ನಗರದಲ್ಲಿ ಭಾರೀ ಮಳೆಯಾಗಿದ್ದು, ತಡರಾತ್ರಿಯಿಂದ ಬೆಳಗಿನವರೆಗೆ ನಿರಂತರ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಬಹುತೇಕ ನಗರಗಳು ಜಲಾವೃತಗೊಂಡಿದ್ದು,ಎಲ್ಲಿ ನೋಡಿದರೂ ನೀರು.. ನೀರು. ಇನ್ನೂ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ( ಸೆ.5): ನಗರದಲ್ಲಿ ಭಾರೀ ಮಳೆಯಾಗಿದ್ದು, ತಡರಾತ್ರಿಯಿಂದ ಬೆಳಗಿನವರೆಗೆ ನಿರಂತರ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಸಿದೆ. ಬಹುತೇಕ ನಗರಗಳು ಜಲಾವೃತಗೊಂಡಿದ್ದು,ಎಲ್ಲಿ ನೋಡಿದರೂ ನೀರು.. ನೀರು. ಇನ್ನೂ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(IMD) ತಿಳಿಸಿದೆ. ಬೆಂಗಳೂರು(Bengaluru), ದಕ್ಷಿಣ ಕನ್ನಡ(Dakshina Kannada), ಉಡುಪಿ,(Udupi) ಚಾಮರಾಜನಗರ(Chamarajanagar), ಚಿಕ್ಕಮಗಳೂರು(Chikkamagaluru), ಕೊಡುಗು(Kodagu) ರಾಮನಗರ(Ramanagar) ಸೇರಿದಂತೆ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿಂದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Heavy Rain in Bengaluru: ನಗರದಲ್ಲಿ ಮಳೆರಾಯನ ಆರ್ಭಟ: ಯೆಲ್ಲೋ ಅಲರ್ಟ್
ಬೆಂಗಳೂರಿನಲ್ಲಿ ಎಲ್ಲ ನಗರಗಳಲ್ಲಿ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಹತ್ತಕ್ಕೂ ಹೆಚ್ಚು ಕಡೆ ಮರಗಳು ಉರುಳಿಬಿದ್ದಿವೆ. ಸರ್ಜಪುರ ರಸ್ತೆಯ ರೈಂಬೋ ಲೇಔಟ್ ಸಂಪೂರ್ಣ ಜಲಾವೃತ. ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಏರಿಯಾ ಸಂಪೂರ್ಣ ಮುಳುಗಡೆ. ರೈಂಬೋ ಲೇಔಟ್ ಪಕ್ಕದಲ್ಲಿ ಇರುವ ಲೇಔಟ್ ನಲ್ಲಿ ಸುಮಾರು 100 ಹೆಚ್ಚು ಮನೆಗಳಿಗೆ ನೀರು... ಮನೆಗಳ ಮುಂದೆ ನಿಂತಿರುವ ವಾಹನಗಳು ನೀರಿನಲ್ಲಿ ಮುಳುಗಿವೆ. ಈ ಹಿಂದೆ ಸುರಿದಿದ್ದ ಮಳೆ ತತ್ತರಿಸಿ ಹೋಗಿದ್ದ ರೈನ್‌ಬೋ ಲೇಔಟ್ ಇದೀಗ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನರು ಹೈರಾಣಾಗಿದ್ದಾರೆ. ರೈಂಬೋ ಲೇಔಟ್ ಪಕ್ಕದಲ್ಲಿ ಇರುವ ಅಪಾರ್ಟ್ಮೆಂಟ್ ಬೇಸ್ ಮೆಂಟ್ ಗೂ ನೀರು ನುಗ್ಗಿ ಅವಾಂತರ. ಅಪಾರ್ಟ್‌ಮೆಂಟ್ ನಲ್ಲಿ ಜನರು ಹೊರಬರಲಾಗದೆ ಪರದಾಡುತ್ತಿದ್ದಾರೆ
ಇನ್ನೂ ಮೂರು ಗಂಟೆ ಭಾರಿ ಮಳೆ; ಮತ್ತಷ್ಟು ಅನಾಹುತ
ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಯ ಮೇಲೆ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆ ನೀರಿನ ಜತೆಗೆ ಕಾಲುವೆ ನೀರು ಸೇರಿಕೊಂಡು ರಸ್ತೆಮೇಲೆ ಹರಿದು ವಾಹನಗಳು ಹೋಗಲಾರದಂತಹ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ.
ಮಹದೇವಪುರ ಜಲಾವೃತ: ರಾತ್ರಿ ಸುರಿದ ಮಳೆಗೆ ಔಟರ್ ರಿಂಗ್ ಮತ್ತೇ ಜಲಾವೃತ. ಇಕೋಸ್ಪೇಸ್, ಪಣತ್ತೂರು ದೇವರಬಿಸಮಹಳ್ಳಿ ಮತ್ತು ಸರ್ಜಾಪುರ ರಸ್ತೆಗಳಲ್ಲಿ ಸಂಚರಿಸುತ್ತಿದ್ದವರು ಹೈರಾಣ. ಕಳೆದ ವಾರವಷ್ಟೇ ತತ್ತರಿಸಿದವರಿಗೆ ಮತ್ತೊಮ್ಮೆ ಶಾಕ್. ಇನ್ನೂ ಮೂರ್ನಾಲಕ್ಕು ದಿನಗಳ ಕಾಲ ಮಳೆ ಸಂಭವವಿರುವುದರಿಂದ ಆತಂಕಗೊಂಡಿರುವ ಜನ.
ಇನ್ನೂ ಮೂರು ದಿನ ಭಾರೀ ಮಳೆ ಮುನ್ಸೂಚನೆ : ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಕೊಪ್ಪಳ, ರಾಯಚೂರು, ಬಳ್ಳಾರಿ, ಬೆಂಗಳೂರು ಸಿಟಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು. ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿಗೆ ಮಳೆ ಅಲರ್ಟ್ ನೀಡಿದೆ.
ನಿರಂತರ ವರ್ಷಧಾರೆಗೆ ನಲುಗಿದ ಬೆಂಗಳೂರು: ಬೀದಿ ವ್ಯಾಪಾರಿಗಳು, ವಾಹನ ಸವಾರರ ಪರದಾಟ
ನೆಲಮಂಗಲ ಅಮಾನಿಕೆರೆ ಕೆರೆ ಕೋಡಿ ಬಿದ್ದು ರಾಷ್ಟ್ರೀಯ ಹೆದ್ದಾರಿಗೆ ನೀರು: ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ನೆಲಮಂಗಲದ ಅಮಾನಿಕೆರೆ ಹಾಗೂ ಬಿನ್ನಮಂಗಲದ ಕೆರೆಗಳು ಕೋಡಿ ಬಿದ್ದು, ರಾಷ್ಟ್ರೀಯ ಹೆದ್ದಾರಿಗೆ ನೀರು ಕೆರೆ ನೀರು ನುಗ್ಗಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಭಾರೀ ಅವಾಂತರ ಸೃಷ್ಟಿಯಾಗಿ ನೂರಾರು ವಾಹನಗಳು ಮಳೆಯ ನೀರಿನಲ್ಲಿ ಜಲಾವೃತಗೊಂಡಿವೆ. ನೆಲಮಂಗಲದ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಗೆ ನಿಂತ ಕೆರೆಯ ನೀರು. ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರ ಪರದಾಟ. ಕೆರೆಯ ನೀರು ನುಗ್ಗಿ ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ವಾಹನಗಳು ಸಾಲುಗಟ್ಟಿ ನಿಂತಿವೆ.