ಕ್ಷಣಿಕ ಸುಖಕ್ಕಾಗಿ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ: ನ್ಯಾ.ಚವ್ಹಾಣ

Published : Sep 16, 2023, 08:23 PM IST
ಕ್ಷಣಿಕ ಸುಖಕ್ಕಾಗಿ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ: ನ್ಯಾ.ಚವ್ಹಾಣ

ಸಾರಾಂಶ

ವಿದ್ಯಾರ್ಥಿ ಜೀವನವನ್ನು ನಮ್ಮ ಭವಿಷ್ಯ ರೂಪಿಸುವುದಕ್ಕೆ ಬಳಸಿಕೊಳ್ಳಬೇಕು. ಆದರೆ, ಕ್ಷಣಿಕ ಸುಖಕ್ಕಾಗಿ ಎಂದಿಗೂ ಅಂತಹ ಸುವರ್ಣಕ್ಷಣವನ್ನು ಹಾಳು ಮಾಡಿಕೊಳ್ಳಬಾರದು ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಹೇಳಿದರು. 

ಚಿಕ್ಕೋಡಿ (ಸೆ.16): ವಿದ್ಯಾರ್ಥಿ ಜೀವನವನ್ನು ನಮ್ಮ ಭವಿಷ್ಯ ರೂಪಿಸುವುದಕ್ಕೆ ಬಳಸಿಕೊಳ್ಳಬೇಕು. ಆದರೆ, ಕ್ಷಣಿಕ ಸುಖಕ್ಕಾಗಿ ಎಂದಿಗೂ ಅಂತಹ ಸುವರ್ಣಕ್ಷಣವನ್ನು ಹಾಳು ಮಾಡಿಕೊಳ್ಳಬಾರದು ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಲ್.ಚವ್ಹಾಣ ಹೇಳಿದರು. ಚಿಕ್ಕೋಡಿ ತಾಲೂಕಿನ ಕೆರೂರ ಸರ್ಕಾರಿ ಪಪೂ ಕಾಲೇಜು, ಎನ್‌ಎಸ್‌ಎಸ್ ಘಟಕ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ನ್ಯಾಯ ನಿಮ್ಮದು-ನೆರವು ನಮ್ಮದು ಎಂಬ ಧ್ಯೇಯದೊಂದಿಗೆ ಮಾದಕ ವ್ಯಸನ ತಡೆಗಟ್ಟುವಿಕೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪ್ರೀತಿ ವಿಶ್ವಾಸದಿಂದ ಬೋಧನೆ ಮಾಡಬೇಕು. ಜತೆಗೆ ಅವರಿಗೆ ನೈತಿಕ ಮೌಲ್ಯಗಳನ್ನು ತಿಳಿಹೇಳಬೇಕು. ಈ ವಯಸ್ಸಿನಲ್ಲಿ ಸರಿ, ತಪ್ಪುಗಳ ಕುರಿತು ತಿಳಿವಳಿಕೆ ಇರುವುದು ಕಡಿಮೆ ಎಂದ ಅವರು, ನಿತ್ಯ ಜೀವನದಲ್ಲಿ ಅಪರಾಧ ಚಟುವಟಿಕೆ ಎಲ್ಲಿ, ಹೇಗೆ ಆರಂಭವಾಗುತ್ತದೆ ಎಂಬುವುದು ತಿಳಿಯುವುದಿಲ್ಲ. ಅದನ್ನು ನಾವೆ ಅರಿತು ತಿಳಿದುಕೊಂಡು ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?

ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಹರೀಶ ಆರ್. ಪಾಟೀಲ, ಯುವಜನತೆ ತೀರಾ ಇತ್ತೀಚೆಗೆ ಮೊಬೈಲ್ ದಾಸರಾಗಿದ್ದಾರೆ. ಮೊಬೈಲ್, ಅಂತರ್ಜಾಲ ಬಳಕೆಯಿಂದ ಅಂತಹ ವಿದ್ಯಾರ್ಥಿಗಳ ಚಲನವಲಗಳು ಬದಲಾಗುತ್ತಿವೆ. ಸಹಜವಾಗಿ ಅವರು ಮಾದಕ ವಸ್ತುಗಳಾದ ಡ್ರಗ್ಸ್, ಗಾಂಜಾ, ಅಫೀಮು ಮುಂತಾದವುಗಳ ಮಾರಾಟ ಹಾಗೂ ಸೇವನೆಗೆ ಪ್ರೇರೇಪಣೆಗೆ ಒಳಗಾಗುತ್ತಿದ್ದಾರೆ. ಒಮ್ಮೆ ಅದರ ಬಲೆಯಲ್ಲಿ ಬಿದ್ದರೆ ಜೀವನವೇ ಮುಗಿಯಿತು. ಅದರಿಂದ ಹೊರಬರುವುದು ತೀರಾ ಕಷ್ಟ. ಅದೇ ರೀತಿ ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬ ಪ್ರಜೆ ಪಾಲಿಸಬೇಕು ಎಂದು ಸಲಹೆ ನೀಡಿದರು.

ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿಅಶೋಕ ಅರ್.ಎಚ್ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಪವಿತ್ರವಾದದ್ದು. ಅದನ್ನು ದುಶ್ಚಟಗಳಿಗೆ ಬಲಿಯಾಗಲು ಬಿಡಬೇಡಿ. ಮನುಷ್ಯ ಕೆಟ್ಟದ್ದಕ್ಕೆ ಬೇಗ ಬಲಿಯಾಗುತ್ತಾನೆ. ಆದರೆ ಒಳ್ಳೆಯದನ್ನು ಪಡೆಯಲು ಹಿಂಜರಿಕೆ ಮಾಡುತ್ತಾನೆ. ವಿದ್ಯಾರ್ಥಿಗಳಾದವರು ಉಪನ್ಯಾಸಕರು ಹೇಳುವಂತ ಮಾತುಗಳನ್ನು ಪಾಲಿಸಬೇಕು ಎಂದು ಹೇಳಿದರು.

ನನಗೆ ಗುಂಡಿಕ್ಕಿದರೂ ರೈತರ ಪರ ಹೋರಾಡುವೆ: ಸಂಸದ ಮುನಿಸ್ವಾಮಿ

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಲ್ಮೇಶ ಟಿ.ಕಿವಡ ಮಾತನಾಡಿದರು. ಪ್ರಾಚಾರ್ಯ ಎಂ.ಆರ್. ಭಾಗಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ೨ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ನಾಗೇಶ ಪಾಟೀಲ್, ಉಪಾಧ್ಯಕ್ಷ ನ್ಯಾಯವಾದಿಗಳ ಸಂಘ ಬಿ.ಎನ್.ಪಾಟೀಲ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಸ್.ಆರ್.ವಾಲಿ ಹಾಜರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಸ್ವಾಗತಿಸಿದರು. ಕವಿತಾ ಮಲಬನ್ನವರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಮ್.ತೇಲಿ ವಂದಿಸಿದರು.

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!