ಕಲಬುರಗಿ: ಕುಡಿವ ನೀರಿಗಾಗಿ ಹಾಹಾಕಾರ..!

By Kannadaprabha News  |  First Published Nov 23, 2022, 10:00 AM IST

7 ಲಕ್ಷ ಜನವಸತಿಯ ಮಹಾನಗರದಲ್ಲಿ ಕಳೆದ 15 ದಿನದಿಂದ ಕುಡಿಯುವ ನೀರು ಸರಬರಾಜು ಇಲ್ಲದೆ ಜನರ ಪರದಾಟ


ಕಲಬುರಗಿ(ನ.23): ಇನ್ನೂ ಬೇಸಿಗೆ ಶುರುವಾಗಲು 3 ತಿಂಗಳಿರೋವಾಗಲೇ ಕಲಬುರಗಿ ಮಹಾನಗರದಲ್ಲಿ ಕಳೆದ 2 ವಾರದಿಂದ ಚಳಿಗಾಲದಲ್ಲೇ ಕುಡಿವ ನೀರಿಗಾಗಿ ಹಾಹಾಕಾರ ಶುರುವಾಗಿದೆ!. ನಗರ ನೀರಿನ ಮುಖ್ಯ ಮೂಲವಾಗಿರುವ ಭೀಮಾ ನದಿ ತುಂಬಿ ತುಳುಕುತ್ತಿದ್ದರೂ ಸ್ಥಳೀಯವಾಗಿ ಮಹಾನಗರ ಪಾಲಿಕೆ, ಕೆಯುಡಬ್ಲೂಎಸ್‌ಎಂಪಿ, ಕೆಯುಐಡಿಎಪ್‌ಸಿ, ಎಲ್‌ ಆ್ಯಂಡ್‌ ಟಿ, ಜಲ ಮಂಡಳಿ ಹೀಗೆ ಹತ್ತು ಹಲವು ಏಜನ್ಸಿಗಳವರು ಸೇರಿಕೊಂಡು ನಗರ ನೀರು ಸರಬರಾಜನ್ನು ಸಂಪೂರ್ಣ ಹದಗೆಡಿಸಿದ್ದು ಇದೆಲ್ಲರ ಫಲವೇ ಕಳೆದ 15 ದಿನದಿಂದ ನಗರವಾಸಿಗಳು ನೀರಿಲ್ಲದೆ ವನವಾಸ ಪಡುವಂತಾಗಿದೆ.

ನಗರಕ್ಕೆ ನೀರು ಪೂರೈಸುತ್ತೇವೆಂದು ಹೊರಟಿರುವ ಇವೆಲ್ಲ ಏಜನ್ಸಿಗಳವರು, ಅಲ್ಲಿನ ಇಂಜಿನಿಯರ್‌ಗಳು ರಿಪೇರಿ ನಿಗದಿಯಂತೆ ಪೂರ್ಣಗೊಳ್ಳದೆ ಹೋದರೆ ಪರ್ಯಾಯ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಿ ಕೊಳ್ಳದೆ ಇಂತಹದ್ದೊಂದು ತೊಂದರೆ ಸೃಷ್ಟಿಗೆ ಅವರೇ ನೇರ ಕಾರಣರಾಗಿದ್ದಾರೆ.

Tap to resize

Latest Videos

ದಿವ್ಯಾಂಗ ವ್ಯಕ್ತಿಯ ಕೃಷಿ ಕಾಯಕಕ್ಕೆ ಬೆಕ್ಕಸ ಬೆರಗಾದ ಕಲಬುರಗಿ ಮಂದಿ..!

ಭೀಮಾ ಶೋರ ಗುಂಬಜ್‌, ಕೋಟನೂರ್‌ ಜಲ ಶುದ್ಧೀಕರಣ ಕೇಂದ್ರದಲ್ಲಿರುವ ನೆಲ ಮಟ್ಟದ ಜಲಸಂಗ್ರಹಾಗಾರಗಳ ಸ್ವಚ್ಛತೆ, ಸರಡಗಿಯ ಪಂಪಿನ ಮನೆಯ 1,200 ಮಿಮಿ, ಫರತಾಬಾದ್‌ ಹಾಗೂ ಹೈಕೋರ್ಚ್‌ ಹತ್ತಿರದ 900 ಮಿಮಿ ವ್ಯಾಸದ ಕೊಳವೆ ಮಾರ್ಗಗಳು, ಆಳಂದ ರಸ್ತೆ ಶೆಟ್ಟಿಕಾಂಪ್ಲೆಕ್ಸ್‌ ಹಾಗೂ ಸಂಗಮೇಶ್ವರ ಸಬಾ ಗೃಹದ ಹತ್ತಿರದ 600 ಮಿಮಿ ವ್ಯಾಸದ ಕೊಳವೆ ಮಾರ್ಗ, ರಿಂಗ್‌ ರೋಡ್‌ ರಸ್ತೆಯ ಡಬರಾಬ್‌ ಕ್ರಾಸ್‌ನಲ್ಲಿರುವ ಕೊಳವೆ ಮಾರ್ಗಗಳಲ್ಲಿನ ದುರಸ್ಥಿ ಕಾರ್ಯಗಳನ್ನು ಏಕಕಾಲಕ್ಕೆ ಕೈಗೆತ್ತಿಕೊಂಡಿದ್ದು ನ.14ರಿಂದ ನ.17ರ ವರೆಗೆ ನೀರು ಪೂರೈಕೆಯಲ್ಲಿ ತೊಂದರೆಯಾಗಲಿದ್ದು ಸಹಕರಿಸಬೇಕು ಎಂದು ಕೆಯುಐಡಿಎಫ್‌ಸಿ, ಕೆಯುಡಬ್ಲೂಎಸ್‌ಎಂಪಿ ಯೋಜನಾ ಘಟಕದ ಕಾರ್ಯಪಾಲಕ ಅಭಿಯಂತರರು, ಎಲ್‌ ಆಂಡ್‌ ಟಿ ಲಿಮಿಟೆಡ್‌ ಕಂಪನಿಯವರು ಕಳೆದ ನ.11ರಂದೇ ಸಾರ್ವಜನಿಕರ ಗಮನಕ್ಕೆಂದು ಪತ್ರಿಕಾ ಪ್ರಕಟಣೆ ನೀಡಿದ್ದರು.

ಯೋಜನಾ ಘಟಕದವರೇ ನೀಡಿದ ಗಡವಿನಂತೆ ನ.18ರಿಂದ ನಗರಾದ್ಯಂತ ಹಂತಹಂತವಾಗಿ ನೀರು ಪೂರೈಕೆ ಶುರುವಾಗಬೇಕಿತ್ತು. ಆದರೆ, ವಾಸ್ತವದಲ್ಲಿ ನ.22ರ ಮಂಗಳವಾರವೂ ನಗರದಲ್ಲಿಯೂ ನೀರು ಪೂರೈಕೆ ಪುನಃ ಶುರುವಾಗಿಲ್ಲ. ಇದರರ್ಥವೆಂದರೆ ಯೋಜನಾ ಘಟಕದವರ ಲೆಕ್ಕಾಚಾರದಂತೆ ಕೊಳವೆ ಮಾರ್ಗ ದುರಸ್ಥಿ, ಜಲ ಸಂಗ್ರಹಾಗಾರಗಳ ಸ್ವಚ್ಚತೆಯ ಕೆಲಸಗಳೆಲ್ಲವೂ ಅರೆಬರೆಯಾಗಿವೆ!

Assembly Election: ಈಗಲೇ ಹೈವೋಲ್ಟೇಜ್‌ ಕ್ಷೇತ್ರವಾದ ಕಲಘಟಗಿ

ಎಲ್ಲೆಂದರಲ್ಲಿ ಅಗೆತ:

ನೀರಿಗಾಗಿ ಜನ ಹಾಹಾಕಾರ ಪಡುವಾಗಲೇ ನಗರದಲ್ಲಿ ನಿರಂತರ ನೀರು ಪೂರೈಕೆ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವ ಎಲ್‌ ಆಂಡ್‌ ಟಿ ಕಂಪನಿಯವರು ಮನಸೋ ಇಚ್ಛೆ ಅಗೆಯುತ್ತಾ ಸಾಗಿದ್ದಾರೆ. ಇದರಿಂದಾಗಿಯೂ ಅನೇಕ ಬಡಾವಣೆಗಳಲ್ಲಿ ನೀರಿನ ಕೊಳವೆಗಳು ಭಾರಿ ಹಾನಿಗೊಳಗಾಗಿ ನೀರು ಪೂರೈಕೆಗೇ ಸವಾಲಾಗುತ್ತಿದೆ. ರಸ್ತೆಗಳ ನಡುಮಧ್ಯೆ ಅಗೆಯುತ್ತ ಬೇಕಾಬಿಟ್ಟಿತನ ತೋರುತ್ತಿರೋದರಿಂದ ಅನೇಕ ಬಡಾವಣೆಗಳಲ್ಲಿ ಜನ ಪರದಾಡುವಂಆಗಿಇದೆ. ಇವರ ರಸ್ತೆ ಅಗೆತ, ಅಸ್ತಿತ್ವದಲ್ಲಿರೋ ಕೊಳವೆ ಮಾರ್ಗಗಳಿಗೆ ಹಾನಿ ಸಭಿಸಿದರೂ ಕ್ಯಾರೆ ಎನ್ನದಂತೆ ತಮ್ಮ ಆಡಿಗೆ ತಾವಿರುವ ಅವರ ಧೋರಣೆಗೆ ಅನೇಕ ಕಡೆಗಳಲ್ಲಿ ನಿತ್ಯ ವಾಗ್ವಾದ, ಕಿರಿಕಿರಿ ಶುರುವಾಗಿವೆ.

ಹೇಳೋರಿಲ್ಲ, ಕೇಳೋರಿಲ್ಲ:

ಪಾಲಿಕೆಯ ಆಯುಕ್ತರಾಗಲಿ, ಯೋಜನಾ ಘಟಕದ ಎಂಜಿನಿಯರ್‌ ಆಗಲಿ, ನಗರದ ಉತ್ತರ, ದಕ್ಷಿಣ ಶಾಸಕರಾಗಲಿ, ಯಾರೊಬ್ಬರೂ ಈ ವಿಚಾರದಲ್ಲಿ ಸಭೆ ಕರೆದೋ, ಕರೆ ಮಾಡಿಯೋ, ನೀರು ಪೂರೈಕೆ ಹದಗೆಡಲು ಅದೇನು ಕಾರಣಗಳೆಂದು, ಏನಾಯ್ತೆಂಬುದಾಗಲಿ ನೋಡದೆ ತಮ್ಮ ಪಾಡಿಗೆ ತಾವಿದ್ದಾರೆಂದು ನೀರಿಲ್ಲದೆ ಜನ ಇಡೀ ವ್ಯವಸ್ಥೆಯ ವಿರುದ್ಧವೇ ಹಿಡಿಶಾಪ ಹಾಕುತ್ತಿದ್ದಾರೆ. ನ್ಯೂ ರಾಘವೇಂದ್ರ ಕಾಲೋನಿ, ಗಂಗಾ ನಗರ. ಷಹಾ ಬಜಾರ್‌, ಆರ್‌ಟಿ ನಗರ, ಓಜಾ ಬಡಾವಣೆ, ರಿಂಗ್‌ ರಸ್ತೆ ಪ್ರಮುಖ ಬಡಾವಣೆಗಳು, ಹಳೆ ಕಲಬುರಗಿ ಬಡಾವಣೆಗಳು ಇಲ್ಲೆಲ್ಲಾ ಜನ ಬೋರ್‌ವೆಲ್‌ ಸಹ ಹೊಂದಿಲ್ಲ. ಹೀಗಾಗಿ ಅಲ್ಲಿರುವ ಶೇ.60ರಷ್ಟುಕುಟುಂಬದವರು ನೀರಿಗಾಗಿ ಅಂಡಲೆಯುವಂತಾಗಿದೆ.
 

click me!