ಸಿದ್ದರಾಮಯ್ಯ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದ ಸಚಿವ

By Web Desk  |  First Published Nov 22, 2019, 12:27 PM IST

ಸಿದ್ದರಾಮಯ್ಯ ಮಾಡಿರುವ ಅನ್ಯಾಯ ಅಕ್ರಮದ ಬಗ್ಗೆ ಎಂಟಿಬಿ ನಾಗರಾಜ್, ಮುನಿರತ್ನ ಅವರಂತ ನಾಯರು ಹೇಳುತ್ತಾರೆ ಎಂದ ಶ್ರೀರಾಮುಲು| ಸಿದ್ದರಾಮಯ್ಯಗೆ ರಾಜಕಾರಣದಲ್ಲಿ ಶಕ್ತಿ ಇಲ್ಲ| ನಾಯಕರನ್ನು ತುಳಿದೇ ಬೆಳೆಯೋ ನಾಯಕ ಸಿದ್ದರಾಮಯ್ಯ| ಸಿದ್ದರಾಮಯ್ಯ ಮೊದಲಿನಿಂದಲೂ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ| 


ಬಳ್ಳಾರಿ(ನ.22):‌ ಶ್ರೀರಾಮುಲುವನ್ನು ಪೆದ್ದ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಬಾ ಬುದ್ದಿವಂತರಾಗಿದ್ದಾರೆ. ಯಾಕಂದ್ರೇ ಅವರ ಅವಧಿಯಲ್ಲಿ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಮಾಡಿರುವ ಅನ್ಯಾಯ ಅಕ್ರಮದ ಬಗ್ಗೆ ಎಂಟಿಬಿ ನಾಗರಾಜ್, ಮುನಿರತ್ನ ಅವರಂತ ನಾಯರು ಹೇಳುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದ್ದಾರೆ. 

ಶುಕ್ರವಾರ ಜಿಲ್ಲೆಯ ವಿಜಯನಗರದ ಉಪಚುನಾವಣೆಯ ಪ್ರಚಾರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ಬೆಳೆಸಿದವರನ್ನು ತುಳಿದಿದ್ದಾರೆ. ಅಹಿಂದ ಎನ್ನುವ ಮೂಲಕ ಹಲವು ನಾಯಕರನ್ನು ತುಳಿದಿದ್ದಾರೆ. ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ. ಹೆಚ್. ಮುನಿಯಪ್ಪ, ಪರಮೇಶ್ವರ ಅವರಂತವರನ್ನ ತುಳಿದಿದ್ದಾರೆ. ದೊಡ್ಡ ನಾಯಕರನ್ನು ತುಳಿಯೋವಷ್ಟು ಬುದ್ದಿವಂತ ನಾನಲ್ಲ.ಸಿದ್ದರಾಮಯ್ಯ ದೃಷ್ಟಿಯಲ್ಲಿ ನಾನು ದಡ್ಡನೇ ಎಂದು ಹೇಳಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿದ್ದರಾಮಯ್ಯಗೆ ರಾಜಕಾರಣದಲ್ಲಿ ಶಕ್ತಿ ಇಲ್ಲ. ನಾಯಕರನ್ನು ತುಳಿದೇ ಬೆಳೆಯೋ ನಾಯಕ ಸಿದ್ದರಾಮಯ್ಯ ಆಗಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ಇಲ್ಲಾಂದ್ರೇ ಸಣ್ಣವರಾಗ್ತಾರೆ. ಸಿದ್ದರಾಮಯ್ಯ ಮೊದಲಿನಿಂದಲೂ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ನಮ್ಮ ಮಾತುಗಳು ನಮ್ಮ ನಮ್ಮ ಜನಾಂಗದವರಿಗೆ ಸಂದೇಶವಾಗಬಾರದು‌ ಎಂದು ತಿಳಿಸಿದ್ದಾರೆ. 

ಇದು ಶ್ರೀರಾಮುಲು ವರ್ಸಸ್ ಸಿದ್ದರಾಮಯ್ಯ ಆಗಬೇಕು ಹೊರತು ಕುರುಬ ಮತ್ತು ನಾಯಕ ಸಮುದಾಯದ ಮಧ್ಯೆ ಜಗಳವಾಗಬಾರದು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಒಂಟಿಯಾಗಿ ದುರಂಹಕಾರದ ಮಾತುಗಳನ್ನು ಆಡುತ್ತಿದ್ದಾರೆ. ನಮ್ಮಂತವರಿಗೆ ಸಿದ್ದರಾಮಯ್ಯ ರೋಲ್ ಮಾಡೆಲ್ ಆಗಬೇಕು. ಅದು ಬಿಟ್ಟು ನನ್ನನ್ನು ಟಿಕೆ ಮಾಡಿ ಸಣ್ಣವರಾಗ್ತಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 
 

click me!