ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.ಈ ಮೂಲಕ ರಾಣೆಬೆನ್ನೂರು ಜನ ಹಿಂದೂ-ಮುಸ್ಲಿಮರ ಸೌಹಾರ್ದತೆ ಮೆರೆದಿದ್ದಾರೆ.
ಹಾವೇರಿ (ಸೆ.5) : ದೇಶದಲ್ಲಿ ರಾಜಕಾರಣಕ್ಕಾಗಿ ಧರ್ಮ- ಜಾತಿಗಳ ನಡುವೆ ಸಂಘರ್ಷ ಎಬ್ಬಿಸಿ ಮೈ ಚಳಿ ಕಾಯಿಸಿಕೊಳ್ಳುವ ನೀಚ ಕೆಲಸ ಹಿಂದಿನಿಂದಲೂ ನಡೆದೇ ಇದೆ. ಸದ್ಯದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಕರ್ನಾಟಕದ ಕರಾವಳಿಯಲ್ಲಿ ಯಾರೂ ಊಹಿಸದ ಧರ್ಮ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆದರೆ ಸಂತ ಶರಣರ ನಾಡು, ನವಾಬರು, ಸೂಫಿ ಸಂತರು ನಡೆದಾಡಿದ ಉತ್ತರ ಕರ್ನಾಟಕ ಕೋಮು ಸೌಹಾರ್ದತೆ ಮೆರೆಯೋದ್ರಲ್ಲಿ ಎತ್ತಿದ ಕೈ.
ಗಣಪತಿ ಭಕ್ತ PSI ಆರೀಫ್ ಮುಶಾಪುರಿಗೆ ಹನುಮಂತ ಎಂದರೆ ಅಚ್ಚುಮೆಚ್ಚು..!
undefined
ಗಣಪತಿ ವಿಸರ್ಜನೆ ವೇಳೆ ಮುಸ್ಲಿಂ(Muslim) ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ(DJ) ಬಂದ್ ಮಾಡಿದ ಘಟನೆ ಹಾವೇರಿ(Haveri) ಜಿಲ್ಲೆ ರಾಣೆಬೆನ್ನೂರು*(Ranebennuru) ನಗರದಲ್ಲಿ ನಡೆದಿದೆ.ಈ ಮೂಲಕ ರಾಣೆಬೆನ್ನೂರು ಜನ ಹಿಂದೂ-ಮುಸ್ಲಿಮರ ಸೌಹಾರ್ದತೆ ಮೆರೆದಿದ್ದಾರೆ.
ಗಜಾನನ ಯುವಕ ಮಂಡಳಿಯ ಸದಸ್ಯರು ಉಮಾಶಂಕರ ನಗರ(Umashankar Nagar)ದಲ್ಲಿ ಗಣೇಶ ಮೂರ್ತಿ ಕೂರಿಸಿದ್ದರು. ಸಂಪ್ರದಾಯದ ಪ್ರಕಾರ ಗಣೇಶ ಕೂರಿಸಿ 5 ದಿನಕ್ಕೆ ಅಂದರೆ ನಿನ್ನೆ ರಾತ್ರಿ ಗಣಪತಿ ವಿಸರ್ಜನೆ ಮಾಡಲು ಹೊರಟಿದ್ದಾರೆ.ಗಣೇಶ ವಿಸರ್ಜನೆಯ ಮೆರವಣಿಗೆ ಎಂ.ಜಿ ರೋಡ್(M.G.Road) ಗೆ ಬಂದಾಗ ಅದೇ ಮಾರ್ಗದಲ್ಲಿ ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರವನ್ನು ಖಬರಸ್ತಾನ ಕಡೆಗೆ ಹೊತ್ತೊಯ್ಯುತ್ತಿದ್ದರು. ಈ ವೇಳೆ ಇಡೀ ಗಣೇಶ ವಿಸರ್ಜನೆ ಮೆರವಣಿಗೆ ನಿಲ್ಲಿಸಿ ಡಿಜೆ ಆಫ್ ಮಾಡಿ ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ಅನುವು ಮಾಡಿಕೊಟ್ಟಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ, ಸೌಹಾರ್ದತೆ ಸಾರಿದ ಬಪ್ಪನಾಡು ದೇವಸ್ಥಾನ ಮಂಡಳಿ
ಸಾವಿನ ಕೊನೆಯ ಮೆರವಣಿಗೆಗೆ ದಾರಿ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮುಸ್ಲಿಂ ವ್ಯಕ್ತಿಯ ಪಾರ್ಥಿವ ಶರೀರ ಮುಂದೆ ಸಾಗಿದ ಬಳಿಕ ಮತ್ತೆ ಗಣೇಶ ವಿಸರ್ಜನೆ ಮೆರವಣಿಗೆ ಪ್ರಾರಂಭಿಸಿದ್ದಾರೆ. ಇದು ಸದ್ಯ ರಾಣೆಬೆನ್ನೂರಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.