ಕಲಬುರಗಿ: ಕೊರೋನಾ ಸೋಂಕಿನಿಂದ ವೈದ್ಯೆ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್‌

By Suvarna News  |  First Published May 1, 2020, 10:23 AM IST

ಕವಲಗಾ ಗ್ರಾಮದ 1 ವರ್ಷದ ಬಾಲಕ (ಸಂಖ್ಯೆ- 274) ನಿಂದ ವೈದ್ಯೆಗೆ ಸೋಂಕು| ಈ ವೈದ್ಯೆ ಜಿಮ್ಸ್‌ಗೆ ದಾಖಲಾಗಿದ್ದ  ಬಾಲಕನಿಗೆ ಚಿಕಿತ್ಸೆ ನೀಡಿದ್ದರು| ಏ. 7 ರಂದು ಕೊರೋನಾ ಸೋಂಕು ದೃಢವಾದರಿಂದ ಇ.ಎಸ್.ಐ.ಸಿ.ಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೈದ್ಯೆ|


ಕಲಬುರಗಿ(ಮೇ.01): ಕೊರೋನಾ ಸೋಂಕಿಗೆ ತುತ್ತಾಗಿ ಇಎಸ್‍ಐಸಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ 23 ವರ್ಷದ ವೈದ್ಯೆ (ಸಂಖ್ಯೆ- 302) ಕೊರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಗುರುವಾರ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

ಈ ವೈದ್ಯೆ ಕವಲಗಾ ಗ್ರಾಮದ 1 ವರ್ಷದ ಬಾಲಕ (ಸಂಖ್ಯೆ- 274) ನಿಂದ ಸೋಂಕು ತಗುಲಿತ್ತು. ಈ ವೈದ್ಯೆಯೇ ಜಿಮ್ಸ್‍ಗೆ ದಾಖಲಾಗಿದ್ದ ಈ ಬಾಲಕನಿಗೆ ಚಿಕಿತ್ಸೆ ನೀಡಿದ್ದರು. ಏ. 7 ರಂದು ಕೊರೋನಾ ಸೋಂಕು ದೃಢವಾದರಿಂದ ಇ.ಎಸ್.ಐ.ಸಿ.ಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

Latest Videos

undefined

ಮಹಾಮಾರಿ ಕೊರೋನಾ ಗೆದ್ದ ಪೋರನಿಗೆ ಹಾರ ಹಾಕಿ ಭರ್ಜರಿ ಸ್ವಾಗತ..!

ಯುವತಿ ಗುಣಮುಖರಾಗಿ ಮನೆಗೆ ತೆರಳಿದ ಈ ಬೆಳವಣಿಗೆಯೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ ಪತ್ತೆಯಾದ 52 ಜನರಲ್ಲಿ ಒಟ್ಟು 8 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 39 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

click me!