ಕೋಲಾರ: ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಆಗ್ರಹ, ಶಾಸಕಿ ರೂಪಕಲಾ ಪಾದಯಾತ್ರೆ

By Girish Goudar  |  First Published Aug 27, 2022, 4:30 AM IST

ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡುವಂತೆ ಆಗ್ರಹಿಸಿ ವಿಧಾನಸೌಧ ಚಲೋ ಮಾಡುವುದಾಗಿ ಕೆಜಿಎಫ್ ಶಾಸಕಿ ರೂಪಕಲಾ ಘೋಷಣೆ 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಆ.27):  ಈಗ ಕಾಂಗ್ರೆಸ್ ಪಕ್ಷದಲ್ಲಿ ಪಾದಯಾತ್ರೆಗಳ ಪರ್ವ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ದಕ್ಷಿಣದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ತಯಾರಿ ನಡಸಿದ್ದಾರೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಸ್ವಾತಂತ್ರ್ಯ ನಡಿಗೆ, ನಂತರ ಎಲ್ಲ ಕ್ಷೇತ್ರಗಳಲ್ಲಿ ಹಾಲಿ ಮಾಜಿ ಶಾಸಕರು, ಸಂಸದರು ತಮ್ಮ ಪಕ್ಷದ ವತಿಯಿಂದ ಪಾದಯಾತ್ರೆ ಮಾಡಿದ್ದೂ ಆಗಿದೆ. ಇದೀಗ ಕೆಜಿಎಫ್ ಕಾಂಗ್ರೆಸ್ ಶಾಸಕಿ ಸರದಿ, ಅದ್ಯಾಕೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ವಿವರ.

Tap to resize

Latest Videos

ಹೌದು, ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡುವಂತೆ ಆಗ್ರಹಿಸಿ ವಿಧಾನಸೌಧ ಚಲೋ ಮಾಡುವುದಾಗಿ ಕೆಜಿಎಫ್ ನ ಶಾಸಕಿ ರೂಪಕಲಾ ಘೋಷಿಸಿದ್ದಾರೆ. ಮಾಜಿ ಸಂಸದ ಮುನಿಯಪ್ಪ ಪುತ್ರಿಯಾದ ರೂಪಕಲಾ ಶಶಿಧರ್ ಇದೀಗ ತಮ್ಮದೇ ಶೈಲಿಯ ರಾಜಕಿಯಕ್ಕೆ ಮುನ್ನುಡಿ ಹಾಕಿದ್ದಾರೆ. ಕಳೆದ ಭಾರಿ ಸಂಸದರ ಮಗಳಾಗಿ ಚುನಾವಣೆ ಸ್ಪರ್ಧಿ ಸಿದ್ದ ರೂಪಕಲಾ ಈ ಭಾರಿ ಚುನಾವಣೆಗೂ ಮುನ್ನ ಹೋಂ ವರ್ಕ್ ಮಾಡಿದಂತಿದೆ.ಸ್ಥಳೀಯ ಶಾಸಕಿಯಾಗಿ ಅಲ್ಲಿಯ ಗಣಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕಿದ್ದು ಪಾದಯಾತ್ರೆಯನ್ನು ಆಯ್ಕೆ ಮಾಡಿಕೊಂಡಂತಿದೆ.ಮುಂದಿನ ವಿಧಾನಸಭೆ ಅಧಿವೇಶನದ ಒಳಗೆ ಕೆಜಿಎಫ್‌ನಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡದೆ ಇದ್ದಲ್ಲಿ ಸರ್ಕಾರ ಅನುಮತಿ ನೀಡದಿದ್ದರೆ ವಿಧಾನಸೌಧ ಚಲೋ ಮಾಡುವುದಾಗಿ ಹೇಳಿದ್ದಾರೆ. 

ಆಜಾದ್‌ ಬೆನ್ನಲ್ಲೇ ಪಕ್ಷ ತೊರೆಯುವ ಸಾಧ್ಯತೆ: ಸುಧಾಕರ್‌ ಭೇಟಿ ಮಾಡಿದ ಮುನಿಯಪ್ಪ

ಮುಂದಿನ‌ ವಿಧಾನಸಭೆ ಅಧಿವೇಶನದ ಒಳಗಾಗಿ ಕೆಜಿಎಫ್ ನಲ್ಲಿ ಉದ್ಯೋಗ ಸೃಷ್ಟಿಯಾಗಬೇಕು.ನಗರದಲ್ಲಿರುವ ಮಾಜಿ ಗಣಿ‌ಕಾರ್ಮಿಕರಿಗೆ ಮನೆಗಳ ಸಮಸ್ಯೆ ಪರಿಹಾರ ಬೇಕು.ನಗರದಲ್ಲಿಯೇ ಇರುವ ಸಾವಿರಾರು ಎಕರೆ ಭೂಮಿಯಲ್ಲಿ ಕೈಗಾರಿಕೆಗಳು ಬರಬೇಕು ಎನ್ನೋದು ಶಾಸಕಿಯ ಬೇಡಿಕೆಗಳು.ಇನ್ನು ಮುಂದಿನ ಅಧಿವೇಶನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪ ಮಾಡುತ್ತೇನೆ. ಯಾವುದೇ ತೀರ್ಮಾನ ಕೊಡದೆ ಇದ್ದರೆ ಕೆಜಿಎಫ್‌ನಿಂದ ಸಾವಿರಾರು ಜನರೊಟ್ಟಿಗೆ ವಿಧಾನಸೌಧದವರೆಗೆ ಪಾದಯಾತ್ರೆ ಮಾಡುತ್ತೇನೆ ಎಂದು ರೂಪಕಲಾ ಘೋಷಣೆ ಮಾಡಿದ್ದಾರೆ.ಇದಕ್ಕೆ ಈಗಾಗಲೆ ಸ್ಥಳೀಯ ನಾಯಕರಿಂದಲೂ ಕೂಡ ಬೆಂಬಲ ವ್ಯಕ್ತವಾಗಿದೆ. ಕೆಜಿಎಫ್‌ನಲ್ಲಿ 965 ಎಕರೆ ಸರ್ಕಾರಿ ಭೂಮಿ ಕೈಗಾರಿಕೆಗಾಗಿ ಮೀಸಲಿರಿಸಿದೆ. ಸರ್ಕಾರದ ಮಾಲಿಕತ್ವದ ಸಾವಿರಾರು ಕೋಟಿ ರೂಪಾಯಿ ಭೂಮಿ ಇದ್ದರೂ ಕೈಗಾರಿಕಾ ವಲಯ ಸ್ಥಾಪನೆಗೆ ಆಸಕ್ತಿ ತೋರುತ್ತಿಲ್ಲ ,ಬೇರೆ ಕಡೆ ಭೂಮಿ ಖರೀದಿಸಿದರೆ ಇವರಿಗೆ ಕಮೀಷನ್ ಸಿಗುತ್ತೆ.ಮತ್ತು ಸರ್ಕಾರದ ಹಣದಲ್ಲಿ ಭೂಮಿ ಖರೀದಿ ಮಾಡಬೇಕಾದ್ರೆ ಅದರಲ್ಲಿಯೂ ಕಮೀಷನ್ ಹೊಡೆಯಬೇಕಿದೆ.ಅದಕ್ಕಾಗಿ ಕೆಜಿಎಫ್ ನಲ್ಲಿ ಇರಯವ ಭೂಮಿಯನ್ನು ಬಳಸುತಿಲ್ಲ. ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ನೇರವಾಗಿ  ಆರೋಪಿಸಿದ್ದಾರೆ. ಅಲ್ಲದೆ ಚಿನ್ನದ ಗಣಿ ಕಾರ್ಮಿಕರ ಮಕ್ಕಳು ಸಾವಿರಾರು ಜನ ನಿತ್ಯ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದು, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೈಗಾರಿಕಾ ವಲಯ ಸ್ಥಾಪಿಸುವಂತೆಯೂ ಕೆಜಿಎಫ್ ನಲ್ಲಿರುವ ಜನರ ಆಗ್ರಹವೂ ಆಗಿದೆ.

ಏನೇ ಆಗಲಿ ಕೆಜಿಎಫ್ ಅಂದ್ರೆ ಅದು ಸದಾ ಸುದ್ದಿಯಲ್ಲಿರುವ ನಗರ.ತನ್ನ ಒಡಲನ್ನೆ ಬಗೆದು ಪ್ರಪಂಚಕ್ಕೆ ಚಿನ್ನ ನೀಡಿದ ಭೂಮಿ‌ ಇದು.ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಗಾರಿಕಾ ಸಚಿವರು ಕೆಜಿಎಫ್ ಭೇಟಿ ನೀಡಿ ನೂತನವಾಗಿ ಕೈಗಾರಿಕಾ ವಲಯ ಸ್ಥಾಪನೆ ಕುರಿತು ಆಶ್ವಾಸನೆ ನೀಡಿದ್ದು ಬಿಟ್ಟರೆ ಇನ್ನೇನೂ ಆಗಿಲ್ಲ.ಈಗ ಸ್ಥಳೀಯ ಶಾಸಕಿ ಅದೇ ಹೆಸರಿನಲ್ಲಿ ಪಾದಯಾತ್ರೆಗೆ ಮುಂದಾಗಿದ್ದಾರೆ. ಎಲ್ಲರೂ ರಾಜಕೀಯ ಪಕ್ಷಕ್ಕಿಟ್ಟು ಕೆಜಿಎಫ್ ನ ಜನರ ನೈಜ ಸಮಸ್ಯೆಗಳಿಗೆ,ಮಾಜಿ ಗಣಿ ಕಾರ್ಮಿಕರಿಗೆ, ಹಾಲಿ‌ ನಿರುದ್ಯೂಗಿಗಳಿಗೆ  ನಿಜಮನಸ್ಸಿನಿಂದ  ಸ್ಪಂದಿಸಬೇಕಿದೆ.
 

click me!