ಕರುಣಾನಿಧಿಗೆ ಬೆಂಗಳೂರಿನಲ್ಲೂ ಗೌರವ, ಕೆಂಪೇಗೌಡ ಜಯಂತಿ ಮುಂದಕ್ಕೆ

By Web DeskFirst Published Aug 7, 2018, 10:43 PM IST
Highlights

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ನಿಧನಕ್ಕೆ ಕರ್ನಾಟಕ ರಾಜಧಾನಿ ಬೆಂಗಳೂರು ಸಹ ಕಂಬನಿ ಮಿಡಿದಿದೆ.

ಬೆಂಗಳೂರು[ಆ.7]  ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ವಿಧಿವಶರಾಗಿದ್ದು ತಮಿಳು ಪ್ರಭಾವ ಜಾಸ್ತಿ ಇರುವ ಬೆಂಗಳೂರಿನ ತಮಿಳು ಏರಿಯಾ ಗಳಲ್ಲಿ ಸಹಜ ಸ್ಥಿತಿಯಿದೆ. ಬಾಣಸವಾಡಿ, ಲಿಂಗರಾಜಪುರ, ಕಾಕ್ಸ್ ಟೌನ್ , ಕಮ್ಮನಹಳ್ಳಿಯ ತಮಿಳು ಏರಿಯಾದಲ್ಲಿ ಸಹಜ ಸ್ಥಿತಿಯಿದೆ. ಕರುಣಾನಿಧಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. 

ಕರುಣಾನಿಧಿ ನಿಧನಕ್ಕೆ ಕರ್ನಾಟಕ ಪ್ರತಿಕ್ರಿಯಿಸಿದ್ದು ಹೀಗೆ

ಕೆಂಪೇಗೌಡ ಜಯಂತಿ ಮುಂದಕ್ಕೆ
ಬುಧವಾರ ನಿಗದಿಯಾಗಿದ್ದ ಕೆಂಪೇಗೌಡ ಜಯಂತಿಯನ್ನು ಮುಂದೂಡಲಾಗಿದೆ. ಬಿಬಿಎಂಪಿಯಿಂದ ನಡೆಸಲಾಗುತ್ತಿದ್ದ ಕೆಂಪೇಗೌಡ ಜಯಂತಿಯನ್ನು ಮುಂದೂಡಲಾಗಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್​ ಪ್ರಸಾದ್​ ಅಧಿಕೃತ ಮಾಹಿತಿ ನೀಡಿದ್ದು ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ ನಡೆಯಲಿದೆ. ಎಲ್ಲ ಸರಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲು ತೀರ್ಮಾನಿಸಿದ್ದು ಕೇಂದ್ರ ಸರಕಾರ ಕರುಣಾನಿಧಿಗೆ ಗೌರವ ಸೂಚಿಸಿದೆ.

click me!