
ಬೆಂಗಳೂರು: ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್ ತನ್ನ 25ನೇ ವರ್ಷದ ಸಂಭ್ರಮಾಚರಣೆ ಭಾಗವಾಗಿ ‘ಬಡ್ಡಿ ಬೆಂಚ್ (Buddy Bench)’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದರು. ಆದರೆ ಈ ವೇಳೆ ಇಶಾ ಫೌಂಡೇಶನ್ ನ ಸದ್ಗುರು ಅವರನ್ನು ಭೇಟಿಯಾಗದೆ ವೇದಕೆಯಿಂದ ತೆರಳಿದ ಘಟನೆ ನಡೆದಿದೆ. ಡಿಕೆಶಿ ಕಾರ್ಯಕ್ರಮದಿಂದ ಹೊರಟ ತಕ್ಷಣವೇ ಸದ್ಗುರು ವೇದಿಕೆಗೆ ಬಂದ ಕಾರಣ, ಇಬ್ಬರು ಮುಖಾಮುಖಿಯಾಗಲಿಲ್ಲ. ಇದರಿಂದ ಹಲವಾರು ಊಹಾಪೋಹಗಳಿಗೆ ಕಾರಣವಾಯಿತು.
ಡಿಕೆಶಿ ಕಾರ್ಯಕ್ರಮದಿಂದ ಹೊರಟ ತಕ್ಷಣವೇ ಸದ್ಗುರು ವೇದಿಕೆ ಹತ್ತಿದರು. ಆದರೆ ಭೇಟಿಯಾಗಲಿಲ್ಲ. ಇದರಿಂದ ಹಲವಾರು ಊಹಾಪೋಹಗಳಿಗೆ ಕಾರಣವಾಯಿತು. ಇದಕ್ಕೂ ಮುನ್ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಕೆಶಿ, ಸದ್ಗುರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಆ ಸಂದರ್ಭದಲ್ಲಿ ಭಾರೀ ರಾಜಕೀಯ ಚರ್ಚೆಗಳು ನಡೆದಿದ್ದವು. ಇತ್ತೀಚಿಗೆ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ ಘಟನೆಯಿಂದಲೇ ವಿವಾದದ ಸುಳಿಯಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ, ಹೈಕಮಾಂಡ್ ಅವರ ಮೇಲೆ ಒತ್ತಡ ಹೇರಿರಬಹುದು ಎಂಬ ಮಾತುಗಳು ಕೇಳಿಬಂದಿವೆ.
ಹೀಗಾಗಿ, ರಾಜಕೀಯ ಸನ್ನಿವೇಶವನ್ನು ಮನಗಂಡು, ಈ ಬಾರಿ ಸದ್ಗುರು ಜೊತೆ ಒಂದೇ ವೇದಿಕೆ ಹಂಚಿಕೊಳ್ಳುವುದನ್ನು ಡಿಕೆಶಿ ಹಿಂದೇಟು ಹಾಕಿದರೇ ಎಂಬ ಪ್ರಶ್ನೆಗಳು ಎದ್ದಿವೆ. ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್‌ನ 25 ವರ್ಷದ ಯಶಸ್ವಿ ಪಯಣವನ್ನು ಗುರುತಿಸುವ ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸದ್ಗುರು ಅವರ ಭಾಗವಹಿಸುವಿಕೆ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಇಬ್ಬರು ಒಂದೇ ವೇದಿಕೆ ಹಂಚಿಕೊಳ್ಳದ ಕಾರಣ, ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, “ನನಗೆ ರಾಮನಗರದಲ್ಲಿ ಜಿಬಿಎ (GBA)ಗೆ ಸಂಬಂಧಿಸಿದ ಇನ್ನೊಂದು ಕಾರ್ಯಕ್ರಮಕ್ಕೆ ಹಾಜರಾಗಬೇಕಿರುವುದರಿಂದ ಇಲ್ಲಿ ಹೆಚ್ಚಿನ ಸಮಯ ಉಳಿಯಲಾಗುವುದಿಲ್ಲ. ನಾನು ಈ ಸಂಸ್ಥೆಯ ಫೌಂಡರ್ ಚೇರ್ಮನ್ ಮಾತ್ರ. ಉಷಾ ಮತ್ತು ಐಶ್ವರ್ಯಾ ಹೆಗ್ಡೆ ಇವರೇ ಇದರ ಚೇರ್ ಪರ್ಸನ್ಸ್. 25 ವರ್ಷ ಪೂರೈಸಿರುವುದು ನಮಗೆ ಹೆಮ್ಮೆಯ ಕ್ಷಣ. ಇದಕ್ಕೆ ಕಾರಣರಾದ ಎಲ್ಲಾ ಶಿಕ್ಷಕರಿಗೂ ಹೃತ್ಪೂರ್ವಕ ಧನ್ಯವಾದಗಳು. ಇಂದು ಸದ್ಗುರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಬೆಳಗ್ಗಿನಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು. ಡಿಕೆಶಿ ಕಾರ್ಯಕ್ರಮದಿಂದ ಹೊರಟ ತಕ್ಷಣವೇ ಸದ್ಗುರು ವೇದಿಕೆಗೆ ಬಂದ ಕಾರಣ, ಇಬ್ಬರು ಮುಖಾಮುಖಿಯಾಗಲಿಲ್ಲ. ಇದರಿಂದ ಹಲವಾರು ಊಹಾಪೋಹಗಳಿಗೆ ಕಾರಣವಾಯಿತು. ಇದಾದ ನಂತರ ಡಿಕೆಶಿ ಕಾರ್ಯಕ್ರಮದಿಂದ ನಿರ್ಗಮಿಸಿದರು.
ಡಿ.ಕೆ. ಶಿವಕುಮಾರ್ ಹೊರಟ ಸ್ವಲ್ಪ ಸಮಯದ ಬಳಿಕವೇ ಸದ್ಗುರು ವೇದಿಕೆಗೆ ಆಗಮಿಸಿದರು. ಅವರನ್ನು ಡಿಕೆಶಿಯ ಪುತ್ರಿ ಐಶ್ವರ್ಯಾ ಸ್ವಾಗತಿಸಿ ವೇದಿಕೆಗೆ ಕರೆದುಕೊಂಡು ಬಂದು ಸನ್ಮಾನಿಸಿದರು. ನ್ಯಾಷನಲ್ ಹಿಲ್ ವೀವ್ ಪಬ್ಲಿಕ್ ಸ್ಕೂಲ್‌ನ 25 ವರ್ಷದ ಯಶಸ್ವಿ ಪಯಣವನ್ನು ಗುರುತಿಸುವ ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸದ್ಗುರು ಅವರ ಭಾಗವಹಿಸುವಿಕೆ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಇಬ್ಬರು ಒಂದೇ ವೇದಿಕೆ ಹಂಚಿಕೊಳ್ಳದ ಕಾರಣ, ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ.