ಆರೋಗ್ಯ ಕಡೆ ನಿರ್ಲಕ್ಷ್ಯ ಬೇಡ: ಕೃಷ್ಣಮೂರ್ತಿ

By Kannadaprabha News  |  First Published Jul 5, 2023, 7:32 AM IST

ಗ್ರಾಮೀಣ ಭಾಗದ ಜನರಿಗೆ ಹಾಗೂ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಪಿಡಿಓ ಕೃಷ್ಣಮೂರ್ತಿ ತಿಳಿಸಿದರು.


 ಗುಬ್ಬಿ :  ಗ್ರಾಮೀಣ ಭಾಗದ ಜನರಿಗೆ ಹಾಗೂ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಪಿಡಿಓ ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಎಂ.ಎನ್‌.ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಮೃತ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಬಡವರು ಆರೋಗ್ಯದ ಕಡೆ ನಿರ್ಲಕ್ಷ್ಯ ತೋರದೆ ಶಿಬಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಇರುವ ರೋಗಿಗಳಿಗೆ ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಶಿಬಿರದಲ್ಲಿ ಬಿಪಿ ಶುಗರ್‌, ಮೇಧು ಮೇಹ, ರಕ್ತದೊತ್ತಡ ಮುಂತಾದ ಎಲ್ಲ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

Tap to resize

Latest Videos

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ನಟರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಯೋಗೀಶ್‌, ಉಪಾಧ್ಯಕ್ಷ ದಿಲೀಪ್‌ಕುಮಾರ್‌, ಸದಸ್ಯರಾದ ರವೀಶ್‌, ಶೈಲಜಾ, ತಾಲೂಕು ಸಂಯೋಜಕ ರಾಘವೇಂದ್ರ, ತಿಪ್ಪೇಸ್ವಾಮಿ, ವೈದ್ಯಾಧಿಕಾರಿ ಸವಿತಾ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಶೋಷಿತ ವರ್ಗದ ಬಗ್ಗೆ ಕರುಣೆ ಇರಲಿ

ಬೆಂಗಳೂರು (ಜು.01): ವೈದ್ಯೊ ನಾರಾಯಣೊ ಹರಿ ಎಂದು ದೇವರ ರೀತಿಯಲ್ಲಿ ಜನ ಕಾಣ್ತಾರೆ. ರಾಷ್ಟ್ರದಲ್ಲಿ ಒಂದು ದೊಡ್ಡ ಸಂಕಷ್ಟ ಕೋವಿಡ್ ಎದುರಾದಾಗ ತಮ್ಮ ಜೀವ ಪಣ ಇಟ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ನೀಡಿ ಗುಣಪಡಿಸಿದ್ರು. ಅವರ ಸೇವೆ ದೊಡ್ಡದು, ಒಬ್ಬ ರೋಗಿ ಸಾವಿನ ದವಡೆಯಿಂದ ಪಾರಾದ್ರೆ ಆತ ಜೀವ ಇರುವವರೆಗೂ ನೆನೆಯುತ್ತಾನೆ  ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜೊತೆಗೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಶಸ್ತಿ ಪಡೆದವರಿಗೆ ಅಭಿನಂದಿಸಿ ಅವರಿಗೆ ಈ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿಯನ್ನ ನೀಡಲಿದೆ. ಇದು ಬೇರೆಯವರಿಗೂ ಪ್ರೇರಣೆ ಆಗಲಿದೆ. ವೈದ್ಯರು ಉತ್ತಮ ಸೇವೆ ಮಾಡಬೇಕು ಎಂದರು. 

ವೈದ್ಯರು ಎಲ್ಲರು ಉತ್ತಮ ಸೇವೆ ನೀಡ್ತಾರೆ. ನಮ್ಮ ಸಮಾಜದಲ್ಲಿ ತಾರತಮ್ಯ ಇದೆ. ಶ್ರೀಮಂತರು ದುಡ್ಡು ಇರುತ್ತೆ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಾರೆ. ಆದರೆ ಬಡವರಿಗೆ ಅದು ಕಷ್ಟ. ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ರೆ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಆದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕೆಂಬ ಮನೋಭಾವ ಮೂಡಿದೆ. ಇದು ಬದಲಾವಣೆ ಆಗಬೇಕಾದ್ರೆ, ತಾರತಮ್ಯ ಹೋಗಬೇಕಾದ್ರೆ,  ಶಿಕ್ಷಣ, ಆರೋಗ್ಯ, ವಸತಿ , ಅನ್ನ ಎಲ್ಲರಿಗೂ ಸಿಗಬೇಕು. ಆಗ ಸಮಾಜದ ಸರ್ವತೋಮುಖ ಅಭಿವೃದ್ಧಿ ಆಗುತ್ತೆ ಎಂದು ತಿಳಿಸಿದರು. 

ಸಂಸದ ಮುನಿಸ್ವಾಮಿ ಹೇಳಿಕೆಗೆ ಕಿಮ್ಮತ್ತಿನ ಬೆಲೆ ಇಲ್ಲ: ಶಾಸಕ ನಂಜೇಗೌಡ

ನನ್ನ ಊರು ಸಿದ್ದರಾಮಯ್ಯನಹುಂಡಿ. ಅಲ್ಲಿ ಸರ್ಕಾರಿ ಆಸ್ಪತ್ರೆ ಇದೆ, ಅಲ್ಲಿ ವೈದ್ಯರಿಲ್ಲ. ನೀನು ಮುಖ್ಯಮಂತ್ರಿ ಆಗಿದ್ದೀಯಾ ಡಾಕ್ಟರ್ ಇಲ್ಲ ಅಂತಾರೆ. ನೋಡಿ ಎಂತಹ ಪರಿಸ್ಥಿತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹಾಸ್ಯ ಚಟಾಕಿಯನ್ನು ಹಾರಿಸಿದರು. ಸಮಾಜ ಶೋಷಿತ ವರ್ಗದ ಬಗ್ಗೆ ಅಂತಕರಣ ಇರಬೇಕು. ವೈದ್ಯರಿಗೆ ಅಂತಕರಣ ಇರಬೇಕು, ವೈದ್ಯರಿಗೆ ಇರೊಲ್ಲ ಎಂದು ಹೇಳ್ತಿಲ್ಲ. ಪ್ರತಿಯೊಬ್ಬ ವೈದ್ಯರಿಗೆ ಅಂತಃಕರಣ ಇರಬೇಕು. ಬಹಳಷ್ಟು ವೈದ್ಯರು ಹಳ್ಳಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕ್ತಾರೆ. ಇದಕ್ಕಾಗಿ ಕಾಯ್ದೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯ್ತು. ವೈದ್ಯರು  ಸುಪ್ರೀಂಕೋರ್ಟ್‌ಗೆ ಹೋದ್ರು, 

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಿಸಲು ಸಿಎಂ ಬಳಿ​ಗೆ ನಿಯೋ​ಗ: ಸಚಿವ ಡಿ.ಸುಧಾಕರ್‌

click me!