ಹುಡುಗನಿಗೆ ಅಡಕೆ ತೋಟ ಐತಾ? ನೌಕರಿ ಇದೆಯಾ ಅಂತ ಕೇಳ್ಬೇಡಿ: ಹೆಣ್ಮಕ್ಕಳಿಗೆ ಸ್ವಾಮೀಜಿ ಕಿವಿಮಾತು

Published : Apr 21, 2026, 11:39 AM IST
Swamiji

ಸಾರಾಂಶ

ಮಲೇಬೆನ್ನೂರಿನಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ, ರಟ್ಟಿಹಳ್ಳಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಕನ್ಯೆಯ ಪೋಷಕರಿಗೆ ಮಹತ್ವದ ಕಿವಿಮಾತು ಹೇಳಿದರು. ವರನ ಆಸ್ತಿ, ನೌಕರಿಗಿಂತ ಅವನ ಪರಿಶುದ್ಧ ಕಾಯಕ ಮತ್ತು ಉತ್ತಮ ವಿಚಾರಗಳಿಗೆ ಬೆಲೆ ಕೊಟ್ಟು ಹೆಣ್ಣು ನೀಡುವಂತೆ ಅವರು ಸಲಹೆ ನೀಡಿದರು.

ದಾವಣಗೆರೆ: ಕನ್ಯೆ ಹೊಂದಿರುವ ಪೋಷಕರು ವರ ನೋಡಬೇಕಾದರೆ ಅಡಕೆ ತೋಟ ಐತಾ?, ತಂದೆ ತಾಯಿ ಇದಾರಾ?, ನೌಕರಿ ಇದೆಯಾ? ಎಂದು ಕೇಳುವ ಮನಃಸ್ಥಿತಿ ಬಿಡಬೇಕು ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಲೇಬೆನ್ನೂರು ಪಟ್ಟಣದ ನಂದಿಗುಡಿ ರಸ್ತೆಯಲ್ಲಿ ಬಸವ ಜಯಂತಿ ಅಂಗವಾಗಿ ಸೋಮವಾರ ಹಮ್ಮಿಕೊಂಡ ಆಂಜನೇಯಸ್ವಾಮಿ ರಥೋತ್ಸವ, ೨೦ನೇ ವಾರ್ಷಿಕ ಸಾಮೂಹಿಕ ವಿವಾಹ ವಾರ್ಷಿಕೋತ್ಸವ ಮತ್ತು ಧಾರ್ಮಿಕ ಸಮಾರಂಭ ಉಧ್ಘಾಟಿಸಿ ಸಂದೇಶ ನೀಡುತ್ತ, ಹಣ ಆಸ್ತಿ ತೋಟ ಇದ್ರೆ ಮಗಳು ಸುಖವಾಗಿ ಇರ್ತಾಳೆ ಎನ್ನುವ ಮನೋಸ್ತಿತಿ ಬಿಟ್ಟು ಮಗನ ಪರಿಶುಧ್ದ ಕಾಯಕ ಉತ್ತಮ ವಿಚಾರ ನೋಡಿ ಹೆಣ್ಣು ಕೊಡುವ ವಿಶಾಲ ಮನಸ್ಸು ಮಾಡುವುದು ಅಗತ್ಯವಿದೆ ಎಂದರು.

ಬದುಕಿನ ಮೌಲ್ಯ

ಕುಟುಂಬದ ಸದಸ್ಯರು ಪ್ರೀತಿ ವಿಶ್ವಾಸದಿಂದ ನಡೆದಲ್ಲಿ ಬದುಕಿನ ಮೌಲ್ಯಗಳು ಉಳಿಯುತ್ತವೆ ಎಂದು ಧರ್ಮಶಾಸ್ತ್ರ ಹೇಳಿದೆ. ಹಿಂದೆ ಕಷ್ಟದ ಜೀವನ ಆರೋಗ್ಯವೂ ಇತ್ತು,ವಾಹನ ಇರಲಿಲ್ಲ,ನಂದವೂ ಇತ್ತು, ಪ್ರಸ್ತುತ ಮೊಬೈಲ್, ಕಲಬೆರಕೆ ಆಹಾರ, ಕಾರು ಇವೆ, ನೆಮ್ಮದಿ ಇಲ್ಲದಾಗಿದೆ. ಸಾಮರಸ್ಯದ ಕೊರತೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಜರ್ಮನಿಯ ಗುರುದ್ವಾರದಲ್ಲಿ ಘರ್ಷಣೆ: ರಕ್ಷಿಸಲು ಬಳಸುವ ಕಿರ್ಪಾನ್ ಆಯುಧದಿಂದಲೇ ರಕ್ತ ಹರಿಸಿದರು: 11 ಜನರಿಗೆ ಗಾಯ

ಖಂಡೆರಾಯನಹಳ್ಳಿ ಮಠದ ನಾಗರಾಜಾನಂದ ಸ್ವಾಮೀಜಿ, ಶಾಸಕ ಬಿ.ಪಿ.ಹರೀಶ್, ಹನಗವಾಡಿ ವೀರೇಶ್, ವೀರಯ್ಯ, ಗಂಗಾಧರ್, ಪರುಶುರಾಮಪ್ಪ, ಧರ್ಮಣ್ಣ, ಶೇಖರಪ್ಪ, ಸಾಬಿರ್‌ಅಲಿ, ಪುರಸಭಾ ಅಧ್ಯಕ್ಷೆ ಅಕ್ಕಮ್ಮ ಸುರೇಶ್,ಮಂಜುನಾಥ್, ಗಜೇಂದ್ರಪ್ಪ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಮತ್ತಿತರರು ಇದ್ದರು.

ಆರು ಜೋಡಿಗಳು ಹೊಸ ದಾಂಪತ್ಯಕ್ಕೆ ಕಾಲಿಟ್ಟರು. ಸಹಸ್ರಾರು ಭಕ್ತರು ಇದ್ದರು.

ಇದನ್ನೂ ಓದಿ: ಗದಗ: ರೈತರಿಗೆ ಕನ್ಯಾ ಕೊಡುವವರಿಗೆ ₹2 ಲಕ್ಷ ಸಹಾಯಧನ ನೀಡಿ: ಸರ್ಕಾರಕ್ಕೆ ಸಿದ್ದನಕೊಳ್ಳದ ಶ್ರೀಗಳು ಮನವಿ

PREV
Read more Articles on
click me!

Recommended Stories

ರಾಸಣಗಿ ಬಲಭೀಮಸೇನ ದೇವರಿಗೆ ಪಾದರಕ್ಷೆ ಸಮರ್ಪಣೆ; 5 ವರ್ಷಕ್ಕೊಮ್ಮೆ ನಡೆಯುವ ಸಂಪ್ರದಾಯ
ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಕಾರು