Bagalkote: ಕೊಡಗಿನ ತ್ರಿಶೂಲ ದೀಕ್ಷೆ ತಪ್ಪೇನಲ್ಲ, ಅದೇನು ಕಾನೂನು ಬಾಹಿರವಲ್ಲ: ಪ್ರಮೋದ್ ಮುತಾಲಿಕ್

By Govindaraj S  |  First Published May 16, 2022, 8:50 PM IST

ಮಡಿಕೇರಿಯ ಪೊನ್ನಂಪೇಟೆಯಲ್ಲಿ ಭಜರಂಗದಳದವರು ಹಮ್ಮಿಕೊಂಡಿರುವ ಕ್ಯಾಂಪ್‌ನಲ್ಲಿ 5  ಇಂಚಿನ ಮರದ ತ್ರಿಶೂಲ ದೀಕ್ಷೆ ಮಾಡಿದ್ದು, ಏರಗನ್ ಸಹ ಮಾಡಿದ್ದಾರೆ. ಇದೇನು ಕಾನೂನು ಬಾಹಿರವಲ್ಲ ಇದರಲ್ಲೇನು ತಪ್ಪಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಮೇ.16): ಮಡಿಕೇರಿಯ ಪೊನ್ನಂಪೇಟೆಯಲ್ಲಿ ಭಜರಂಗದಳದವರು (Bajrang Dal) ಹಮ್ಮಿಕೊಂಡಿರುವ ಕ್ಯಾಂಪ್‌ನಲ್ಲಿ 5  ಇಂಚಿನ ಮರದ ತ್ರಿಶೂಲ ದೀಕ್ಷೆ (Trishul Diksha) ಮಾಡಿದ್ದು, ಏರಗನ್ ಸಹ ಮಾಡಿದ್ದಾರೆ. ಇದೇನು ಕಾನೂನು ಬಾಹಿರವಲ್ಲ ಇದರಲ್ಲೇನು ತಪ್ಪಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Sri Ram Sena Leader Pramod Muthalik) ತಿಳಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಮಾತನಾಡುತ್ತಾ, ಯುವಕರಲ್ಲಿ ಕ್ಷಾತ್ರತ್ವ, ಧೈಯ೯ ಸ್ಥೈಯ೯ಕ್ಕಾಗಿ ತುಂಬುವುದಕ್ಕಾಗಿ ಮಾಡಿದ್ದಾರೆ. ಇದೇನು ಹೊಸದೇನಲ್ಲ, ನಾವು ಹಿಂದೆ ಭಜರಂಗದಳ ಇದ್ದಾಗಲೂ  ಮಾಡಿದ್ದೇವೆ. ಇದೇನು ಕಾನೂನು ಬಾಹೀರವಲ್ಲ, ದೇಶದ್ರೋಹ ಅಲ್ಲ ಎಂದು‌ ಮುತಾಲಿಕ‌ ಸ್ಪಷ್ಡ ಪಡಿಸಿ, ಮಡಿಕೇರಿ ತ್ರಿಶೂಲ ದೀಕ್ಷೆಯನ್ನು ಬೆಂಬಲಿಸಿದರು.

Tap to resize

Latest Videos

undefined

ಶ್ರೀರಾಮಸೇನೆ ಶಾರೀರಿಕವಾಗಿ ಟ್ರೇನಿಂಗ್ ಕೊಟ್ಟ ಅಪಾರ ಜನ ಇಂದು ಮಿಲಿಟರಿ ಸೇರಿದ್ದಾರೆ: ಶಾರೀರಿಕ ಟ್ರೇನಿಂಗ್ ಮೂಲಕ ಕಾನೂನು ಬದ್ಧವಾಗಿ ಯುವಕರಲ್ಲಿ ದೇಶಭಕ್ತಿಯನ್ನ ಸ್ಥೈಯ೯ವನ್ನ ನೀಡುತ್ತಿದ್ದಾರೆ. ಮಿಲಿಟರಿ ಸೇರುವ ಯುವಕರಿಗೆ ಈ ರೀತಿಯ ತರಬೇತಿ ಕೊಟ್ಟರೆ ಮಿಲಿಟರಿಗೆ ಸುಲಭವಾಗಿ ಸೆಲೆಕ್ಟ್ ಆಗ್ತಾರೆ ಎಂದು ತಿಳಿಸಿದ ಮುತಾಲಿಕ್, ನಮ್ಮ ಶ್ರೀರಾಮಸೇನೆಯಿಂದ ಶಾರೀರಿಕವಾಗಿ ಟ್ರೈನಿಂಗ್ ಕೊಟ್ಟವರೇ ಅಪಾರ ಜನ ಮಿಲಿಟರಿ ಸೇರಿದ್ದಾರೆ. ಇದೇನು ತಪ್ಪಲ್ಲ, ದೇಶಹಿತಕ್ಕೋಸ್ಕರ, ದೇಶಭಕ್ತಿ ಹಿನ್ನೆಲೆ ಮಾಡಿದಂತ ತರಬೇತಿ ಇದೆ, ಇದು ತಪ್ಪಲ್ಲ ಎಂದರು.

ಅಕ್ರಮ ಗೋ ಸಾಗಾಣಿಕೆ ಮತ್ತು ಕಸಾಯಿಖಾನೆಗಳ ವಿರುದ್ದ ನಿಲ್ಲದ ಹೋರಾಟ: ಮಾತು ಕೇಳದ ಪೋಲಿಸರಿಗೆ ಪ್ರತಿಭಟನೆ ಮೂಲಕ ಎಚ್ಚರಿಕೆ!

ಪಿಎಫ್‌ಐ ಮತ್ತುಎಸ್‌ಡಿಪಿಐಗೆ ನಾಚಿಕೆ ಮಾನ ಮರ್ಯಾದೆ ಇಲ್ಲ: ಇನ್ನು ಆಪಾದನೆ ಮಾಡುತ್ತಿರೋ ಪಿಎಫ್‌ಐ ಮತ್ತುಎಸ್‌ಡಿಪಿಐ (PFI and SDPI) ಅವರಿಗೆ ನಾಚಿಕೆ ಮಾನ ಮಯಾ೯ದೆ ಇಲ್ಲ ಎಂದು‌ ಕಿಡಿಕಾರಿದ ಮುತಾಲಿಕ್ ನೀವೆಲ್ಲಾ ಭಯೋತ್ಪಾದಕರಿದ್ದೀರಿ, ದೇಶದ್ರೋಹಿಗಳಿದ್ದೀರಿ. ಒಂದು ವಾರದ ಹಿಂದೆಯಷ್ಟೇ ಕೇರಳ ಹೈಕೋರ್ಟ್ ಚೀ ಥೂ ಅಂತ ಛೀಮಾರಿ ಹಾಕಿದೆ. ನೀವೆಲ್ಲಾ ಉಪದೇಶ ಮಾಡ್ತೀರಿ ನಮಗೆ, ನಿಮಗೆ ಮಾನ ಮಯಾ೯ದೆ ಅಲ್ಲ. ದೇಶದ ಕಾನೂನು ಮುರಿದು ಕೊಲೆಗಳನ್ನ ಮಾಡುತ್ತಿದ್ದೀರಿ. ಬಾಂಬ್‌ಗಳನ್ನು ಎಸೆಯುತ್ತಿದ್ದೀರಿ. ಪಿಸ್ತೂಲ್‌ಗಳಿಂದ ಹಿಂದೂ ನಾಯಕರನ್ನ ಕೊಲೆ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿ, ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ. ನಾವು ದೇಶಭಕ್ತರಾಗಿದ್ದೇವೆ, ದೇಶಕ್ಕೆ ಬದ್ಧರಾಗಿರುತ್ತೇವೆ.ಇನ್ಮುಂದೆ ನಿಮ್ಮ ಕನಸು ಇಲ್ಲಿ ನಡೆಯೋದಿಲ್ಲ ಎಂದು ಎಚ್ಚರಿಕೆ ನೀಡಿದರು.

ದರೋಡೆಕೋರರು, ಲೂಟಿಕೋರರ ಪರವಾಗಿ ಈ ದೇಶದ ಮುಸ್ಲಿಮರು ನಿಲ್ಲುವುದು ಬೇಡ: ಇಡೀ ದೇಶದಲ್ಲಿ 30 ಸಾವಿರ ದೇವಾಲಯಗಳನ್ನು ಒಡೆದು ಮಸೀದಿ ನಿರ್ಮಿಸಿರೋ ದಾಖಲೆಗಳಿವೆ. ಯಾವ ಮುಸ್ಲಿಂ ರಾಜ ಯಾವ ದೇವಸ್ಥಾನದ ಮೇಲೆ ದಾಳಿ ಮಾಡಿದ ಬಗ್ಗೆ ಪುಸ್ತಕವೂ ಪ್ರಿಂಟ್ ಆಗಿದೆ. 1983ರಲ್ಲಿ ಅಶೋಕ ಸಿಂಗಲ್ ಅವ್ರು 30 ಸಾವಿರ ದೇವಸ್ಥಾನ ಇವೆ ಎಂದಿದ್ದಾರೆ, ಅದರಲ್ಲಿ ನಮಗೆ ಮೂರೇ ಮೂರು ದೇವಸ್ಥಾನ ಕೊಡಿ ಅಂತಾ ಮುಸ್ಲಿಂ ಮುಖಂಡರಿಗೆ ಹೇಳಿದ್ರು. ಅಯೋಧ್ಯೆ, ಮಥುರಾ ಮತ್ತು ಕಾಶಿ ದೇವಸ್ಥಾನ ಕೊಡಿ ಎಂದಿದ್ದರು.  ಅಂದಿನ ಕಾಂಗ್ರೆಸ್ ಸರ್ಕಾರವೂ ಇದನ್ನು ಒಪ್ಪಲಿಲ್ಲ. 

ಮುಸ್ಲಿಂ ಸಮುದಾಯವೂ ಹಠದಿಂದ, ಸೊಕ್ಕಿನಿಂದ ವರ್ತನೆ ಮಾಡಿದವು. ಅದರ ಪರಿಣಾಮ ಅಯೋಧ್ಯ ಹೊರಗೆ ಹಾಗೂ ಕಾನೂನು ಹೋರಾಟ ಆದವು. ಸದ್ಯಕ್ಕೆ ಅಯೋಧ್ಯ ಹಿಂದುಗಳ ಕೈಗೆ ಸೇರಿದೆ. ಇದೇ ಮಾದರಿಯಲ್ಲಿ ಕಾಶಿ, ಮಥುರಾದು ಕೋರ್ಟ್ ಪ್ರಕ್ರಿಯೆ ಪ್ರಾರಂಭ ಆಗಿದೆ. ಇದಕ್ಕೆ ಒಂದು ಅಡ್ಡಿ ಬರ್ತಾಯಿರೋದು 1991 ಕಾಯ್ದೆ ಆಗಿದ್ದು, ರಾಜೀವ್ ಗಾಂಧಿ ಮಾಡಿದ  ಅಕ್ಷಮ್ಯ ಅಪರಾಧದ ಕಾನೂನು ರಚನೆ ಮಾಡಿದರು. ಈ ಕಾಯ್ದೆ ರದ್ದಾಗೋವರೆಗೂ ಈಗ ಎದ್ದಿರುವ ದೇವಸ್ಥಾನಗಳ ವಿವಾದ ಹಾಗೆಯೇ ಉಳಿಯುತ್ತವೆ. ನ್ಯಾಯಾಲಯವೂ ಕೂಡಾ ಅದನ್ನ ಅಕ್ಸೆಪ್ಟ್ ಮಾಡಿಕೊಳ್ಳಲ್ಲ ಎಂದರು. 

ಇನ್ನು ಕೇಂದ್ರ ಸರ್ಕಾರ 1991 ಕಾನೂನು ರದ್ದು ಮಾಡಬೇಕು. ನಮಗೆ ಸ್ವಾತಂತ್ರ್ಯ ಸಿಕ್ಕಿದೆ ನಮ್ಮ ದೇವಸ್ಥಾನ ನಮಗೆ ಬೇಕು. ದಾಳಿಕೋರರು, ಲೂಟಿಕೋರರು, ಭಯೋತ್ಪಾದಕರು, ಮತಾಂಧರು ಅವರು, ಅಂಥವರ ಪರವಾಗಿ ಈ ದೇಶದ ಮುಸ್ಲಿಂರು ನಿಂತಕೊಳ್ಳಬಾರದು. ಬಾಬರ್ ಪರವಾಗಿ ಹೋರಾಟ ಮಾಡಿದ್ರೆ ಓಕೆ ಆದರೆ ಔರಂಗಜೇಬ್, ಅಕ್ಬರ್ ಅಥವಾ ಇನ್ಯಾವನೋ ಹುಮಾಯೂನ್‌ ಪರವಾಗಿ ನಿಂತಕೋಬಾರದು. ಅವರು ದೇಶದ್ರೋಹಿಗಳು, ಅವರಿಗೆ-ಈ ದೇಶದ ಮುಸ್ಲಿಮರಿಗೆ ಯಾವುದೇ ಸಂಬಂಧ ಇಲ್ಲ. 

Bagalkote: ಈ ಊರಲ್ಲಿ ಇನ್ನು 6 ತಿಂಗಳು ಗಂಡು ಮಕ್ಕಳ ಮದುವೆ ಮಾಡೋಂಗಿಲ್ಲ: ಇದು ತುಳಸಿಗೇರಿ ಹನುಮನ ಎಫೆಕ್ಟ್!

ಶ್ರೀರಂಗಪಟ್ಟಣದ ದೇವಸ್ಥಾನ ನೋಡಿದ ಕೂಡಲೆ ಗೊತ್ತಾಗುತ್ತದೆ ದೇವಸ್ಥಾನ ಅಂತೇಳಿ, ಅದನ್ನ ಮಸೀದಿ, ಮದರಸಾ, ಮೈಕ್, ನಮಾಜ್ ಮಾಡ್ತಿದಿರಿ. ಅದರಿಂದ ನೀವು ತಪ್ಪು ಮಾಡ್ತಿದಿರಿ. ಹಿಂದೆ ಮಾಡಿದ ತಪ್ಪು ಮಾಡಬೇಡಿ, ನಮ್ಮ ದೇವಸ್ಥಾನ ಕಬಳಿಸಬೇಡಿ. ದೇವಸ್ಥಾನ ಕಬಳಿಸೋದನ್ನ ನಾವು ಸಹಿಸಲ್ಲ, ಮುಸ್ಲಿಂ ಸಮುದಾಯ ಹಠದಿಂದ, ಸೊಕ್ಕಿನಿಂದ ವರ್ತನೆ ಮಾಡಬೇಡಿ. ಈ ದೇಶದಲ್ಲಿ ಮಂದಿರ ಒಡೆದಿದ್ದು ಸತ್ಯ ಇದೆ. ನೀವು ಒಡೆದಿಲ್ಲ, ಈ ದೇಶದ ಮುಸ್ಲಿಮರು ಒಡೆದಿಲ್ಲ. ನೀವು ಹಿಂದುಗಳ ಪರವಾಗಿ, ಗೌರವಯುತವಾಗಿ ಆ ಮಂದಿರಗಳನ್ನು ಒಪ್ಪಿಸಬೇಕು, ಆವಾಗ ನಮ್ಮ ನಿಮ್ಮಲ್ಲಿ ಸೌಹಾರ್ದ, ಆನಂದವಾಗಿ ಬದುಕಬಹುದು ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಮುತಾಲಿಕ್ ಹೇಳಿದರು.

click me!