ಸೂಕ್ತ ಸೂರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮಳೆಯನ್ನೂ ಲೆಕ್ಕಿಸದೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖದ ದಿನಗೂಲಿ ನೌಕರರ ಪುನರ್ವಸತಿ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ 25ನೇ ದಿನಕ್ಕೆ ಕಾಲಿಟ್ಟಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.16): ಸೂಕ್ತ ಸೂರಿನ ಸೌಲಭ್ಯ (House Facility) ಕಲ್ಪಿಸುವಂತೆ ಆಗ್ರಹಿಸಿ ಮಳೆಯನ್ನೂ (Rain) ಲೆಕ್ಕಿಸದೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಳಸ ತಾಲೂಕಿನ ಕುದುರೆಮುಖದ ದಿನಗೂಲಿ ನೌಕರರ ಪುನರ್ವಸತಿ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ (Protest) 25ನೇ ದಿನಕ್ಕೆ ಕಾಲಿಟ್ಟಿದೆ.
ಐರನ್ ಅಂಡ್ ಓರ್ ಕಂಪನಿಗೆ ಬೀಗ, ಬೀದಿಗೆ ಬಂದ ಕಾರ್ಮಿಕರು: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್ 18 ವರ್ಷದ ಹಿಂದೆಯೇ ಸ್ಥಗಿತಗೊಂಡಿದೆ. ಕುದುರೆಮುಖ ಅದಿರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ನಲವತ್ತಕ್ಕೂ ಹೆಚ್ಚು ದಿನಗೂಲಿ ಕುಟುಂಬಗಳು ಬೀದಿಗೆ ಬಂದಿವೆ.
ಹೋಮ-ಹವನ ನಡೆಯುವ ಸ್ಥಳದಲ್ಲಿ ನಾನ್ ವೆಜ್, ವಿವಾದ ಕಿಡಿಹೊತ್ತಿಸಿದ ಬಿರಿಯಾನಿ
ಇಲ್ಲಿನ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಯಾವುದೇ ಸೌಲಭ್ಯ ದೊರಕಿಲ್ಲ. ಇದರ ಪರಿಣಾಮ ಜೀವನ ನಿರ್ವಹಣೆ ಬಲು ದುಸ್ಥಿರವಾಗಿ ಕಾರ್ಮಿಕರಿಗೆ ಪರಿಣಮಿಸಿದೆ. ಕಂಪನಿ ಕ್ಲೋಸ್ ಆದ ಬಳಿಕ ಕಳಸ ಸುತ್ತಮುತ್ತ ವಿವಿಧ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ ಕಾರ್ಮಿಕರು. ಇದೀಗ ಕಳಸ ಸುತ್ತಮತ್ತ ಕೂಲಿ ಕೆಲಸವೂ ಕಡಿಮೆ ಇದ್ದು ಸೂರಿಗಾಗಿ ಸರ್ಕಾರ ಮುಂದೆ ಬೇಡಿಕೆ ಇಟ್ಟಿದ್ದಾರೆ ಕಾರ್ಮಿಕರು.
ಮಳೆಯ ನಡುವೆಯೂ ಸೂರಿಗಾಗಿ ಪ್ರತಿಭಟನೆ: ಸುರಿಯುತ್ತಿರುವ ಮಳೆ ಮಧ್ಯೆಯೂ ಮಳೆಯನ್ನ ಲೆಕ್ಕಿಸದೆ ಬದುಕಿನ ಹಕ್ಕಿಗಾಗಿ ಮಳೆಯಲ್ಲೇ ಹೋರಾಟ ಮಾಡುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಹೋರಾಡುತ್ತಿದ್ದು, ದಿನಕ್ಕೆ 10 ಕುಟುಂಬಗಳಂತೆ ನಿರಂತರವಾಗಿ ಚಳುವಳಿ ನಡೆಸುತ್ತಿದ್ದಾರೆ. ನಿರಾಶ್ರಿತರಿಗಾಗಿ ಸರ್ಕಾರದಿಂದ ಭೂಮಿ ಕೂಡ ಮಂಜೂರಾಗಿದೆ. ಕಂದಾಯ ಇಲಾಖೆ, ಪಟ್ಟಣ ಪಂಚಾಯಿತಿ ವತಿಯಿಂದ ಜಾಗದ ಜಂಟಿ ಸರ್ವೇ ಕೂಡ ಮುಗಿದಿದೆ.
ಆದರೆ, ಅಧಿಕಾರಿಗಳು ಮನೆ ಕಟ್ಟುವ ಕೆಲಸದ ಕಾಮಗಾರಿಯನ್ನ ಇನ್ನೂ ಆರಂಭಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಕಳಸ ಭಾಗದಲ್ಲಿ ಮಳೆ ಆರಂಭವಾಗಿದೆ. ಆಗಾಗ್ಗೆ ಮಳೆ ಕೂಡ ಸುರಿಯುತ್ತಿದೆ. ಸರ್ಕಾರ ಶೀಘ್ರವೇ ಮನೆ ಕಟ್ಟುವ ಕಾಮಗಾರಿಯ ಕೆಲಸ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿತರು ಕಳೆದ 25 ದಿನಗಳಿಂದ ಸೂರಿಗಾಗಿ ಹೋರಾಟ ನಡೆಸುತ್ತಿದ್ದಾರೆ.
Chikkamagaluru: ಕಾಫಿ ತೋಟದ ಹಾದಿಯಲ್ಲಿ ಸಾಗಿದ ಬೈಕ್ ರ್ಯಾಲಿ!
ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆದರೆ, ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತೀರ್ಮಾನಿಸಿ, ಬಿಸಿಲು-ಮಳೆ ಮಧ್ಯೆಯಲ್ಲೇ ಹೋರಾಟ ಮುಂದುವರೆಸಿದ್ದಾರೆ. ಸರ್ಕಾರ ಬಡವರ ಬಗ್ಗೆ ಕಾಳಜಿ ತೋರುತ್ತಿಲ್ಲ. ಅಧಿಕಾರಿಗಳ ಆಮೆಗತಿಯ ನಡೆ ಬಡವರನ್ನ ನಿರ್ಣಾಮ ಮಾಡಲು ಮುಂದಾಗಿದೆ ಎಂದು ಪ್ರತಿಭಟನಾನಿತರಾದ ರವೀಶ್ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದಿಂದ ಜಾಗ ಕೊಟ್ಟು ಮನೆಯನ್ನು ನಿರ್ಮಾಣ ಮಾಡಿಕೊಡುವ ಭರವಸೆಯನ್ನು ನೀಡಿತ್ತು.