ಗ್ರೀನ್ ಝೋನ್ ಕೋಲಾರಕ್ಕೆ ಬಂತು ಕೊರೋನಾ ಭೀತಿ: ಜಿಲ್ಲೆಯ ಜನರಲ್ಲಿ ಢವ ಢವ..!

Suvarna News   | Asianet News
Published : May 09, 2020, 11:55 AM ISTUpdated : May 18, 2020, 05:57 PM IST
ಗ್ರೀನ್ ಝೋನ್ ಕೋಲಾರಕ್ಕೆ ಬಂತು ಕೊರೋನಾ ಭೀತಿ: ಜಿಲ್ಲೆಯ ಜನರಲ್ಲಿ ಢವ ಢವ..!

ಸಾರಾಂಶ

ಕೋಲಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಓಡಾಟ ನಡೆಸಿದ್ದ ಕೊರೋನಾ ಸೋಂಕಿತ| ಅಂಧ್ರದ ವೆಂಟಗಿರಿಕೋಟಾದಲ್ಲಿ 5 ಜನರಿಗೆ ಕೊರೋನಾ ಪಾಸಿಟಿವ್| ಕೊರೋನಾ ಸೋಂಕಿತನೊಬ್ಬನ ಟ್ರಾವಲ್‌ ಹಿಸ್ಟರಿ ಬಿಡುಗಡೆ|

ಕೋಲಾರ(ಮೇ.09): ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವೆಂಟಗಿರಿಕೋಟಾ ಪಟ್ಟಣ ಮೂಲದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಓಡಾಟ ನಡೆಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಜಿಲ್ಲೆಯ ಜನರ ಆತಂಕದಲ್ಲಿದ್ದಾರೆ. 

ಹೌದು, ನಿನ್ನೆ(ಶುಕ್ರವಾರ) ಯಷ್ಟೇ ಜಿಲ್ಲೆ ಗಡಿಭಾಗದ ಅಂಧ್ರದ ವೆಂಟಗಿರಿಕೋಟಾದಲ್ಲಿ 5 ಜನರಿಗೆ ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಕೊರೋನಾ ಸೋಂಕಿತನೊಬ್ಬನ ಟ್ರಾವಲ್‌ ಹಿಸ್ಟರಿ ಕಲೆಹಾಕಿದಾಗ ಈತ ಕೋಲಾರ ನಗರದ ಎಪಿಎಂಸಿಗೂ ಬಂದು ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಕೊರೋನಾ ಸೋಂಕಿತ ವ್ಯಕ್ತಿ ಎರಡು ದಿನಗಳ ಹಿಂದಷ್ಟೇ ಎಪಿಎಂಸಿ ಮಾರುಕಟ್ಟೆಯಲ್ಲಿ ಓಡಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೊರೋನಾ ಮಧ್ಯೆಯೂ ಹಿಂದೂ ಯುವಕನನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ರಾ..?

ಈ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿ ಮಾರುಕಟ್ಟೆಯ ಮಂಡಿ ಮಾಲೀಕರು, ರೈಟರ್ಸ್, ಕಾರ್ಮಿಕರು ಸೇರಿ 24 ಮಂದಿಯನ್ನ ಕರೆದೊಯ್ದಿದ್ದಾರೆ. ಸೋಂಕಿತರ ಟ್ರಾವೆಲ್ ಹಿಸ್ಟರಿ, ಪೋನ್ ಸಂಪರ್ಕ ಆಧರಿಸಿ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ಸಾಗಿದೆ. ಇವರೆಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ  ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ. 
 

PREV
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ