ಸಿದ್ದರಾಮಯ್ಯ ಒಂದು ರೀತಿ ಮೊಂಡ ಇದ್ದ ಹಾಗೆ: ಪರಮೇಶ್ವರ್ ಹೀಗೆ ಹೇಳಿದ್ಯಾಕೆ?

By Web DeskFirst Published Dec 8, 2018, 8:01 PM IST
Highlights

ಸಿದ್ದರಾಮಯ್ಯ ಒಂದು ರೀತಿ ಮೊಂಡ ಇದ್ದ ಹಾಗೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಮಾತಿನ ಮೂಲಕ ಸಿದ್ದರಾಮಯ್ಯ ಅವರನ್ನ ಹೊಗಳಿದ್ರಾ? ಅಥವಾ ತೆಗಳಿದ್ರಾ?

ಚಾಮರಾಜನಗರ, [ಡಿ.08]: ಸಿದ್ದರಾಮಯ್ಯ ಒಂದು ರೀತಿ ಮೊಂಡ ಇದ್ದ ಹಾಗೆ. ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುತ್ತಾರೆ. ಯಾವ ಸಿಎಂ ಕೂಡ ಇಲ್ಲಿಗೆ ಬರಲು ಹೆದರುತ್ತಿದ್ದರು. ಆದರೆ, ಸಿದ್ದರಾಮಯ್ಯ ಅವರು ಹಲವು ಸಲ ಬಂದು ಹೋಗಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ,ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರನ್ನ ಪ್ರಶಂಸಿದ್ದಾರೆ.

ಚಾಮರಾಜನಗರದಲ್ಲಿ ಇಂದು (ಶನಿವಾರ] ನಳಂದ ಬೌದ್ಧ ವಿಶ್ವವಿದ್ಯಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ ಪರಂ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹಲವು ಬಾರಿ ಬಂದಿದ್ದರು. ಇಲ್ಲಿಗೆ ಬಂದರೂ ಕೂಡ 5 ವರ್ಷ ಈ ಗಿರಾಕಿ ಅಳ್ಳಾಡಲಿಲ್ಲ. 

ಚಾಮರಾಜನಗರಕ್ಕೆ ಆ ರೀತಿಯ ಹೆಸರು ಬಂದಿದ್ದಕ್ಕೆ ಈ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಾಮರಾಜನಗರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಮಿಶ್ರ ಸರಕಾರ 5 ವರ್ಷ ಪೂರೈಸಲಿದೆ. ಎಚ್​ಡಿಕೆ 5 ವರ್ಷ ಸಿಎಂ ಆಗಿರುತ್ತಾರ ಎಂಬ ಪ್ರಶ್ನೆ ಅಪ್ರಸ್ತುತ. ಒಟ್ಟಾರೆ ಸರಕಾರ ಸುಭದ್ರವಾಗಿದೆ. ಕೇಂದ್ರ ಪ್ರಕೃತಿ ವಿಕೋಪ ಪರಿಹಾರಕ್ಕೆ ಹಣ ಕೊಟ್ಟಿದೆ. 

ಇದನ್ನು ಹೊರತುಪಡಿಸಿದರೆ ಯಾವುದೇ ಹಣ ಕೊಟ್ಟಿಲ್ಲ. ನಮ್ಮ ಸರಕಾರದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ಬಿಜೆಪಿಯ ಅಶೋಕ್ ಅವರಿಗೆ ಮಾಹಿತಿ ಇಲ್ಲ. ನಮ್ಮ ಸರಕಾರ ದಿವಾಳಿಯಾಗಿದ್ದರೆ ರೈತರ ಸಾಲಮನ್ನಾ ಮಾಡುತ್ತಿರಲಿಲ್ಲ. 

ಕಾಂಗ್ರೆಸ್, ಜೆಡಿಎಸ್ ಅವರಿಗೆ ಇರುವಷ್ಟು ಆಡಳಿತ ಅನುಭವ ಬಿಜೆಪಿಯವರಿಗಿಲ್ಲ. ಅವರನ್ನು ಕೇಳಿಕೊಂಡು ನಾವು ಆಡಳಿತ ನಡೆಸಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

click me!