ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ಲಾಕ್‌ಡೌನ್ 33ನೇ ದಿನದಲ್ಲಿ ಮುಂದುವರಿಯಿತು. ಹಾಗೆಯೇ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಣೆ ಮಾಡಿದ ಕಾರಣ ಲಾಕ್‌ಡೌನ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆ ದಿನಸಿ ತರಕಾರಿ ಖರೀದಿಗೆ ಜನರ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬಂದಿದ್ದರು.
ಹಾಸನ(ಏ.26): ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ಲಾಕ್‌ಡೌನ್ 33ನೇ ದಿನದಲ್ಲಿ ಮುಂದುವರಿಯಿತು. ಹಾಗೆಯೇ ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಣೆ ಮಾಡಿದ ಕಾರಣ ಲಾಕ್‌ಡೌನ್ ನಿಯಮವನ್ನು ಸಡಿಲಿಕೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನಗಳ ಸಂಚಾರ ಬೆಳಗ್ಗೆಯಿಂದಲೇ ಹೆಚ್ಚಾಗಿತ್ತು. ಬೈಕ್‌ನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರು ಎಂಬ ನಿಯಮ ಅನೇಕ ಪಾಲನೆ ಮಾಡದೇ ಇರುವುದು ಕಂಡು ಬಂತು. ದಿನಸಿ ತರಕಾರಿ ಖರೀದಿಗೆ ಜನರ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬಂದಿದ್ದರು.
ಹೊರ ರಾಜ್ಯಕ್ಕೆ ದ್ರಾಕ್ಷಿ ಸಾಗಣೆಗೆ ಅನುಮತಿ
ತರಕಾರಿ, ಹಣ್ಣು, ಹೂ ಖರೀದಿ ವೇಳೆ ಸಾಮಾಜಿಕ ಅಂತರ ಮರೆಯಲಾಗಿತ್ತು. ಶನಿವಾರದಿಂದ ಬೆಳಗ್ಗೆ 6ರಿಂದ ಮಧ್ಯಾಹ್ನ 2 ರವರೆಗೆ ದಿನಸಿ ಮತ್ತಿತರ ಅಂಗಡಿ ತೆರೆಯಲು ಅವಕಾಶ ನೀಡಲಾಗಿದ್ದು, ಪೊಲೀಸರು, ಸ್ವಯಂ ಸೇವಕರು ಮೈಕ್‌ನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸಿ ಓಡಾಡಬೇಕು ಎಂದು ಪ್ರಚಾರ ಮಾಡಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲ ಕಾರ್ಖಾನೆಗಳು, ಸರ್ಕಾರಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಿದ್ದರಿಂದ ಅಲ್ಲಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಸಂಚಾರ ಕೊಂಚ ಹೆಚ್ಚಾಗಿತ್ತು. ಪೊಲೀಸರು ಎಂದಿನಂತೆ ಮಧ್ಯಾಹ್ನದವರೆಗೆ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಮಾಡಿದರು.
ಬಾರ್ ಇಲ್ಲದಿದ್ರೂ ಮದ್ಯಪ್ರಿಯರಿಗಿಲ್ಲ ಟೆನ್ಶನ್! ಇಲ್ಲಿ ಮನೆಯಲ್ಲೆ ರೆಡಿಯಾಗುತ್ತೆ!
ಎಂದಿನಂತೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದ ವಾಹನಗಳನ್ನು ತೀವ್ರ ತಪಾಸಣೆ ಮಾಡಲಾಯಿತು. ಸ್ಟೇಷನರಿ, ಕೊರಿಯರ್, ಗ್ಯಾರೇಜ್ ಗಳು ಅಲ್ಪ ಪ್ರಮಾಣದಲ್ಲಿ ತೆರೆದಿದ್ದರೂ ಜನ ಹೆಚ್ಚಿನ ಸಂಖ್ಯೆಯಲ್ಲೇನು ಬಂದಿರಲಿಲ್ಲ. ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳು ವ್ಯಾಪಾರ ನಡೆಸಿದವು. ಶನಿವಾರ 33ನೇ ದಿನದ ಲಾಕ್‌ಡೌನ್ ಪೂರ್ಣಗೊಂಡು, ಭಾನುವಾರ 34ನೇ ದಿನಕ್ಕೆ ಕಾಲಿರಿಸಲಿದೆ.
ನಿನ್ನೆ ಜಿಲ್ಲೆಯ ಸ್ಥಿತಿಗತಿ ಹೇಗಿತ್ತು?
ಹಾಸನ: ಕೊರೋನಾ ವೈರಸ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ಏ.25ರ ಅಂಕಿ-ಆಂಶ ಬಿಡುಗಡೆ ಮಾಡಿದ್ದಾರೆ. ಇದುವರೆಗೆ ಕೊರೋನಾ ಶಂಕಿತರೆಂದು 1437 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶೀತ, ನೆಗಡಿ, ಕೆಮ್ಮು ಇರುವ 926 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. 10 ದಿನಗಳಲ್ಲಿ ಜ್ವರ, ಕೆಮ್ಮು, ನೆಗಡಿ ಕಂಡುಬಂದಿರುವ 43 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. 256 ಗಂಟಲ ಶ್ರಾವವನ್ನು ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದೆ.
ರಂಜಾನ್ ಖರೀದಿ ಅಬ್ಬರದಲ್ಲಿ ಲಾಕ್‌ಡೌನ್ ಮರೆತ ಜನ, ಮಾರ್ಕೆಟ್ ಫುಲ್ ರಶ್
ಒಟ್ಟು ಹಾಲಿ 14 ದಿನಗಳ ವರೆಗಿರುವ 62 ಜನರನ್ನು ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ವಹಿಸಲಾಗಿದೆ. ಇದಲ್ಲದೇ, 14 ದಿನದಿಂದ 28 ದಿನಗಳ ವರೆಗಿರುವ 428 ಮಂದಿಯ ದೈನಂದಿನ ಆರೋಗ್ಯ ಮಾಹಿತಿ ಪಡೆಯಲಾಗುತ್ತಿದೆ. 38 ಜನ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 41 ಜನ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ಇದ್ದಾರೆ ಎಂದು ಡಿಸಿ ಆರ್. ಗಿರೀಶ್ ತಿಳಿಸಿದ್ದಾರೆ.