ನಿಮಗೆ ಜಾತಿ ಬೇಕಾ ಅಥವಾ ಅಭಿವೃದ್ಧಿ ಕೆಲಸ ಮಾಡುವವನು ಬೇಕಾ : ಸಾ ರಾ

By Kannadaprabha News  |  First Published Mar 8, 2023, 6:03 AM IST

ಎದ್ದರೆ ಜುಟ್ಟು ಹಿಡಿಯುವುದು ಬಗ್ಗಿದರೆ ಕಾಲು ಹಿಡಿಯುವುದು ಎನ್ನುವ ಜನರನ್ನು ನೀವು ನೋಡಿದ್ದೀರಿ. ಆದರೆ, ನಿಮಗೆ ಜಾತಿ ಬೇಕಾ ಅಥವಾ ಅಭಿವೃದ್ಧಿ ಕೆಲಸ ಮಾಡುವವನು ಬೇಕಾ ನೀವೇ ತೀರ್ಮಾನಿಸಿ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.


  ಸಾಲಿಗ್ರಾಮ : ಎದ್ದರೆ ಜುಟ್ಟು ಹಿಡಿಯುವುದು ಬಗ್ಗಿದರೆ ಕಾಲು ಹಿಡಿಯುವುದು ಎನ್ನುವ ಜನರನ್ನು ನೀವು ನೋಡಿದ್ದೀರಿ. ಆದರೆ, ನಿಮಗೆ ಜಾತಿ ಬೇಕಾ ಅಥವಾ ಅಭಿವೃದ್ಧಿ ಕೆಲಸ ಮಾಡುವವನು ಬೇಕಾ ನೀವೇ ತೀರ್ಮಾನಿಸಿ ಎಂದು ಶಾಸಕ ಸಾ.ರಾ.ಮಹೇಶ್‌ ಹೇಳಿದರು.

ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ನಿರ್ಮಿಸಲಾದ ಶ್ರೀಮಹರ್ಷಿ ವಾಲ್ಮೀಕಿ ಭವನ ಉದ್ಘಾಟಿಸಿ ಮಾತನಾಡಿ, 35 ಲಕ್ಷದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕವಾಗಿ ಅಡುಗೆ ಮನೆ ಮತ್ತು ಅದಕ್ಕೆ ಬೇಕಾದ ಪಾತ್ರೆಗಳು ಹಾಗೂ ಮೇಲ್ಛಾವಣಿಯಲ್ಲಿ ಊಟದ ಹಾಲಿನ ವ್ಯವಸ್ಥೆಯನ್ನು 50 ಲಕ್ಷವಾದರೂ ಪರವಾಗಿಲ್ಲ. ನಾನೇ ಮಾಡಿಕೊಡುತ್ತೇನೆ. ಯಾವುದೇ ಅನುಮಾನ ಬೇಡ ನನ್ನನ್ನು ನಂಬಿ ಎಂದರು.

Tap to resize

Latest Videos

ಅದೇ ರೀತಿ ಈ ಗ್ರಾಮದಲ್ಲಿ ಉಪ್ಪಾರರು, ಕುರುಬ ಸಮಾಜದವರು, ವಿಶ್ವ ಕರ್ಮ ಸಮಾಜದವರು ಇನ್ನೂ ಹಲವು ಸಮಾಜದವರು ಇದ್ದು, ಅವರಿಗೂ ಕೂಡ ಸಮುದಾಯ ಭವನ ನಿರ್ಮಾಣ ಮಾಡಲು ನನ್ನ ಅನುದಾನ ನೀಡುತ್ತೇನೆ. ಈಗಾಗಲೇ ಉಪ್ಪರ ಸಮುದಾಯ ಭವನಕ್ಕೆ 9 ಲಕ್ಷ ಅನುದಾನ ನೀಡಿದ್ದೇನೆ, ಇನ್ನು ಉಳಿದ ಸಮಾಜಗಳಿಗೂ ದೇವಸ್ಥಾನ ನಿರ್ಮಾಣ ಮಾಡಲು ನನ್ನ ಕೈಯಲ್ಲಾದ ವೈಯಕ್ತಿಕ ಸಹಾಯ ಮಾಡಿದ್ದೇನೆ ಎಂದರು.

ಇಡೀ ರಾಜ್ಯದಲ್ಲಿ ನೀಡಿದ್ದು, ಮೊದಲು ಕೆ.ಆರ್‌.ನಗರ ತಾಲೂಕಿನಲ್ಲಿ ನಾನು ಆ ನಂತರ ಅದನ್ನುಸರ್ಕಾರ ಅನ್ನಭಾಗ್ಯ ಯೋಜನೆಯಾಗಿ ಮಾಡಿಕೊಂಡರು. ತಾಲೂಕಿನಲ್ಲಿ ವೋಟಿಗಾಗಿ ಈಗ ಎಲ್ಲ ಗ್ರಾಮಗಳನ್ನು ಸುತ್ತುತ್ತಿರುವ ಕೆಲವರು ಕೋವಿಡ್‌ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್‌ ಮುಖಂಡರನ್ನು ಪರೋಕ್ಷವಾಗಿ ಪ್ರಶ್ನಿಸಿದರು.

ಯಾವುದೇ ಪಕ್ಷ ಜಾತಿ ಎನ್ನದೆ ಸಮಗ್ರವಾಗಿ ತಾಲೂಕು ಅಭಿವೃದ್ಧಿಗೆ ಪ್ರಯತ್ನಿಸಿದ್ದೇನೆ. ಈ ಹಿಂದೆ ಶಾಸಕರು ಸಚಿವರಾಗಿದ್ದ ಅಭಿವೃದ್ಧಿ ಕೆಲಸಗಳನ್ನು ನೋಡಿ ನಾನು ಶಾಸಕನಾದ ಮೇಲೆ ಮಾಡಿರುವ ಅಭಿವೃದ್ಧಿ ಕೆಲಸವನ್ನ ನೋಡಿ. ಜಾತಿ ಬೇಕಾ ಅಥವಾ ಅಭಿವೃದ್ಧಿ ಮಾಡುವವನು ಬೇಕಾ ಎಂದು ನೀವೇ ತೀರ್ಮಾನ ಮಾಡಿಕೊಳ್ಳಿ, ತಾಲೂಕಿನಲ್ಲಿ ಶಾಸಕ ನಾಗುವ ಮುಂಚೆ ಮತ್ತು ಶಾಸಕರಾದ ಮೇಲೆ ಪ್ರತಿ ಗ್ರಾಮದಲ್ಲೂ ಪ್ರತಿ ಕುಟುಂಬದ ಕಷ್ಟಸುಖದಲ್ಲಿ ಸ್ಪಂದಿಸಿದ್ದೇನೆ ಎಂದರು.

ತಾಲೂಕು ನಾಯಕ ಸಮಾಜದ ಹಿರಿಯ ಮುಖಂಡರಾದ ಕುಮಾರ್‌, ಕುಚೇಲ, ಮಾದೇವ್‌, ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಈರಣ್ಣ, ಜಿಪಂ ಎಂಜಿನಿಯರ್‌ ವಿನುತ್‌, ಸ್ವಾಮಿ, ಗ್ರಾಪಂ ಅಧ್ಯಕ್ಷೆ ನಂದಿನಿರಮೇಶ್‌, ಗ್ರಾಪಂ ಅಧ್ಯಕ್ಷ ತುಳಸಿರಾಮ…, ಮಾಜಿ ಅಧ್ಯಕ್ಷ ಭವ್ಯಬಲರಾಮ… ಇದ್ದರು.

click me!