ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯೂಕೆಆರ್‌ಟಿಸಿ) ಬಸ್ ಹಾಗೂ ಟಾಟಾ ಸುಮೋ ಬಸ್ ನಡುವೆ ಡಿಕ್ಕಿಯಾಗಿದ್ದು, ಟಾಟಾ ಸುಮೋ ವಾಹನದಲ್ಲಿದ್ದ 5 ಮಂದಿ ಭೀಕರ ದುರ್ಮರಣಕ್ಕೀಡಾಗಿದ್ದಾರೆ.
ಗದಗ (ಅ.16): ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯೂಕೆಆರ್‌ಟಿಸಿ) ಬಸ್ ಹಾಗೂ ಟಾಟಾ ಸುಮೋ ಬಸ್ ನಡುವೆ ಡಿಕ್ಕಿಯಾಗಿದ್ದು, ಟಾಟಾ ಸುಮೋ ವಾಹನದಲ್ಲಿದ್ದ 5 ಮಂದಿ ಭೀಕರ ದುರ್ಮರಣಕ್ಕೀಡಾಗಿದ್ದಾರೆ.
ಗದಗ ಜಿಲ್ಲೆ ನೆರೇಗಲ್ ಪಟ್ಟಣದ ಹೊರ ವಲಯ ಗದ್ದಿಹಳ್ಳದ ಬಳಿ ಕೆಎಸ್‌ಆರ್‌ಟಿಸಿ ಬಸ್, ಟಾಟಾ ಸೊಮೊ ಮಧ್ಯೆ ಮುಖಾ ಮುಖಿ ಡಿಕ್ಕಿಯಾಗಿದೆ. ಗಜೇಂದ್ರಗಡ ಕಡೆಯಿಂದ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಹೊರಟಿದ್ದ ಟಾಟಾ ಸೊಮೊ ಹಾಗೂ ಗದಗ ನಗರದಿಂದ ಗಜೇಂದ್ರಗಡ ಕಡೆಗೆ ಹೊರಟಿದ್ದ ಬಸ್ ನಡುವೆ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಟಾಟಾ ಸೊಮೊ ನಲ್ಲಿದ್ದ 5 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ವಾಯುವ್ಯ ಸಾರಿಗೆ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ.
undefined
ಐಟಿ ದಾಳಿಗೆ ಸಿಕ್ಕ ಭಾರಿ ಕುಳಗಳೆಷ್ಟು? ಅಧಿಕಾರಿಗಳು ವಶಕ್ಕೆ ಪಡೆದ ಹಣದ ಮೌಲ್ಯವೆಷ್ಟು? ವಿವರ ಇಲ್ಲಿದೆ ನೋಡಿ...
ಕಲಬುರಗಿಯಿಂದ ಟಾಟಾ ಸೊಮೊ ಹತ್ತಿಕೊಂಡು ಹೊರಟಿದ್ದ ಪ್ರಯಾಣಿಕರು ಶಿರಹಟ್ಟಿಯ ಫಕ್ಕೀರೇಶ್ವರ ಮಠಕ್ಕೆ ಹೊರಟಿದ್ದರು. ಆದರೆ, ಏಕಾಏಕಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ದೇವಸ್ಥಾನಕ್ಕೆ ಹೊರಟವರು ಮಸಣ ಸೇರಿದ್ದಾರೆ. ಇನ್ನು ಅಪಘಾತ ಘಟನೆಯಿಂದ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಘಟನೆ ನಡೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಟ್ರಾಫಿಕ್ ಜಾಮ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕುರಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ಬಿತ್ತು ಧರ್ಮದೇಟು
ಅಪಘಾತ ಘಟನೆಯ ನಂತರ ಬಸ್‌ನಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ನರಳಾಡುತ್ತಿದ್ದ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಅವಘಡ ನಡೆಸ ಸ್ಥಳದಲ್ಲಿ ನೆರೇಗಲ್ ಪೊಲೀಸರು ಮೊಕ್ಕಾ ಹೂಡಿದ್ದು, ಮೃತದೇಹ ಪತ್ತೆಗೆ ಮುಂದಾಗಿದ್ದಾರೆ. ಟಾಟಾ ಸುಮೋ ಸಂಪೂರ್ಣ ಜಖಂ ಆಗಿದ್ದು, ಮೃತ ದೇಹಗಳನ್ನು ಹೊರಗೆ ತೆಗೆಯಲು ಪರದಾಡುತ್ತಿದ್ದಾರೆ. ಪ್ರವಾಸಕ್ಕೆ ಬಂದವರ ಬ್ಯಾಗ್ ಹಾಗೂ ಇತರೆ ಆಧಾರಗಳ ಮೂಲ ಅವರ ಗುರುತು ಪತ್ತೆಗೆ ಮುಂದಾಗಿದ್ದಾರೆ. ಇನ್ನು ಮೊಬೈಲ್‌ಗೆ ಕರೆ ಮಾಡುವವರಿಂದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.