ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರಿ ಮಳೆಯು ಕೈ ಹಿಡಿಯುವ ಯಾವ ಲಕ್ಷಣಗಳು ಕಾಣ್ತಿಲ್ಲ. ಇತ್ತ ಬರದ ನಾಡು ವಿಜಯಪುರದಲ್ಲಿ ಮಳೆ ಇಲ್ಲದೆ ಬಿತ್ತಿದ ಬೆಳೆ ಸಹ ಒಣಗಿ ಹೋಗ್ತಿದೆ. ಇತ್ತ ಕುಡಿಯುವ ನೀರಿಗು ಸಮಸ್ಯೆ ತಲೆದೋರುತ್ತಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಅ.16): ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರಿ ಮಳೆಯು ಕೈ ಹಿಡಿಯುವ ಯಾವ ಲಕ್ಷಣಗಳು ಕಾಣ್ತಿಲ್ಲ. ಇತ್ತ ಬರದ ನಾಡು ವಿಜಯಪುರದಲ್ಲಿ ಮಳೆ ಇಲ್ಲದೆ ಬಿತ್ತಿದ ಬೆಳೆ ಸಹ ಒಣಗಿ ಹೋಗ್ತಿದೆ. ಇತ್ತ ಕುಡಿಯುವ ನೀರಿಗು ಸಮಸ್ಯೆ ತಲೆದೋರುತ್ತಿದೆ. ಇದನ್ನರಿತ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತುರ್ತು ಸಭೆ ಕರೆದು ಸರಿಯಾದ ರೀತಿಯಲ್ಲಿ ಬರ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.
ವಿಜಯಪುರದಲ್ಲಿ ಬರ ತಾಂಡವ, ಉಸ್ತುವಾರಿ ಸಚಿವರ ತುರ್ತು ಸಭೆ: ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ತಿಕೋಟ ಹೊರತು ಪಡೆಸಿ ಜಿಲ್ಲೆಯ ಎಲ್ಲ ತಾಲೂಕುಗಳನ್ನ ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡಿದ್ದಾರೆ. ಈ ನಡುವೆ ಮುಂಗಾರು ಮಳೆ ಸಂಪೂರ್ಣ ವಿಫಲವಾಗಿದ್ದು, ಹಿಂಗಾರಿ ಮಳೆಯಾಗುವ ಯಾವ ಭರವಸೆಗಳು ಕೂಡ ಇಲ್ಲ. ಹೀಗಾಗಿ ಬರ ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ರು.
ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು: ಮುನಿರತ್ನಗೆ ತಿರುಗೇಟು ಕೊಟ್ಟ ಸಂಸದ ಸುರೇಶ್
ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಜಿಲ್ಲೆಯ ತಾಲೂಕು- -ಗ್ರಾಮ ಮಟ್ಟದಲ್ಲಿ ಜನರಿಗೆ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದಂತೆ ನೋಡುವಂತೆ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಯಾವುದೆ ಕಾರಣಕ್ಕು ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲೇ ಬಾರದು. ಜಾನುವಾರುಗಳಿಗು ಸಮರ್ಪಕ ಕುಡಿಯುವ ನೀರು ಸಿಗಬೇಕು ಎಂದಿದ್ದಾರೆ.
ಕಾಲುವೆ ನೀರು ದುರುಪಿಯೋಗವಾಗದಂತೆ ಎಚ್ಚರಿಕೆವಹಿಸಿ: ಜಿಲ್ಲೆಯಲ್ಲಿ ಮಳೆಯಾಗದೆ ಕೆರೆಗಳಿಗೆ ಸಮರ್ಪಕ ನೀರು ಲಭ್ಯವಾಗಿಲ್ಲ. ಕೆರೆಗಳು ಖಾಲಿಯಾಗಿ ಬೆಳೆಗೆ ನೀರಿಲ್ಲದೆ ರೈತರು ಒದ್ದಾಡುತ್ತಿದ್ದರು. ಹೀಗಾಗಿ ಕೆರೆ ತುಂಬುವ ಯೋಜನೆ ಅಡಿಯಲ್ಲಿ ಕೆರೆಗಳಿಗೆ ನೀರು ಹರಿಸಲಾಗಿತ್ತು. ಆದ್ರೆ ನೀರು ಕೆರೆ ಸೇರುವ ಮುನ್ನವೇ ಕಾಲುವೆಗಳನ್ನ ಒಡೆದು, ಕೆಲವರು ರಂಧ್ರ ಕೊರೆದು ನೀರು ಬಳಕೆ ಮಾಡಿಕೊಳ್ತಿದ್ರು. ಇದರಿಂದ ಮುಂದಿನ ಊರಿನ ರೈತರಿಗೆ ಅನ್ಯಾಯವಾಗ್ತಿತ್ತು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮುಂದೆ ಹೀಗಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಲುವೆಗೆ ಹರಿ ಬಿಡಲಾಗಿರುವ ನೀರು ದುರುಪಿಯೋಗವಾಗದೇ ರೈತರಿಗೆ ಸಿಗಬೇಕು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳುವಂತೆ ಹಾಗೂ ನೀರು ದುರುಪಯೋಗ ಪಡೆಸಿಕೊಳ್ಳುವವರ ಮೇಲೆ ಹದ್ದಿನ ಕಣ್ಣಿಡುವಂಗೆ ಸೂಚಿಸಿದ್ದಾರೆ.
ಎಚ್ಚರಿಕೆಯಿಂದ ಬರ ನಿರ್ವಹಣೆ ಮಾಡಿ: ಬರ ನಿರ್ವಹಣೆ, ಕುಡಿಯುವ ನೀರು ಒದಗಿಸುವಲ್ಲಿ ನಿರ್ಲಕ್ಷ್ಯವಹಿಸಿದ್ರೆ ಅಂತ ಅಧಿಕಾರಿಗಳಿಗೆ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದ್ರು.. ಇನ್ನು ಡ್ಯಾಂಗಳಲ್ಲಿ ನೀರಿನ ಸಂಗ್ರಹ, ಕೆರೆಗಳಿಗೆ ನೀರು ತುಂಬುವ ವಿಚಾರವಾಗಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲೆಯ 6 ಕಡೆಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ನೀಡಲಾಗ್ತಿದೆ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ರು.
ಸಭೆಯಲ್ಲಿ ರಾಜೀನಾಮೆ ನೀಡ್ತಿನಿ ಎಂದ ನಾಗಠಾಣ ಶಾಸಕ: ಈ ನಡುವೆ ವಿಜಯಪುರ ನಗರ ವ್ಯಾಪ್ತಿಯಲ್ಲಿರುವ ನಾಗಠಾಣ ಕ್ಷೇತ್ರ ಕೆಲ ವಾರ್ಡಗಳಿಗೆ ನೀರು ಸರಬರಾಜು ವಿಚಾರವಾಗಿ ಶಾಸಕ ವಿಠ್ಠಲ್ ಕಟಕದೊಂಡ ಅಧಿಕಾರಿಗಳ ಮೇಲೆ ಗರಂ ಆದ ಘಟನೆಯು ನಡೆಯಿತು. ಕಳೆದ 10 ರಿಂದ 15 ದಿನಗಳಿಂದ ಹಮಾಲ್ ಕಾಲೋನಿ ಸೇರಿ ಎರಡು ವಾರ್ಡ್‌ಗಳಲ್ಲಿ ನೀರು ಬರ್ತಿಲ್ಲ ಎಂದರು ಶಾಸಕ ಕಟಕದೊಂದ ದೂರಿದ್ರೆ ಇದನ್ನ ವಾಟರ್ ಬೋರ್ಡ್ ಅಧಿಕಾರಿ ಪಟ್ಟಣಶೆಟ್ಟಿ ಅಲ್ಲಗಳೆದ್ರು, ಆಕ್ರೋಶಗೊಂಡ ಶಾಸಕ ಕಟಕದೊಂಡ ನಾನ್ ಹೇಳಿದ್ದು ಸುಳ್ಳಾದ್ರೆ ಇಲ್ಲೆ ರಾಜೀನಾಮೆ ಕೊಟ್ಟು ಬಿಡ್ತೀನಿ ಎಂದ್ರು.
ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್
15 ದಿನಗಳಿಗೊಮ್ಮೆ ಬರ ಮೀಟಿಂಗ್: ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಆತಂಕದಲ್ಲಿದ್ದಾರೆ. ಈ ನಡುವೆ ಅಧಿಕಾರಿಗಳ ಸಭೆ ಕರೆದು ಎಂ ಬಿ ಪಾಟೀಲ್ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಅಲ್ಲದೆ ಪ್ರತಿ 15 ದಿನಗಳಿಗೊಮ್ಮೆ ಸಭೆ ಕರೆದು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.