
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಆ.26): ಕಾರು ಹಾಗೂ ಲಾರಿಯ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ದುರ್ಮರಣ ಆಗಿರುವ ಭೀಕರ ಅಪಘಾತ ಚಿತ್ರದುರ್ಗ ಹೊರವಲಯದಲ್ಲಿರುವ ಸಿಬಾರ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಬಳಿ ಇಂದು(ಶುಕ್ರವಾರ) ನಡೆದಿದೆ. ಸುಮಾರು ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದ್ದು ಕೂಡಲೇ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರೆಲ್ಲರೂ ಮೂಲತಃ ಬೆಂಗಳೂರು ಮೂಲದವರಾಗಿದ್ದು, ಎರಡು ದಿನಗಳ ಕಾಲ ಸರ್ಕಾರಿ ರಜೆ ಇರುವ ಕಾರಣ ಸ್ನೇಹಿತರೆಲ್ಲರೂ ಸೇರಿ ಶಿರಡಿ ಸಾಹಿಬಾಬಾನ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೆಂಗಳೂರಿನ ಮನೀಷ್, ಸಿಂಚನಾ, ಭೂಮಿಕಾ ಎಂದು ಮೃತರ ಗುರುತು ಪತ್ತೆ ಹಚ್ಚಲಾಗಿದೆ. ಅದ್ರಲ್ಲಿ ತುಂಬಾ ನೋವಿನ ಸಂಗತಿ ಏನಂದ್ರೆ, ಮನೀಷ್ ಹಾಗೂ ಸಿಂಚನ ದಂಪತಿಗಳಾಗಿದ್ದು, ಮೃತ ಭೂಮಿಕಾ ಕೂಡ ಮೃತ ಮನೀಷ್ ನ ಸಹೋದರಿ ಆಗಿರೋದೆ ದೊಡ್ಡ ದುರಂತವಾಗಿದೆ.
ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗಿದ್ದೇ ತಪ್ಪಾಯ್ತ!
ಇನ್ನೂ ಒಂದೇ ಕಾರಿನಲ್ಲಿ ಐವರು ಸಂಚಾರ ಮಾಡುತ್ತಿದ್ದು, ಇನ್ನುಳಿದ ಇಬ್ಬರು ಗಿರಿಧರ್ ಹಾಗೂ ಆಶಾ ಸ್ಥಿತಿ ಗಂಭೀರವಾಗಿದೆ. ಅದೇ ರೀತಿ ಕಾರು ಹೋಗಿ ಲಾರಿಗೆ ಡಿಕ್ಕಿ ಹೊಡೆದಿರೋ ರಭಸಕ್ಕೆ ಲಾರಿ ಚಾಲಕನ ಪರಿಸ್ಥಿತಿಯೂ ಗಂಭೀರವಾಗಿದ್ದು ಕೂಡಲೇ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ತೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣ ಏನು?
ಮೊದಲೇ ಹೇಳಿ ಕೇಳಿ ಬೆಂಗಳೂರಿನಿಂದ ಬರುವ ಎಲ್ಲಾ ವಾಹನಗಳ ವೇಗವೂ ಅತಿರೇಖಕ್ಕೆ ಹೋಗಿರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಅದ್ರಲ್ಲಂತೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವ ವಾಹನಗಳ ವೇಗವಂತೂ ಹೇಳತೀರದು. ಅದಕ್ಕೆ ಪೂರಕವೆಂಬಂತೆ ಇಂದು ನಡೆದ ಅಪಘಾತವೇ ಸಾಕ್ಷಿಯಾಗಿದೆ. ಬೆಂಗಳೂರಿನಿಂದ ಶಿರಡಿ ಕಡೆಗೆ ಪ್ರಯಾಣ ಮಾಡ್ತಿದ್ದ ಕಾರಿನಲ್ಲಿದ್ದವರು, ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದಿಂದಾಗಿ ಅತಿವೇಗ ಇದ್ದಿದ್ರಿಂದ ಕಾರು ಕಂಟ್ರೋಲ್ ಗೆ ಸಿಗದೇ ಎದುರಗಡೆಯಿಂದ opposite ಆಗಿ ಬರ್ತಿದ್ದ ಲಾರಿಗೆ ಕಾರಿನವರೇ ಹೋಗಿ ರಭಸವಾಗಿ ಡಿಕ್ಕಿ ಹೊಡೆದಿರೋ ಪರಿಣಾಮ ಕಾರಿನಲ್ಲಿದ್ದ ಐವರಲ್ಲಿ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂತಾರೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್.
ಒಟ್ಟಾರೆ ಅದೇನೆ ಇರ್ಲಿ ಒಂದೇ ಕುಟುಂಬದ ದಂಪತಿ ಹಾಗೂ ಸಹೋದರಿ ಸ್ಥಳದಲ್ಲೇ ಮೃತಪಟ್ಟಿದ್ದು ನಿಜಕ್ಕೂ ಘೋರ ದುರಂತವೇ ಸರಿ. ಆದ್ದರಿಂದ ದಯಮಾಡಿ ಪೊಲೀಸ್ ಇಲಾಖೆಯವರು ಇನ್ನಾದ್ರು ಎಚ್ಚತ್ತುಕ್ಕೊಂಡು ಹೆದ್ದಾರಿಗಳಲ್ಲಿ ಇರುವ ಬ್ಲಾಕ್ ಸ್ಪಾಟ್ ಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಅಪಘಾತಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.