ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ

Kannadaprabha News   | Asianet News
Published : Nov 19, 2020, 09:08 AM ISTUpdated : Nov 19, 2020, 09:22 AM IST
ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ

ಸಾರಾಂಶ

ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾರ್ಥ್ಯ ಎಂಜಿನಿಯರಿಂಗ್‌ ಪದವೀಧರೆಯಾಗಿರುವ 22 ವರ್ಷದ ಐಶ್ವರ್ಯ  ವಿವಾಹ ನಿಶ್ಚಿತಾರ್ಥ ಇಂದು ನಡೆಯಲಿದೆ

ಬೆಂಗಳೂರು (ನ.19):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮಾರ್ಥ್ಯ ಹೆಗ್ಡೆ ಅವರ ವಿವಾಹ ನಿಶ್ಚಿತಾರ್ಥ ನವೆಂಬರ್‌ 19ರ ಗುರುವಾರ ಬೆಂಗಳೂರಿನಲ್ಲಿ ನಡೆಯಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಖಾಸಗಿ ಹೋಟೆಲ್‌ವೊಂದರಲ್ಲಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಸಂಬಂಧಿಕರನ್ನು ಮಾತ್ರ ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ಪುತ್ರಿ -ಸಿದ್ಧಾರ್ಥ್ ಹೆಗ್ಡೆ ಪುತ್ರನ ವಿವಾಹಕ್ಕೆ ಡೇಟ್ ಫಿಕ್ಸ್? ..

ಕಾಫಿಡೇ ಸಿದ್ದಾರ್ಥ ಅವರ ಅಕಾಲಿಕ ನಿಧನಾನಂತರ ಎರಡೂ ಕುಟುಂಬಗಳ ಮಧ್ಯೆ ಈ ವಿವಾಹದ ಕುರಿತು ಮಾತುಕತೆ ನಡೆದಿತ್ತು. ಜೂನ್‌ 12ರಂದು ಸದಾಶಿವ ನಗರದಲ್ಲಿರುವ ಎಸ್‌.ಎಂ. ಕೃಷ್ಣ ನಿವಾಸಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಕುಟುಂಬದ ಸದಸ್ಯರು, ತಾಂಬೂಲ ಬದಲಾಯಿಸಿಕೊಂಡು ಅಮಾರ್ಥ್ಯ ಮತ್ತು ಐಶ್ವರ್ಯ ಅವರ ಮದುವೆ ನಿಶ್ಚಯ ಮಾಡಿದ್ದರು. 2021ರ ಫೆಬ್ರವರಿಯಲ್ಲಿ ಇವರಿಬ್ಬರ ವಿವಾಹ ನಡೆಸಲು ಉಭಯ ಕುಟುಂಬಗಳು ತೀರ್ಮಾನಿಸಿವೆ ಎಂದು ತಿಳಿದುಬಂದಿದೆ.

ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾರ್ಥ್ಯ ಅವರು ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ಕಂಪನಿಯ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಎಂಜಿನಿಯರಿಂಗ್‌ ಪದವೀಧರೆಯಾಗಿರುವ 22 ವರ್ಷದ ಐಶ್ವರ್ಯ ಅವರು ತಂದೆ ಡಿ.ಕೆ. ಶಿವಕುಮಾರ್‌ ಸ್ಥಾಪಿಸಿರುವ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ