ಹಾಸನದಲ್ಲಿ ಭೂಕಂಪನ ಅನುಭವ: 2.3 ತೀವ್ರತೆ

Kannadaprabha News   | Asianet News
Published : Sep 18, 2021, 12:28 PM IST
ಹಾಸನದಲ್ಲಿ ಭೂಕಂಪನ ಅನುಭವ: 2.3 ತೀವ್ರತೆ

ಸಾರಾಂಶ

*  ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 2.3 ದಾಖಲು *  ಸಂಜೆ 5.20 ರ ಸುಮಾರಿನಲ್ಲಿ ಒಂದೆರಡು ಸೆಕೆಂಡುಗಳ ಕಾಲ ಕಂಪಿಸಿದ ಭೂಮಿ *  ಆತಂಕಕ್ಕೀಡಾಗಿ ಮನೆಯಿಂದ ಹೊರಗೆ ಬಂದ ಜನರು   

ಹಾಸನ(ಸೆ.18): ಜಿಲ್ಲೆಯ ಕೆಲವೆಡೆಗಳಲ್ಲಿ ಶುಕ್ರವಾರ ಸಂಜೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 2.3 ಇತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಹಳೇಬೀಡು, ಸಾಲಗಾಮೆ ಹೋಬಳಿಯ ಹಲವೆಡೆ ಸಂಜೆ 5.20 ರ ಸುಮಾರಿನಲ್ಲಿ ಒಂದೆರಡು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಹಾಗೆಯೇ ಹಾಸನ ನಗರದ ಶಾಂತಿನಗರ, ಹೇಮಾವತಿ ನಗರ, ತಮ್ಲಾಪುರ ಭಾಗಗಳಲ್ಲಿಯೂ ಲಘುವಾಗಿ ಭೂಮಿ ಕಂಪಿಸಿದ ಅನುಭವವಾಗಿದೆ. 

 ವಿಜಯಪುರದಲ್ಲಿ ಮತ್ತೆ ಭೂಮಿ ನಡುಗಿದ ಅನುಭವ..!

ಕಿಟಕಿಯ ಗಾಜುಗಳು ಹಾಗೂ ಶೋಕೇಸ್‌ನ ಗಾಜುಗಳು ಸಣ್ಣದಾಗಿ ಕಂಪಿಸಿದೆ. ಹಳೇಬೀಡಿನ ಕೆಲ ಭಾಗಗಳಲ್ಲಿ ಪಾತ್ರೆಗಳು ಬಿದ್ದಿದ್ದು, ಜನರು ಆತಂಕಕ್ಕೀಡಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. 
 

PREV
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ