ಸಿಸ್ಮೋ ಮೀಟರ್ ಅಳವಡಿಕೆ ಮಾಡಿದ ತಂಡ, ಭೂಕಂಪನದಿಂದ ಯಾವುದೆ ಅಪಾಯವಿಲ್ಲ ಎಂದ ವಿಜ್ಞಾನಿಗಳು
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಆ.27): ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನ ಮುಂದುವರೆದಿದೆ. ಬೆಂಗಳೂರಿನಿಂದ ವಿಜಯಪುರಕ್ಕೆ ಇಬ್ಬರು ವಿಜ್ಞಾನಿಗಳು ಅಧ್ಯಯನಕ್ಕಾಗಮಿಸಿ ಭೂಕಂಪಿಸಿದ ಗ್ರಾಮಗಳಿಗೆ ಭೇಟಿ ನೀಡಿ ಜನ್ರಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದ್ರು.
ಭೂ ವಿಜ್ಞಾನಿಗಳ ಬಂದಾಗಲೇ ಕಂಪಿಸಿದ ಭೂಮಿ
ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಭೂಕಂಪನಗಳ ಬಗ್ಗೆ ಅಧ್ಯಯನ, ಮೂಲ ಮತ್ತೆಗೆ ವಿಜ್ಞಾನಿಗಳು ಆಗಮಿಸಿದ್ದರು.. ರಾತ್ರಿಯೇ ಆಗಮಿಸಿದ ವಿಜ್ಞಾನಿಗಳು ಭೂಕಂಪನ ಅನುಭವವಾಗಿದೆ. ವಿಜ್ಞಾನಿಗಳಿಗೆ ಭೂಕಂಪನ ಕೇಂದ್ರಗಳ ಪರಿಶೀಲನೆಗೆ ತೆರಳಿದಾಗಲು ಸರಣಿ ರೀತಿಯಲ್ಲಿ ಭೂಕಂಪನ ಆಗಿದೆ. ಅಧ್ಯಯನ ನಡೆದ ಸಮಯದಲ್ಲೆ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದೆ.
ವಿಜಯಪುರ ನಗರ ಮತ್ತು ಸುತ್ತಮುತ್ತ ಮತ್ತೆ ಮರುಕಳಿಸಿದ ಭೂಕಂಪ!
ಒಂದೇ ದಿನ ನಾಲ್ಕು ಬಾರಿ ನಡುಗಿದ ಭೂಮಿ
ವಿಜಯಪುರ ಜಿಲ್ಲೆ ಆಗಸ್ಟ್ 26ರಂದು ನಾಲ್ಕು ಬಾರಿ ಭೂಮಿ ಕಂಪಿಸಿದೆ. ತಡರಾತ್ರಿ, ನಸುಕಿನ ಜಾವ, ಮುಂಜಾನೆ ಪುನಃ ಮಧ್ಯಾಹ್ನ ಭೂಕಂಪನ ಸಂಭವಿಸಿದೆ. ಒಂದೆ ದಿನ ನಾಲ್ಕು-ನಾಲ್ಕು ಬಾರಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ.. ಮುಂದೆ ಏನಾಗುತ್ತೋ ಭಯದಲ್ಲಿ ಜನರಿದ್ದಾರೆ.
ಭೂಕಂಪನ ಕೇಂದ್ರಗಳಿಗೆ ವಿಜ್ಞಾನಿಗಳ ಭೇಟಿ
ವೈಜ್ಞಾನಿಕ ಅಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಅಧಿಕಾರಿ ರಮೇಶ ತಿಪ್ಪಾಲ ಆಗಮಿಸಿ.ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಉಕ್ಕಲಿ ಗ್ರಾಮಕ್ಕೆ ತೆರಳಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ರು. ಉಕ್ಕಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಸಿಸ್ಮೋ ಮೀಟರ್ ಅಳವಡಿಸಿ, ನಿಗಾವಹಿಸಲು ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರಿಗೆ ಮುಂಜಾಗೃತಾ ಜಾಗೃತಿ ಮೂಢಿಸಿದ್ರು.ಜೊತೆಗೆ ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ರು.
ವಿಜಯಪುರದಲ್ಲಿ ಪದೇ ಪದೆ ಭೂಕಂಪನ: ಜಿಲ್ಲಾಧಿಕಾರಿ ದಾನಮ್ಮನವರ್ ಹೇಳಿದ್ದಿಷ್ಟು
ಜನರು ಭಯಗೊಳ್ಳಬಾರದು, ಅಧಿಕಾರಿಗಳಿಂದ ಜಾಗೃತಿ
ವಿಜಯಪುರ ಜಿಲ್ಲೆಯಲ್ಲಿ ಲಘು ಭೂಕಂಪನ ಆಗುತ್ತಿದೆ, ಯಾರೂ ಭಯಗೊಳ್ಳಬಾರದು.ವಾಡಿಕೆಗಿಂತ ಮಳೆ ಹೆಚ್ಚಾಗಿರೋದ್ರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯೋ ಭೂಕಂಪಿಸೋದು ಪ್ರಕ್ರಿಯೆಯಾಗಿದೆ.ಯಾರೂ ಆತಂಕಗೊಳ್ಳದೇ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ರು.
ಸದ್ಯದ ಭೂಕಂಪನದಿಂದ ಅಪಾಯವಿಲ್ಲ
ಈಗಾಗ್ತಿರೋ ಭೂಕಂಪನದಿಂದ ಯಾವುದೇ ಅಪಾಯವಿಲ್ಲ ಯಾರೂ ಭಯಗೊಳ್ಳಬಾರದು ಎಂದು ಜನರಲ್ಲಿ ಮನವಿ ಮಾಡಿದ್ರು. ವಿಜಯಪುರ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಯಿಸಿ,ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸುತ್ತಾರೆ ಅನ್ನೋದು ತಿಳಿದು ಬಂದಿದೆ.