* ಸಿಎಂ ಸೂಕ್ತ ಕ್ರಮ ಕೈಗೊಂಡು ದೇವಸ್ಥಾನ ಉಳಿಸಬೇಕು
* ಸಾರ್ವಜನಿಕರಿಗೆ ದೇವಸ್ಥಾನಗಳ ಮೇಲೆ ಭಾವನಾನತ್ಮಕ ಸಂಬಂಧ
* ಯಾವುದೇ ಕಾರಣಕ್ಕೂ ದೇವಾಲಯ ತೆರವು ಮಾಡುವುದು ಸರಿಯಲ್ಲ
ಮೈಸೂರು(ಸೆ.18): ಸಾರ್ವಜನಿಕರಿಗೆ ದೇವಸ್ಥಾನಗಳ ಮೇಲೆ ಭಾವನಾತ್ಮಕ ಸಂಬಂಧವಿದ್ದು, ಸಮಾಲೋಚನೆ ನಡೆಸದೆ ಏಕಾಏಕಿ ತೆರವುಗೊಳಿಸಿದ್ದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಯಡಿಯೂರಪ್ಪ ಅವರು ಶನಿವಾರ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ನಂಜನಗೂಡು ತಹಸೀಲ್ದಾರ್ ಮೋಹನಕುಮಾರಿ ಅವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಂಜನಗೂಡು ತಾಲೂಕು ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನ ನೆಲಸಮಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
undefined
ಮೈಸೂರಿನಲ್ಲಿ ದೇವಸ್ಥಾನ ತೆರವು ವಿವಾದ: ಕೊನೆಗೂ ಮೌನ ಮುರಿದ ಸಿಎಂ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ದೇವಾಲಯ ತೆರವು ಮಾಡುವುದು ಸರಿಯಲ್ಲ. ಈಗಾಗಲೇ ಮುಖ್ಯಮಂತ್ರಿಗಳು ತೆರವು ಮಾಡದಂತೆ ಸೂಚನೆ ನೀಡಿದ್ದಾರೆ. ದೇವಾಲಯ ಧ್ವಂಸ ಮಾಡದಂತೆ ನಾನೂ ಸಹ ಆಗ್ರಹ ಮಾಡುತ್ತೇನೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಸಾರ್ವಜನಿಕರಿಗೆ ದೇವಸ್ಥಾನಗಳ ಮೇಲೆ ಭಾವನಾನತ್ಮಕ ಸಂಬಂಧವಿದ್ದು, ಸಮಾಲೋಚನೆ ನಡೆಸದೆ ಏಕಾಏಕಿ ತೆರವುಗೊಳಿಸಿದ್ದು ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಂಡು ದೇವಸ್ಥಾನ ಉಳಿಸಬೇಕು. ಸಾರ್ವಜನಿಕರಿಗೆ ದೇವಸ್ಥಾನಗಳ ಮೇಲೆ ನಂಬಿಕೆ, ಭಕ್ತಿ ಇದೆ. ಸರ್ಕಾರ ಅವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ದೇಗುಲಗಳನ್ನು ತೆರವುಗೊಳಿಸುವ ಮುನ್ನ ಜನಪ್ರತಿನಿಧಿಗಳು, ಸ್ಥಳೀಯರೊಂದಿಗೆ ಚರ್ಚಿಸಬೇಕಿತ್ತು. ಈ ರೀತಿ ಏಕಾಏಕಿ ನೆಲಸಮಗೊಳಿಸಿದ್ದು ಸರಿಯಲ್ಲ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ತೆರವುಗೊಳಿಸದಂತೆ ಸೂಚನೆ ನೀಡಿದ್ದಾರೆ. ನಾನೂ ಸಹ ಯಾವುದೇ ಕಾರಣಕ್ಕೂ ದೇಗುಲ ತೆರವು ಮಾಡದಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.