ಭೀಮಾ ತೀರದ ದಂಧೆ ಬಗ್ಗೆ ಬಿಚ್ಚಿಟ್ಟ ಶಾಸಕ

Kannadaprabha News   | Asianet News
Published : Sep 07, 2020, 10:10 AM ISTUpdated : Sep 07, 2020, 10:16 AM IST
ಭೀಮಾ ತೀರದ ದಂಧೆ ಬಗ್ಗೆ ಬಿಚ್ಚಿಟ್ಟ ಶಾಸಕ

ಸಾರಾಂಶ

ಭೀಮಾ ತೀರದಲ್ಲಿಯೂ ಭಾರೀ ದಂಧೆ ನಡೆಯುತ್ತಿದೆ ಹೀಗೆಂದು ಜೆಡಿಎಸ್ ಶಾಸಕರೋರ್ವರು ಮಾಹಿತಿ ಬಿಚ್ಚಿಟ್ಟಿದ್ದಾರೆ. 

ವಿಜಯಪುರ (ಸೆ.07) : ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗವಾಗಿರುವ ಭೀಮಾ ತೀರದಲ್ಲಿ ಮಾದಕ ದ್ರವ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ. ಈ ಜಾಲದಲ್ಲಿ ಪ್ರಭಾವಿಗಳು, ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಶಾಸಕ ಜೆಡಿಎಸ್‌ನ ಡಾ.ದೇವಾನಂದ ಚವ್ಹಾಣ ತಿಳಿಸಿದ್ದಾರೆ.

‘ವಿಜಯಪುರ ಜಿಲ್ಲೆ ಅದರಲ್ಲೂ ಭೀಮಾ ತೀರದಲ್ಲಿ ಮಾದಕ ದ್ರವ್ಯ ಮಾರಾಟ ಎಗ್ಗಿಲ್ಲದೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ನಿತ್ಯ ಸುಮಾರು .50 ಲಕ್ಷ ಮೌಲ್ಯದ ಮಾದಕ ದ್ರವ್ಯಗಳ ಮಾರಾಟ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

ಕಾರ್ಪೊರೇಟರ್‌ ಪುತ್ರಗೆ ಡ್ರಗ್ಸ್‌ ನಂಟು? ...

ಮಾವಾ, ಗಾಂಜಾ ಅಷ್ಟೇ ಅಲ್ಲದೆ ವಿವಿಧ ಬಗೆಯ ಮಾದಕ ದ್ರವ್ಯಗಳು ಮಹಾರಾಷ್ಟ್ರದಿಂದ ಸರಬರಾಜು ಆಗುತ್ತಿದೆ. ಮಹಾರಾಷ್ಟ್ರದಲ್ಲಿ ಗುಟ್ಕಾ, ಮಾವಾ ಮೊದಲಾದವುಗಳ ಮಾರಾಟಕ್ಕೆ ಅನುಮತಿ ಇದೆ. 

ಆದರೆ, ಕರ್ನಾಟಕದಲ್ಲಿ ಎಲ್ಲ ಬಗೆಯ ಮಾವಾ ಸಂಪೂರ್ಣ ಬ್ಯಾನ್‌ ಇದೆ. ಆದರೂ ಮಹಾರಾಷ್ಟ್ರದಿಂದ ಅಕ್ರಮವಾಗಿ ಪ್ರತಿದಿನ ಲಕ್ಷಾಂತರ ರು. ಮೌಲ್ಯದ ಮಾವಾ ಸೇರಿ ವಿವಿಧ ಮಾದಕ ದ್ರವ್ಯಗಳು ವಿಜಯಪುರ ಜಿಲ್ಲೆಯಲ್ಲಿ ಮಾರಾಟವಾಗುತ್ತಿವೆ ಎಂದು ಆರೋಪಿಸಿದರು.

PREV
click me!

Recommended Stories

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು
ಉಡುಪಿ: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ