
ಬೆಂಗಳೂರು (ಅ.23): ರಾಜಧಾನಿಯಲ್ಲಿ ದೀಪಾವಳಿ ಕಳೆಗಟ್ಟಿದ್ದು, ಹಬ್ಬಕ್ಕೆ ಒಂದು ದಿನ ಬಾಕಿ ಇರುವಂತೆ ಹೂ-ಹಣ್ಣು, ಅಲಂಕಾರಿಕ ಪರಿಕರಗಳ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಸೂರ್ಯ ಗ್ರಹಣ ಎದುರಾಗಿರುವುದು ಧಾರ್ಮಿಕ ಆಚರಣೆ ಜೊತೆಗೆ ವರ್ತಕರಲ್ಲೂ ಗೊಂದಲಕ್ಕೆ ಕಾರಣವಾಗಿದೆ. ಎರಡು ವರ್ಷದ ಕೋವಿಡ್ ಕತ್ತಲೆ ಬಳಿಕ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಜನತೆ ಮುಂದಾಗಿದ್ದಾರೆ. ಸೋಮವಾರ ನರಕ ಚತುರ್ದಶಿ, ಮಂಗಳವಾರ ಗ್ರಹಣ ಕಾರಣದಿಂದ ಹಬ್ಬದ ಆಚರಣೆಯಿಲ್ಲ. ಹೀಗಾಗಿ ಅಂದು ನಗರದ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮಿ ಪೂಜೆ ಆಚರಣೆಗೆ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಬುಧವಾರ ಬಲಿಪಾಡ್ಯಮಿ, ಗೋಪೂಜೆ ನಡೆಯಲಿದೆ.
ನರಕ ಚತುರ್ದಶಿ ಹಾಗೂ ಅಮವಾಸ್ಯೆ ನಡುವಿನ ಸೂರ್ಯಗ್ರಹಣ ವರ್ತಕರ ವಲಯದಲ್ಲಿ ಚಿಂತೆಗೆ ಕಾರಣವಾಗಿದೆ. ಗ್ರಹಣ ಇಲ್ಲದಿದ್ದರೆ ಮಂಗಳವಾರವೇ ಲಕ್ಷ್ಮಿ ಪೂಜೆ ಸಾಂಗವಾಗಿ ನಡೆಯುತ್ತಿತ್ತು. ಆದರೆ, ಈ ಬಾರಿ ಒಂದು ದಿನದ ಅಂತರ ಉಂಟಾಗುತ್ತಿದೆ. ಇದು ವಹಿವಾಟಿನ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಮೂರು ದಿನಗಳ ಶಾಪಿಂಗನ್ನು ಭಾನುವಾರವೇ ಕೈಗೊಳ್ಳುವ ಸಾಧ್ಯತೆಯೂ ಇದೆ. ಹಬ್ಬದ ನಡುವೆ ಬಿಡುವು ಇರುವುದರಿಂದ ಹೆಚ್ಚಿನ ಗ್ರಾಹಕರು ವ್ಯಾಪಾರಕ್ಕೆ ಬರುವುದಿಲ್ಲ, ಜೊತೆಗೆ ದರದಲ್ಲಿ ವ್ಯತ್ಯಾಸವಾಗುತ್ತದೆ ಎಂದು ವ್ಯಾಪಾರಿ ಮಣಿ ಬೇಸರ ವ್ಯಕ್ತಪಡಿಸಿದರು. ‘ಹಳ್ಳಿಗಳಿಂದ ಬಾಳೆ, ಕಬ್ಬು, ಮಾವಿನ ಎಲೆ ತಂದಿದ್ದೇವೆ.
Cracker Injury: ಪಟಾಕಿ ಅವಾಂತರದಿಂದ ಸಿಲಿಕಾನ್ ಸಿಟಿಯ ಇಬ್ಬರ ಕಣ್ಣಿಗೆ ಗಾಯ
ಗ್ರಹಣದ ದಿನ ಜನರು ಖರೀದಿ ಮಾಡಲಾರರು, ಒಂದು ದಿನ ಹಾಗೆಯೇ ಇಟ್ಟುಕೊಳ್ಳುವುದು ಸಮಸ್ಯೆ. ಮಿಕ್ಕ ಎರಡು ದಿನ ಗ್ರಾಹಕರು ಹೆಚ್ಚು ಚೌಕಾಸಿ ಮಾಡಬಹುದು’ ಎಂದು ರಾಮಣ್ಣ ಹೇಳುತ್ತಾರೆ. ನವರಾತ್ರಿ ಬಳಿಕ ಮಳೆಯಿಂದಾಗಿ ಹೂವುಗಳ ದರ ತೀರಾ ಕುಸಿದಿತ್ತು. ಹಬ್ಬದಿಂದಾಗಿ ಹೂ ಹಣ್ಣು ತರಕಾರಿಗಳ ದರ ವ್ಯತ್ಯಾಸವಾಗಲಿದೆ. ಶನಿವಾರದವರೆಗೂ ಮಾರುಕಟ್ಟೆಯಲ್ಲಿ ದರಗಳಲ್ಲಿ ಹೇಳಿಕೊಳ್ಳುವಷ್ಟು ಏರಿಕೆಯಾಗಿಲ್ಲ. ಭಾನುವಾರದಿಂದ ದರ ಹೆಚ್ಚಲಿದ್ದು, ಬಲಿಪಾಡ್ಯಮಿವರೆಗೂ ಮುಂದುವರಿಯುತ್ತದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಏರಿದ ಚಿನ್ನದ ಬೆಲೆ: ನಿರೀಕ್ಷೆಯಂತೆ ಹಬ್ಬದ ನಡುವೆ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10ಗ್ರಾಂ ಚಿನ್ನ ಶನಿವಾರ 750 . ಏರಿಕೆ ಕಂಡು 47050 ರು., 24 ಕ್ಯಾರೆಟ್‌ನ 10ಗ್ರಾಂ ಚಿನ್ನ 830 . ಏರಿಕೆ ಕಂಡು 51330 . ರು. ಆಗಿತ್ತು. ( ಜ್ಯೂವೆಲರಿ ಅಸೋಸಿಯೇಶನ್ ಬೆಂಗಳೂರು ಪ್ರಕಾರ 24 ಕ್ಯಾ. 1ಗ್ರಾಂ 5212. ಹಾಗೂ 22 ಕ್ಯಾ. 1ಗ್ರಾಂ. 4795 . ಇತ್ತು.) ಇನ್ನು, ಬೆಳ್ಳಿ ಬೆಲೆ ಕೂಡ ಏರಿಕೆ ಕಂಡಿದ್ದು 10ಗ್ರಾಂ 632. ಆಗಿದೆ. ಧನ್‌ತೇರಾಸ್ ಆಚರಣೆ ಹಿನ್ನೆಲೆಯಲ್ಲಿ ದರ ಹಬ್ಬ ಮುಗಿವವರೆಗೆ ಹೀಗೆಯೆ ದರ ಮುಂದುವರಿಯಬಹುದುಎಂದು ವರ್ತಕರು ಹರ್ಷ ವ್ಯಕ್ತಪಡಿಸಿದರು.
Deepavali 2022; ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ಒಣ ಹಣ್ಣುಗಳು (1 ಕೇಜಿ)
ಗೋಡಂಬಿ 680
ಬಾದಾಮಿ 840
ದ್ರಾಕ್ಷಿ 280
ಅಂಜುರ 1000
ಒಣ ಖರ್ಜುರ 280
ಸೌದಿ ಖರ್ಜುರ 500
ಆಪ್ರಿಕಾಟ್480
ವಾಲ್‌ನಟ್ 700
ಹಣ್ಣುಗಳ ಬೆಲೆ (1 ಕೇಜಿ)
ದಾಳಿಂಬೆ 250
ಮೂಸಂಬಿ 80-100
ಕಿತ್ತಳೆ 100
ಸೇಬು 120-250
ಸೀತಾಫಲ 150-250
ಪೀಯರ್ಸ್ 250
ದ್ರಾಕ್ಷಿ 150-250
ಡ್ರ್ಯಾಗನ್ ಫ್ರೂಟ್ 250
ಹೂವುಗಳ ಬೆಲೆ (1 ಕೇಜಿ)
ಸೇವಂತಿಗೆ 60-160
ಮಲ್ಲಿಗೆ 1000
ಸುಗಂಧರಾಜ 100-80-60
ರೋಸ್ 160-120
ಚೆಂಡುಹೂವು 180
ತಾವರೆ 15-20
ಕಾಕಡ 500
ಕಣಗಲ 300