ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

By Kannadaprabha NewsFirst Published Jun 3, 2020, 9:20 AM IST
Highlights

ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರು(ಜೂ. 03): ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಎರ್ನಾಕುಳಂ ನಿಜಾಮುದ್ದೀನ್‌ ಸ್ಪೆಶಲ್‌ ರೈಲು, ತಿರುವನಂತಪುರಂ ಸೆಂಟ್ರಲ್‌-ಲೋಕಮಾನ್ಯತಿಲಕ್‌ ಸ್ಪೆಶಲ್‌ ರೈಲು ಹಾಗೂ ನವದೆಹಲಿ-ತಿರುವನಂತಪುರಂ ಸೆಂಟ್ರಲ್‌ ಸ್ಪೆಶಲ್‌ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರಿಗೆ ಎನ್‌ಡಿಆರ್‌ಎಫ್‌ ತಂಡ ಆಗಮನ

ಈ ರೈಲುಗಳು ವಯಾ ಮಡಗಾಂವ್‌ ಜಂಕ್ಷನ್‌, ಲೋಂಡಾ, ಮೀರಜ್‌, ಪುಣೆ, ಮಾನ್ಮಾಡ್‌, ಕಲ್ಯಾಣ್‌ ಮೂಲಕ ಸಂಚರಿಸಲಿವೆ. ಲೋಕಮಾನ್ಯತಿಲಕ್‌-ತಿರುವನಂತಪುರಂ ಸೆಂಟ್ರಲ್‌ ರೈಲು ಜೂನ್‌ 3ರಂದು ಸಂಜೆ 5 ಗಂಟೆಗೆ ಹೊರಡಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

ಮಂಗಳೂರಿನಲ್ಲಿ ಈಗಾಗಲೇ ಹಲವು ಬಾರಿ ಮಳೆಯಾಗಿದ್ದು, ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಪ್ರಭಾವದಿಂದ ಕರವಾಳಿಯಲ್ಲಿ ಕಡಲಿನ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಭಾರೀ ಮಳೆ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ರೈಲು ಮಾರ್ಗ ಬದಲಾಯಿಸಲಾಗಿದೆ.

click me!