ಅನುರಾಧಾ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಮುತ್ತಪ್ಪ ರೈ ಅವರಿಗೆ ಸೇರಿದ ಯಾವುದೇ ಆಸ್ತಿಯನ್ನು ಪರಾಭಾರೆ ಮಾಡಬಾರದು| ಮೂರನೇ ವ್ಯಕ್ತಿಗಳ ಪರವಾಗಿ ಹಕ್ಕು ಸೃಷ್ಟಿಸಬಾರದು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದ ನ್ಯಾಯಾಯಲಯ|
ಬೆಂಗಳೂರು(ಏ.08): ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಆಸ್ತಿಯನ್ನು ಪರಾಭಾರೆ ಮಾಡದಂತೆ ನಗರದ 19ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮಧ್ಯಂತರ ಆದೇಶ ನೀಡಿದೆ.
ಆಸ್ತಿ ವಿವಾದ ಸಂಬಂಧ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ ಮುತ್ತಪ್ಪ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣದ ಪ್ರತಿವಾದಿಗಳಾದ ಮುತ್ತಪ್ಪ ರೈ ಪುತ್ರರಾದ ರಿಕ್ಕಿ ರೈ ಹಾಗೂ ರಾಕಿ ರೈ ಅವರಿಗೆ ಈ ಆದೇಶ ನೀಡಿದೆ.
ಮುತ್ತಪ್ಪ ರೈ ಮೃತಪಟ್ಟ ಬೆನ್ನಲ್ಲೇ ಶುರುವಾಯ್ತು ಆಸ್ತಿ ವಿವಾದ: ನನಗೂ ಪಾಲು ಕೊಡಿ ಎಂದ ಮಾಜಿ ಡಾನ್ ಪತ್ನಿ
ಅನುರಾಧಾ ಅವರು ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೂ ಮುತ್ತಪ್ಪ ರೈ ಅವರಿಗೆ ಸೇರಿದ ಯಾವುದೇ ಆಸ್ತಿಯನ್ನು ಪರಾಭಾರೆ ಮಾಡಬಾರದು. ಮೂರನೇ ವ್ಯಕ್ತಿಗಳ ಪರವಾಗಿ ಹಕ್ಕು ಸೃಷ್ಟಿಸಬಾರದು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ.
ಮುತ್ತಪ್ಪ ರೈ ಮೃತಪಟ್ಟ ನಂತರ ಒಟ್ಟು ಆಸ್ತಿಯಲ್ಲಿ 3ನೇ ಒಂದು ಭಾಗ ತನಗೆ ಬರಬೇಕು ಎಂದು ಕೋರಿ ಅನುರಾಧಾ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.