ಅನ್ನನಾಳದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ| ಕೊಪ್ಪಳ ಜಿಲ್ಲೆತ ಗಂಗಾವತಿ ನಗರದ ಯುವ ವೈದ್ಯ ಡಾ. ಅವಿನಾಶ ಭಾವಿಕಟ್ಟಿ ಸಾಧನೆ| 6 ದಿನದಲ್ಲಿ ಗುಣಮುಖರಾಗಿ ಬಿಡುಗಡೆ|
ಗಂಗಾವತಿ(ನ.19): ಅನ್ನನಾಳದ ಕ್ಯಾನ್ಸರ್‌ದಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಯುವವೈದ್ಯ ಡಾ. ಅವಿನಾಶ ಭಾವಿಕಟ್ಟಿ ಅವರು ಮಾಡಿದ್ದಾರೆ.
ನಗರದ ಭಾವಿಕಟ್ಟಿ ನರ್ಸಿಂಗ್ ಹೋಂ ವೈದ್ಯರಾದ ಶಿವಾನಂದ ಭಾವಿಕಟ್ಟಿ ಅವರ ಪುತ್ರ ಡಾ. ಅವಿನಾಶ ಭಾವಿಕಟ್ಟಿ ಅವರು ಬಡ ಮಹಿಳೆಯಾಗಿದ್ದ ಫಕೀರಮ್ಮ ಎಂಬವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ್ದಾರೆ.
ನಗರದ ಕೊಟ್ಟೂರೇಶ್ವರ ಕ್ಯಾಂಪಿನ ಫಕೀರಮ್ಮ ಅವರು ತೀರಾ ಬಡತನದಲ್ಲಿರುವ ಮಹಿಳೆಯಾಗಿದ್ದು, ಅವರ ಪುತ್ರ ನಗರದ ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಊರೂರು ಅಲೆದರೂ ಫಕೀರಮ್ಮ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಕ್ಯಾನ್ಸರ್ ಚಿಕಿತ್ಸೆಗೆ ಕನಿಷ್ಠ 2 ರಿಂದ 3 ಲಕ್ಷ ಖರ್ಚು ತಗುಲುತ್ತಿತ್ತು. ಪುತ್ರ ಕೊನೆಗೆ ಭಾವಿಕಟ್ಟಿ ವೈದ್ಯರ ಬಳಿ ಹೋಗಿ ತನ್ನ ಸಮಸ್ಯೆ ಬಿಚ್ಚಿಟ್ಟಿದ್ದಾರೆ.
6 ಗಂಟೆ ಶಸ್ತ್ರಚಿಕಿತ್ಸೆ:
ನಗರದ ಭಾವಿಕಟ್ಟಿ ನರ್ಸಿಂಗ್ ಆಸ್ಪತ್ರೆಯಲ್ಲಿ ಫಕೀರಮ್ಮಗೆ 6 ಗಂಟೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿರುವ ಡಾ. ಅವಿನಾಶ ಭಾವಿಕಟ್ಟಿಅವರು ತಮ್ಮ ತಂದೆ ಡಾ. ಶಿವಾನಂದ ಭಾವಿಕಟ್ಟಿ, ಮಂಜುನಾಥ, ವೀರೇಶ ಆನೆಗೊಂದಿ, ಮಹಾಂತೇಶ ಭಾವಿಕಟ್ಟಿ ಜತೆ ಸೇರಿ ಮಹಿಳೆಯ ಅನ್ನನಾಳ ಕ್ಯಾನ್ಸರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 6 ದಿನಗಳ ನಂತರ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅನ್ನನಾಳ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲು ಸರಳವಾಯಿತು. ಇಲ್ಲದಿದ್ದರೆ ಕಠಿಣವಾಗುತ್ತಿತ್ತು. ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಡಾ. ಅವಿನಾಶ ಭಾವಿಕಟ್ಟಿ ತಿಳಿಸಿದ್ದಾರೆ.
ಕೊಪ್ಪಳದ ಸಾವಜಿ ಹೋಟೆಲ್ ಬೆಳಗೆರೆಗೆ ಅಚ್ಚುಮೆಚ್ಚು..!
ಕಳೆದ 6 ತಿಂಗಳಿನಿಂದ ಊಟ ಹೋಗುತ್ತಿರಲಿಲ್ಲ. ತಮ್ಮ ಬಳಿ ಹಣ ಇಲ್ಲದ ಕಾರಣ ವೈದ್ಯರ ಬಳಿ ಹೋಗಲಿಲ್ಲ. ಕೊನೆಗೆ ಕ್ಯಾನ್ಸರ್ ಅಂಥ ತಿಳಿದ ಬಳಿಕ ಧಾರವಾಡ, ಬಳ್ಳಾರಿ ನಗರಗಳಿಗೆ ಹೋಗಿ ತಪಾಸಣೆ ಮಾಡಿಸಲಾಗಿತ್ತು. ಆದರೆ ಆಸ್ಪತ್ರೆಗೆ ಹೆಚ್ಚಿನ ಹಣ ಸಂದಾಯ ಮಾಡುವ ಶಕ್ತಿ ತಮಗೆ ಇದ್ದಿಲ್ಲ. ಕೊನೆಗೆ ಭಾವಿಕಟ್ಟಿವೈದ್ಯರು ದೇವರಂತೆ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ. ಈಗ ಗುಣಮುಖನಾಗಿದ್ದೇನೆ ಎಂದು ಚಿಕಿತ್ಸೆಗೆ ಒಳಗಾಗಿರುವ ಮಹಿಳೆ ಫಕೀರಮ್ಮ ಹೇಳಿದ್ದಾರೆ.