ಮಣಿಪಾಲ ಆಸ್ಪತ್ರೆಯಲ್ಲಿ ಬಿ.ಸಿ.ಪಾಟೀಲ್‌ಗೆ ಮಂಡಿ ಶಸ್ತ್ರಚಿಕಿತ್ಸೆ

By Kannadaprabha NewsFirst Published Nov 23, 2022, 9:00 AM IST
Highlights

ಸಚಿವರು ಆರೋಗ್ಯವಾಗಿದ್ದು, ಕೆಲ ದಿನಗಳು ಆಸ್ಪತ್ರೆ, ಆ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಬೆಂಗಳೂರು(ನ.23): ಮಂಡಿ ನೋವಿನ ಹಿನ್ನೆಲೆ ನಗರದ ಮಣಿಪಾಲ್‌ ಆಸ್ಪತ್ರೆ ದಾಖಲಾಗಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರಿಗೆ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಸೋಮವಾರ ಆಸ್ಪತ್ರೆ ದಾಖಲಾಗಿದ್ದರು. ಮಂಗಳವಾರ ಡಾ.ಕಿರಣ್‌ ನೇತೃತ್ವದ ವೈದ್ಯರ ತಂಡವು ಎರಡು ಕಾಲುಗಳ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 

ಸಚಿವರು ಆರೋಗ್ಯವಾಗಿದ್ದು, ಕೆಲ ದಿನಗಳು ಆಸ್ಪತ್ರೆ, ಆ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

 

ನಿನ್ನೆ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮಂಡಿ ನೋವಿನ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಗುಣಮುಖನಾಗುತ್ತಿದ್ದೇನೆ. ದಯವಿಟ್ಟು ಕೆಲವು ದಿನಗಳ ಕಾಲ ಸಹಕರಿಸಬೇಕಾಗಿ ವಿನಂತಿ. pic.twitter.com/QRJIk4QG9T

— Kourava B.C.Patil (@bcpatilkourava)

ಯುಬಿ ಬಣಕಾರ್ ವಿರುದ್ಧ 4ನೇ ಬಾರಿಯೂ ಕುಸ್ತಿ ಗೆಲ್ಲುತ್ತೇನೆ: ಬಿ.ಸಿ. ಪಾಟೀಲ್

ಇತ್ತ ಸಚಿವರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಶಸ್ತ್ರಚಿಕಿತ್ಸೆಯಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಗುಣಮುಖವಾಗುತ್ತಿದ್ದೇನೆ’ ಎಂದಿದ್ದಾರೆ.
 

click me!