Weather forecsat: ಇನ್ನೂ ಒಂದು ವಾರ ಕರಾವಳಿಯಲ್ಲಿ ಮುಂಗಾರು ದುರ್ಬಲ!

Published : Jun 17, 2023, 05:47 AM IST
Weather forecsat: ಇನ್ನೂ ಒಂದು ವಾರ ಕರಾವಳಿಯಲ್ಲಿ ಮುಂಗಾರು ದುರ್ಬಲ!

ಸಾರಾಂಶ

ಕರಾವಳಿಯಲ್ಲಿ ಶುಕ್ರವಾರ ಮುಂಗಾರು ದುರ್ಬಲವಾಗಿದ್ದು, ಮುಂದಿನ ಒಂದು ವಾರ ಹೀಗೆಯೇ ಮುಂದುವರಿಯಲಿದೆ. ಶನಿವಾರ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಕಂಡುಬರಲಿದ್ದು, ಸಂಜೆ ಗಾಳಿ ಸಹಿತ ಗುಡುಗು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಂಗಳೂರು (ಜೂ.17) ಕರಾವಳಿಯಲ್ಲಿ ಶುಕ್ರವಾರ ಮುಂಗಾರು ದುರ್ಬಲವಾಗಿದ್ದು, ಮುಂದಿನ ಒಂದು ವಾರ ಹೀಗೆಯೇ ಮುಂದುವರಿಯಲಿದೆ. ಶನಿವಾರ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಕಂಡುಬರಲಿದ್ದು, ಸಂಜೆ ಗಾಳಿ ಸಹಿತ ಗುಡುಗು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯಲ್ಲಿ ಜೂನ್‌ 21ರಿಂದ ಪುನಃ ಮುಂಗಾರು ಮಳೆ ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಮುಂದಿನ 24 ಘಂಟೆ ಕರಾವಳಿಯ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಗಾಳಿ ಆಗುವ ಸಾಧ್ಯತೆ ಇದೆ. ಶುಕ್ರವಾರ ಬೆಳಗ್ಗಿನಿಂದ ಆಗಾಗ ಮೋಡ ಕವಿದ ವಾತಾವರಣವಿದ್ದು, ದಿನಪೂರ್ತಿ ಬಿಸಿಲು ಸಹಿತ ಮೋಡ ಮುಂದುವರಿದಿತ್ತು. ಗ್ರಾಮಾಂತರ ಪ್ರದೇಶದಲ್ಲೂ ಅನೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣ ಇದ್ದರೂ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಬತ್ತಿದ ಅಂತರ್ಜಲ, ಮಳೆಯ ನಿರೀಕ್ಷೆಯಲ್ಲಿ ಬೀಜ ಬಿತ್ತಿ ದಿಕ್ಕು ತೋಚದಂತಾದ ಕೊಡಗಿನ ರೈತರು!

ಕಡಲ್ಕೊರೆತ ಇಳಿಮುಖ:

ಕರ್ನಾಟಕ ಕರಾವಳಿಯಲ್ಲಿ ಮುಂದಿನ 24 ಗಂಟೆಯಲ್ಲಿ ಬಿರುಗಾಳಿಯು ಗಂಟೆಗೆ 40 ಕಿ.ಮೀ ನಿಂದ 45 ಕಿಮೀ ವೇಗದಲ್ಲಿ ಬೀಸುವ ಸಂಭವ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಕಳೆದ 1 ವಾರದಿಂದ ಬಿಪೋರ್‌ ಜೋಯ್‌ ಚಂಡಮಾರುತದ ಪ್ರಭಾವದಿಂದ ಕಡಲಲೆಗಳ ಅಬ್ಬರ ತುಸು ಜೋರಾಗಿಯೇ ಇತ್ತು. ಗುರುವಾರ ರಾತ್ರಿ ಹಾಗೂ ಶುಕ್ರವಾರ ಕಡಲಬ್ಬರ ತುಸು ಇಳಿಕೆಯಾಗಿದೆ. ಕಡಲಲೆಗಳ ಅಬ್ಬರ ಇನ್ನೂ ಒಂದೆರಡು ದಿನಗಳ ಕಾಲ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ತಿಳಿಸಿದೆ.

ಬರಿದಾಗುತ್ತಿವೆ ಮಲೆನಾಡ ಜಲಾಶಯ!

ಹೊಸನಗರ: ಮುಂಗಾರು ಆರಂಭವಾಗಿ 15 ದಿನ ಕಳೆದರೂ ಇನ್ನೂ ಜಿಲ್ಲೆಗೆ ವರುಣ ಕೃಪೆ ತೋರಿಲ್ಲ. ಮುಂಗಾರು ಪೂರ್ವದಲ್ಲೂ ಮಳೆ ಕೊರತೆಯಾಗಿದ್ದು, ಜಿಲ್ಲೆಯ ಜಲಾಶಯಗಳಲ್ಲಿ ದಿನೇ ದಿನೇ ನೀರಿನಮಟ್ಟಕುಸಿಯುತ್ತಿದೆ. ನೀರಿನ ಕೊರತೆಯಿಂದಾಗಿ ಮಾಣಿ ವಿದ್ಯುತ್‌ಗಾರದಲ್ಲಿ ವಿದ್ಯುತ್‌ ಉತ್ಪಾದನೆ ಈಗಾಗಲೇ ಸ್ಥಗಿತವಾಗಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ವಾರಾಹಿ ಯೋಜನೆ ದೇಶದಲ್ಲೇ ವಿಶೇಷ ಎನಿಸಿಕೊಂಡಿದೆ. ಮಾಣಿ ಜಲಾಶಯ ಬಳಸಿಕೊಂಡು ಜಲ ವಿದ್ಯುತ್‌ ಉತ್ಪಾದನೆ ಬಳಿಕ ಅದೇ ನೀರು ಪಿಕಪ್‌ ಡ್ಯಾಂಗೆ ಹರಿದು ಸಂಗ್ರಹವಾಗುತ್ತದೆ.

ಬಿಪೊರ್‌ಜಾಯ್ ಚಂಡಮಾರುತಕ್ಕೆ ನಲುಗಿದ ಗ್ರಾಮ, 4 ದಿನದ ಕಂದನ ರಕ್ಷಿಸಿದ ಪೊಲೀಸ್!

ಮಾಣಿ ವಿದ್ಯುದಾಗಾರದಿಂದ ವಾರ್ಷಿಕ 9 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ಇಲ್ಲಿನ ಎರಡು ಘಟಕಗಳಿಂದ ಬೇಡಿಕೆ ಮೇರೆಗೆ ಕರ್ನಾಟಕ ವಿದ್ಯುತ್‌ ನಿಗಮ ವಿದ್ಯುತ್‌ ಉತ್ಪಾದಿಸಿ ಗ್ರಿಡ್‌ಗೆ ನೀಡುತ್ತದೆ. ನೀರು ಕಡಿಮೆಯಾಗುತ್ತಿದ್ದಂತೆ ಇಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸುವುದು ಸಾಮಾನ್ಯ. ಮತ್ತೆ ಮಳೆಯಾಗಿ ನೀರು ತುಂಬುತ್ತಿದ್ದಂತೆ ಉತ್ಪಾದನೆ ಪುನರಾರಂಭ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ