಜಿನ ತುಂಡುಗಳು ಪುಟ್ಟ ಮಗುವಿನ ಕುತ್ತಿಗೆಯನ್ನು ಕತ್ತರಿಸುವುದರಲ್ಲಿ ಇತ್ತು. ಕೂದಲೆಯ ಅಂತರದಲ್ಲಿ ಅದನ್ನು ತಪ್ಪಿಸಿದ ತಾಯಿ ಯಾರೋ ಮಾಡಿದ ತಪ್ಪಿಗೆ ನನ್ನ ಮಗು ಬಲಿಯಾಗಬೇಕಿತ್ತು ಎಂದು ಆಕ್ರೋಶ ಆಕ್ರಂದನ ಹೊರ ಹಾಕಿದ್ದಾಳೆ.
ಹೀಗೆ ಈ ಬಡಾವಣೆಯ ಮನೆಗಳಲ್ಲಿ ಸಾಲ ಸೂಲ ಮಾಡಿ ಮನೆ ಕಟ್ಟಿಸಿದವರ ಮನೆಯ ಕಿಟಕಿ ಗಾಜುಗಳು ಹೊಡೆದು ಹಾಕಿದ್ದು ಮುಂದೆ ಈ ಏರಿಯಾದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ನಿವಾಸಿಗಳನ್ನು ಕಾಡುತ್ತಿದೆ.