ಗಣ​ಪತಿ ಆತ್ಮ​ಹ​ತ್ಯೆ: ವರದಿ ನೋಡಿ ಮುಂದಿನ ನಿರ್ಧಾ​ರ

By Kannadaprabha News  |  First Published Nov 22, 2019, 12:34 PM IST

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು ಈ ವರ​ದಿ​ಯನ್ನು ಪರಿ​ಶೀ​ಲಿಸಿ ಮುಂದಿನ ನಿರ್ಧಾ​ರಕ್ಕೆ ಬರು​ವು​ದಾಗಿ ಗಣಪತಿ ಸಹೋದರ ಮಾಚಯ್ಯ ಪ್ರತಿ​ಕ್ರಿ​ಯಿ​ಸಿ​ದ್ದಾರೆ.


ಮಡಿ​ಕೇ​ರಿ(ನ.22): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಿದ್ದು ಈ ವರ​ದಿ​ಯನ್ನು ಪರಿ​ಶೀ​ಲಿಸಿ ಮುಂದಿನ ನಿರ್ಧಾ​ರಕ್ಕೆ ಬರು​ವು​ದಾಗಿ ಗಣಪತಿ ಸಹೋದರ ಮಾಚಯ್ಯ ಪ್ರತಿ​ಕ್ರಿ​ಯಿ​ಸಿ​ದ್ದಾರೆ.

ಸಿಬಿಐ ನ್ಯಾಯಾ​ಲ​ಯಕ್ಕೆ ಬಿ ವರದಿಯನ್ನು ಸಲ್ಲಿಸಿದೆ ಎಂದು ಮಾಧ್ಯಮದಲ್ಲಿ ವರದಿ ಬಂದಿದೆ. ಆದರೆ ನಮಗೆ ಇನ್ನೂ ಸಿಬಿಐ ವರದಿ ದೊರಕಿಲ್ಲ. ನಾಲ್ಕೈದು ದಿನ​ಗ​ಳಲ್ಲಿ ವರದಿ ಕೈಗೆ ಸಿಗುವ ಸಾಧ್ಯತೆಯಿದೆ. ಸಿಬಿಐ ನೀಡಿರುವ 262 ಪುಟಗಳ ವರದಿಯನ್ನು ನೋಡಿ ಮತ್ತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವ​ರು ಹೇಳಿದ್ದಾರೆ.

Tap to resize

Latest Videos

ರಾಜ್ಯದಲ್ಲಿ 31 ಮತ್ಸ್ಯ ದರ್ಶಿನಿ ಹೋಟೆಲ್, ಮಲ್ಪೆಗೆ ಬರಲಿದೆ ತೇಲುವ ಜೆಟ್ಟಿ..!

ಪ್ರಕರಣ ಹಿನ್ನೆಲೆ:

ಡಿವೈ​ಎಸ್‌ಪಿ ಎಂ.ಕೆ. ಗಣಪತಿ 2016ರ ಜು.7ರಂದು ಮಡಿಕೇರಿಯ ವಿನಾಯಕ ಲಾಡ್ಜ್‌ನಲ್ಲಿ ನಿಗೂಢವಾಗಿ ಮೃತಪ​ಟ್ಟಿ​ದ್ದರು. ಸಾವಿಗೂ ಮುನ್ನ ಸಚಿವ ಕೆ.ಜೆ. ಜಾಜ್‌ರ್‍ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳಾದ ಎ.ಎಂ. ಪ್ರಸಾದ್‌, ಪ್ರಣವ್‌ ಮೊಹಂತಿ ತನ್ನ ಸಾವಿ​ಗೆ ಕಾರಣ ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು.

ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು 2016ರ ಜು.8ರಂದು ಸಿಐಡಿಗೆ ವಹಿಸಿತ್ತು. ಜು.18ರಂದು ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯದಿಂದ ಸಚಿವ ಜಾಜ್‌ರ್‍ ಹಾಗೂ ಇಬ್ಬರು ಪೊಲೀಸ್‌ ಅಧಿ​ಕಾ​ರಿ​ಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು. ಎಫ್‌ಐಆರ್‌ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಜಾಜ್‌ರ್‍ ರಾಜೀನಾಮೆ ನೀಡಿದ್ದರು.

ಸಿಐಡಿ ಕೂಡ ಬಿ ವರದಿ:

ಸಿಐಡಿ ತಂಡ ಪೂರ್ಣ ತನಿಖೆಯ ನಂತರ 2016ರ ಸೆ.17ರಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಿ ವರದಿ ನೀಡಿತ್ತು. ಇದರಿಂದ ಸಚಿವ ಕೆ.ಜೆ. ಜಾಜ್‌ರ್‍ ಹಾಗೂ ಇಬ್ಬರು ಹಿರಿಯ ಪೊಲೀಸ್‌ ಅಧಿ​ಕಾ​ರಿ​ಗ​ಳಿಗೆ ಕ್ಲೀನ್‌ ಚಿಟ್‌ ದೊರ​ಕಿ​ತ್ತು.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ಇದರಿಂದ ಅಸಮಾಧಾನಗೊಂಡ ಗಣಪತಿ ಕುಟುಂಬಸ್ಥರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ವೇಳೆ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿತ್ತು. ನಂತರ ಗಣಪತಿ ಕುಟುಂಬಸ್ಥರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ 2017 ಸೆ.5ರಂದು ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಅದರಂತೆ ಹಂತ ಹಂತವಾಗಿ ತನಿಖೆ ನಡೆಸಿದ ಸಿಬಿಐ ತಂಡ ಅಂತಿಮವಾಗಿ ವರದಿಯನ್ನು ಅ.30ರಂದು ಮಡಿಕೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ ಪ್ರಕರಣದಲ್ಲಿ ಜನಪ್ರತಿನಿಧಿಯೊಬ್ಬರ ಹೆಸರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯವು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ವರದಿಯನ್ನು ವರ್ಗಾಯಿಸಿತ್ತು.

ಮೈಸೂರು: ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ, BJP ಕಾರ್ಯಕರ್ತನಿಂದ ಅವಮಾನ.

click me!