ಕೊರೋನಾ ಭೀತಿ: ಲಕ್ಷ್ಮೇಶ್ವರದ ದೂದಪೀರಾಂ ಉರುಸ್‌ ರದ್ದು

Kannadaprabha News   | Asianet News
Published : Jun 03, 2020, 09:25 AM IST
ಕೊರೋನಾ ಭೀತಿ: ಲಕ್ಷ್ಮೇಶ್ವರದ ದೂದಪೀರಾಂ ಉರುಸ್‌ ರದ್ದು

ಸಾರಾಂಶ

ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿರುವದರಿಂದ ದೂದಪೀರಾಂ ಉರುಸ್‌ ರದ್ದು| ಜೂ. 4 ರಂದು ಸಂದಲ್‌ ಕಾರ್ಯಕ್ರಮ ಹಾಗೂ 5 ಕ್ಕೆ ಜರುಗುವ ಉರುಸು ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿದ್ದು ಯಾವುದೇ ಭಕ್ತರು ಆಗಮಿಸದೆ ಇರಲು ವಿನಂತಿಸುವದಾಗಿ ಹೇಳಿದ ಮ್ಯಾನೇಜಿಂಗ್‌ ಕಮೀಟಿ|

ಲಕ್ಷ್ಮೇಶ್ವರ(ಜೂ.03):  ಪಟ್ಟಣದ ದೂದಪೀರಾಂ ದರ್ಗಾದ ಉರುಸ್‌ ಜೂನ್‌ 4 ಮತ್ತು 5 ರಂದು ನೆರವೇರಬೇಕಾಗಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ದೂದಪೀರಾಂ ದರ್ಗಾ ಕಮೀಟಿ ಅಧ್ಯಕ್ಷ ಸುಲೇಮಾನಸಾಬ ಕಣಿಕೆ ಮತ್ತು ಅಂಜುಮನ್‌ ಸಮಿತಿ ಅಧ್ಯಕ್ಷ ಅನ್ವರಸಾಬ ಹವಾಲ್ದಾರ ತಿಳಿಸಿದ್ದಾರೆ.

ಅವರು ಈ ಕುರಿತು ಮಂಗಳವಾರ ದೂದಪೀರಾಂ ಅಥವಾ ಹಜರತ್‌ ಸಯ್ಯದ ಸುಲೇಮಾನ್‌ ಬಾಶಾ ಖಾದ್ರಿ ಮ್ಯಾನೇಜಿಂಗ್‌ ಕಮೀಟಿ ಹಾಗೂ ಅಂಜುಮನ್‌ ಏ-ಇಸ್ಲಾಂ ಸಮಿತಿಯವರು ಜಂಟಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಂಬೈನಿಂದ ಗದಗ ರೈಲು ನಿಲ್ದಾಣಕ್ಕೆ ಆಗಮಿಸಿದ 116 ಜನರು: ಆತಂಕದಲ್ಲಿ ಜನತೆ

ಪಟ್ಟಣದಲ್ಲಿನ ದೂದಪೀರಾಂ ದರ್ಗಾ ನಿತ್ಯ ಸಾವಿರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಬೇಡುವ ಮತ್ತು ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳುವ ಮೂಲಕ ನೆಮ್ಮದಿ, ಶಾಂತಿ ಕಂಡು ಕೊಳ್ಳುತ್ತಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಉರೂಸ್‌ ವಿಜೃಂಭಣೆಯಿಂದ ಆಚರಿಸಲು ದರ್ಗಾ ಕಮೀಟಿ ಮತ್ತು ಅಂಜುಮನ್‌ ಕಮೀಟಿಯಿಂದ ಸಿದ್ಧತೆ ಮಾಡಿಕೊಳ್ಳುವ ಮೊದಲೇ ಈ ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿರುವದರಿಂದ ದೂರದ ಅನೇಕ ರಾಜ್ಯಗಳಿಂದ ಜನರು ದರ್ಗಾಕ್ಕೆ ಆಗಮಿಸುತ್ತಿದ್ದು, ಕೊರೋನಾ ವೈರಸ್‌ ಹರಡಬಹುದಾದ ಸಾಧ್ಯತೆ ಇರುವುದರಿಂದ ಉರೂಸು ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಜೂ. 4 ರಂದು ಸಂದಲ್‌ ಕಾರ್ಯಕ್ರಮ ಹಾಗೂ 5 ಕ್ಕೆ ಜರುಗುವ ಉರುಸು ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿದ್ದು ಯಾವುದೇ ಭಕ್ತರು ಆಗಮಿಸದೆ ಇರಲು ವಿನಂತಿಸುವದಾಗಿ ಹೇಳಿದರು. ಜೂ. 8 ರಂದು ದರ್ಗಾ ಬಾಗಿಲು ತೆಗೆಯಲು ಆದೇಶ ಬಂದಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಕ್ರಮ ತೆಗೆದುಕೊಳ್ಳಲಾಗುವದು ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದರು.

ದರ್ಗಾ ಕಮೀಟಿಯ ದಾದಾಪೀರ ಮುಚ್ಚಾಲೆ, ಕಾರ್ಯದರ್ಶಿ ಎಸ್‌.ಕೆ. ಹವಾಲ್ದಾರ, ಉಪಾಧ್ಯಕ್ಷ ಜಮೀಲ ಸೂರಣಗಿ, ಅಂಜುಮನ್‌ ಕಮೀಟಿ ಕಾರ್ಯದರ್ಶಿ ಎನ್‌.ಎಂ. ಗದಗ, ಸಾದಿಕ್‌ ಬಿಜಾಪೂರ, ಶಬ್ಬೀರ ಕಾರಡಗಿ, ಜಿಲಾನಿ ಸೂರಣಗಿ, ಕರೀಂಖಾನ್‌ ಕರೀಂಖಾನನವರ, ಮಿಯ್ಯಾಸಾಬ ಪಟವೇಗಾರ ಮತ್ತಿತರರು ಹಾಜರಿದ್ದರು.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC