ನಿರ್ಲಕ್ಷ್ಯದಿಂದ ವೃದ್ಧೆಯೊಬ್ಬರ ಸಾವಿಗೆ ಕಾರಣವಾದ ಆರೋಪದ ಮೇಲೆ ನಗರದ ವೈದ್ಯರೊಬ್ಬರಿಗೆ ಶಿಕ್ಷೆಯ ಎಚ್ಚರಿಕೆ ನೀಡಿ ಕರ್ನಾಟಕ ವೈದ್ಯಕೀಯ ಮಂಡಳಿ ಹೊರಡಿಸಿದ ನೋಟಿಸ್ ರದ್ದುಪಡಿಸಿರುವ ಹೈಕೋರ್ಟ್, ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವನ್ನು ವೈದ್ಯರ ನಿರ್ಲಕ್ಷ್ಯದಿಂದಲೇ ಸಂಭವಿಸಿದ ಸಾವು ಎಂದು ಆರೋಪಿಸುವುದು ಹೆಚ್ಚಾಗಿದೆ.
ಬೆಂಗಳೂರು (ಜ.18): ನಿರ್ಲಕ್ಷ್ಯದಿಂದ ವೃದ್ಧೆಯೊಬ್ಬರ ಸಾವಿಗೆ (Death) ಕಾರಣವಾದ ಆರೋಪದ ಮೇಲೆ ನಗರದ ವೈದ್ಯರೊಬ್ಬರಿಗೆ ಶಿಕ್ಷೆಯ ಎಚ್ಚರಿಕೆ ನೀಡಿ ಕರ್ನಾಟಕ ವೈದ್ಯಕೀಯ ಮಂಡಳಿ ಹೊರಡಿಸಿದ ನೋಟಿಸ್ ರದ್ದುಪಡಿಸಿರುವ ಹೈಕೋರ್ಟ್ (High Court), ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವನ್ನು ವೈದ್ಯರ ನಿರ್ಲಕ್ಷ್ಯದಿಂದಲೇ (Doctor Negligence) ಸಂಭವಿಸಿದ ಸಾವು ಎಂದು ಆರೋಪಿಸುವುದು ಹೆಚ್ಚಾಗಿದೆ. ಇದರಿಂದ ವೈದ್ಯರು ಮತ್ತು ರೋಗಿಗಳ ನಡುವಿನ ಆರೋಗ್ಯಕರ ಸಂಬಂಧ ಹಳಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕ ವೈದ್ಯಕೀಯ ಮಂಡಳಿಯ ಆದೇಶ ರದ್ದುಪಡಿಸುವಂತೆ ಕೋರಿ ನಗರದ ಡಾ. ಗಣೇಶ್ ನಾಯಕ್ (Dr.Ganesh Nayak) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ (Krishna S Dixit) ಅವರ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹಲಸೂರಿನ 65 ವರ್ಷದ ವೃದ್ಧೆಯೊಬ್ಬರು ಆ್ಯಂಜಿಯೋಪ್ಲಾಸ್ಟಿ (Angioplasty) ಮಾಡಿಸಿಕೊಂಡ ಆರು ತಿಂಗಳ ನಂತರ ಸಾವನ್ನಪ್ಪಿದ್ದರು. ಸಾವಿಗೆ ಆ್ಯಂಜಿಯೋಪ್ಲಾಸ್ಟಿ ನೆರವೇರಿಸಿದ ವೈದ್ಯ ಗಣೇಶ್ ನಾಯಕ್ ಕಾರಣ ಎಂದು ಆರೋಪಿಸಿ ಮೃತ ಕುಟುಂಬ ಸದಸ್ಯರು ಕರ್ನಾಟಕ ವೈದ್ಯಕೀಯ ಮಂಡಳಿಗೆ ದೂರು ಸಲ್ಲಿಸಿದ್ದರು.
undefined
Karnataka High Court: ರೇಪ್ ಸಂತ್ರಸ್ತೆ ವಯಸ್ಸು ಸಾಬೀತು ಹೊಣೆ ಪ್ರಾಸಿಕ್ಯೂಷನ್‌ದು
ವಿಚಾರಣೆ ನಡೆಸಿದ್ದ ಮಂಡಳಿ, ವೈದ್ಯರ ಮೇಲೆ ವೃತ್ತಿ ನಿರ್ಲಕ್ಷ್ಯ ಆರೋಪ ಹೊರಿಸಿ ಶಿಕ್ಷೆಯ ಎಚ್ಚರಿಕೆ ನೀಡಿ ಆದೇಶ ನೀಡಿತ್ತು. ಈ ಆದೇಶ ರದ್ದು ಕೋರಿ ಡಾ.ಗಣೇಶ್ ನಾಯಕ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೃತ ವೃದ್ಧೆ ದೀರ್ಘಕಾಲ ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಡಾ.ಗಣೇಶ್ ನಾಯಕ್ ಅವರಿಗಿಂತ ಮೊದಲು ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರು. ಗಣೇಶ್ ಅವರಿಂದ ಅಂಜಿಯೋಪ್ಲಾಸ್ಟಿಗೆ ಚಿಕಿತ್ಸೆ ಪಡೆದ ತುಂಬಾ ಸಮಯದ ನಂತರ ಆಕೆ ಸಾವನ್ನಪ್ಪಿದ್ದಾರೆ. ಆದರೆ, ಸಾವಿಗೆ ಡಾ. ಗಣೇಶ್ ಅವರೇ ಕಾರಣ ಎಂದು ಆರೋಪಿಸಲಾಗಿದೆ. ಆದರೆ, ರೋಗಿಯು ಹಿಂದೆ ಪಡೆದ ಚಿಕಿತ್ಸೆ ಮತ್ತು ವೈದ್ಯರ ಬಗ್ಗೆ ದೂರುದಾರರು ಮಾಹಿತಿಯೇ ನೀಡಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧದ ಆರೋಪದಲ್ಲಿ ಹುರಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವನ್ನು ವೈದ್ಯರ ನಿರ್ಲಕ್ಷ್ಯದಿಂದಲೇ ಸಂಭವಿಸಿದ ಸಾವು ಎಂದು ಆರೋಪಿಸುವುದು ಹೆಚ್ಚಾಗಿದೆ. ಆ ಮೂಲಕ ಹಲವಾರು ಪ್ರಕರಣಗಳಲ್ಲಿ ರೋಗಿಯು ದೀರ್ಘಕಾಲೀನ ರೋಗಗಳಿಂದ ಬಳಲುವ ಕಾರಣಗಳನ್ನು ಮರೆ ಮಾಚಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ವೈದ್ಯರು ಮತ್ತು ಅಧಿಕಾರಿಗಳ ವಿರುದ್ಧ ಮೊಕದ್ದಮೆಗಳು ದಾಖಲಾಗುತ್ತಿವೆ. ಇದರಿಂದ ವೈದ್ಯರು ಮತ್ತು ರೋಗಿಗಳ ನಡುವಿನ ಆರೋಗ್ಯಕರ ಸಂಬಂಧ ಹಳಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿತು.
Karnataka High Court: ನ್ಯಾಯಬೆಲೆ ಅಂಗಡಿ ಲೈಸನ್ಸ್‌ಗೆ ಷರತ್ತು: ಹೈಕೋರ್ಟ್ ಆದೇಶ
ಕೆನಡಾ ಪೌರತ್ವ ಮಗುವನ್ನ ಸುಪರ್ದಿಗೆ ಕೇಳಿದ್ದಕ್ಕೆ ದಂಡ: ಕೆನಡಾ ಪೌರತ್ವ (Citizenship of Canada) ಹೊಂದಿರುವ ಮಗುವಿನ ಸುಪರ್ದಿ ವಿಚಾರ ತೀರ್ಮಾನಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ ಎಂದು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿರುವ ಹೈಕೋರ್ಟ್ (High Court of Karnataka), ನ್ಯಾಯಾಲಯಕ್ಕೆ ಅನೇಕ ಅಂಶಗಳನ್ನು ಮರೆಮಾಚಿದ ಕಾರಣಕ್ಕಾಗಿ ಮಗಳ ಸುಪರ್ದಿಗೆ ಕೋರಿದ್ದ ಮಹಿಳೆಗೆ (Woman) 50 ಸಾವಿರ ದಂಡ (Fine) ವಿಧಿಸಿದೆ.
ಮಗಳ ಸುಪರ್ದಿ ವಿಚಾರವಾಗಿ ಬೆಂಗಳೂರಿನ (Bengaluru) ಭೂಪಸಂದ್ರದಲ್ಲಿ ವಾಸವಿರುವ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ. ಮಹಿಳೆಯು ದಂಡದ ಹಣವನ್ನು ನಾಲ್ಕು ವಾರದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದರೆ ಮಹಿಳೆ ವಿರುದ್ಧ ಪ್ರಾಧಿಕಾರ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು ಎಂದು ತಿಳಿಸಿದೆ.