ತುಮಕೂರು ಜಿಲ್ಲೆಯಲ್ಲಿ 40 ನಾಮಪತ್ರ ಸಲ್ಲಿಕೆ

By Kannadaprabha News  |  First Published Apr 19, 2023, 6:40 AM IST

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್‌ 18ರಂದು 40 ನಾಮಪತ್ರಗಳು ಸ್ವೀಕೃತಗೊಂಡಿವೆ.


 ತುಮಕೂರು :  ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್‌ 18ರಂದು 40 ನಾಮಪತ್ರಗಳು ಸ್ವೀಕೃತಗೊಂಡಿವೆ.

ಒಟ್ಟಾರೆ ಬಿಜೆಪಿ 4, 8, ಆಮ್‌ ಆದ್ಮಿ ಪಕ್ಷದಿಂದ 2, 3, ಸ್ವತಂತ್ರ 12 ಮತ್ತು ಇತರೆ ಪಕ್ಷಗಳಿಂದ 11 ನಾಮಪತ್ರಗಳು ಸ್ವೀಕೃತವಾಗಿವೆ. ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಸಿ.ಬಿ.ಸುರೇಶ್‌ ಬಾಬು, ಪಕ್ಷೇತರ ಅಭ್ಯರ್ಥಿ ಗಂಗಾಧರಯ್ಯ, ಉತ್ತಮ ಪ್ರಜಾಕೀಯ ಪಕ್ಷದಿಂದ ಜಯರಾಮ್‌ ಎಚ್‌.ಆರ್‌., ಭಾರತೀಯ ಜನತಾ ಪಕ್ಷದಿಂದ ಜೆ.ಸಿ.ಮಾಧುಸ್ವಾಮಿ, ವೆಲ್‌ ಫೇರ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದಿಂದ ಹನುಮಂತರಾಮನಾಯಕ ಅವರು ನಾಮಪತ್ರ ಸಲ್ಲಿಸಿದ್ದಾರೆ.

Tap to resize

Latest Videos

ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಕೆ.ಷಡಕ್ಷರಿ 3 ನಾಮಪತ್ರ, ಕನ್ನಡ ದೇಶದ ಪಕ್ಷದಿಂದ ಅರುಣ್‌ ಲಿಂಗ 2 ನಾಮಪತ್ರ, ಸ್ವತಂತ್ರ ಅಭ್ಯರ್ಥಿ ಬಿ.ಎನ್‌.ವಿಜಯಕುಮಾರಿ, ಸ್ವತಂತ್ರ ಅಭ್ಯರ್ಥಿ ಭರತ್‌ ಬಿ.ಎಸ್‌. ಅವರು ನಾಮಪತ್ರ ಸಲ್ಲಿಸಿದ್ದಾರೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಬಹುಜನ ಕ್ರಾಂತಿ ದಳದಿಂದ ಎಚ್‌.ಬಿ. ಪುಟ್ಟಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ. ಕುಣಿಗಲ್‌ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ, ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಉತ್ತಮ ಪ್ರಜಾಕೀಯ ಪಕ್ಷದಿಂದ ರಾಜೇಶ ಟಿ.ಎನ್‌., ಸ್ವತಂತ್ರ ಅಭ್ಯರ್ಥಿ ವೀರೇಶ್‌ ಪ್ರಸಾದ್‌ ಆರ್‌., ಆಮ್‌ ಆದ್ಮಿ ಪಕ್ಷದಿಂದ ಮೊಹಮ್ಮದ್‌ ಗೌಸ್‌ಪೀರ, ಭಾರತೀಯ ಜನತಾ ಪಕ್ಷದಿಂದ ಜಿ.ಬಿ.ಜ್ಯೋತಿಗಣೇಶ್‌ ನಾಮಪತ್ರ ಸಲ್ಲಿಸಿದ್ದಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸಿದ್ದರಾಮೇಗೌಡ, ಭಾರತೀಯ ಜನತಾಪಕ್ಷದಿಂದ ಬಿ.ಸುರೇಶ್‌ ಗೌಡ, ಆಮ್‌ ಆದ್ಮಿ ಪಕ್ಷದಿಂದ ದಿನೇಶ್‌ ಕುಮಾರ್‌ ಬಿ., ಉತ್ತಮ ಪ್ರಜಾಕೀಯ ಪಾರ್ಟಿ ಪಕ್ಷದಿಂದ ದಿನೇಶ್‌ ಟಿ.ಎನ್‌. ಅವರು ನಾಮಪತ್ರ ಸಲ್ಲಿಸಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಮುನಿಯಪ್ಪ ಕೆ.ಎಂ., ಸ್ವತಂತ್ರ ಅಭ್ಯರ್ಥಿ ಬಿ.ಎನ್‌. ವಿಜಯಲಕ್ಷ್ಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಎಸ್‌.ಆರ್‌. ಶ್ರೀನಿವಾಸ್‌ 2 ನಾಮಪತ್ರ, ಭಾರತೀಯ ಜನತಾ ಪಾರ್ಟಿ ಪಕ್ಷದಿಂದ ಎಸ್‌.ಡಿ. ದಿಲೀಪ್‌ ಕುಮಾರ್‌, ಸ್ವತಂತ್ರ ಅಭ್ಯರ್ಥಿ ಡಾ. ಭಾವನಾ ಆರ್‌. ಗಿರಿಧರ್‌, ಜಾತ್ಯತೀತ ಜನತಾದಳ ಅಭ್ಯರ್ಥಿ ನಾಗರಾಜು ಬಿ.ಎಸ್‌., ಸ್ವತಂತ್ರ ಅಭ್ಯರ್ಥಿ ಶಿವಕುಮಾರ್‌ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಭಾರತೀಯ ಬೆಳಕು ಪಕ್ಷದಿಂದ ಎಂ.ಎಲ್‌.ಎ.ಆರ್‌. ಕಂಬಣ್ಣ, ಸ್ವತಂತ್ರ ಅಭ್ಯರ್ಥಿ ಬಿ.ಎ.ಮಂಜುನಾಥ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಟಿ.ಬಿ.ಜಯಚಂದ್ರ, ಸ್ವತಂತ್ರ ಅಭ್ಯರ್ಥಿ ಬಂಡಿ ರಂಗನಾಥ ವೈ.ಆರ್‌., ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದಿಂದ ಗಿರೀಶ್‌ ನಾಮಪತ್ರ ಸಲ್ಲಿಸಿದ್ದಾರೆ.

ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನಾಗೇಂದ್ರ ಕುಮಾರ್‌, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಎಚ್‌.ವಿ.ವೆಂಕಟೇಶ್‌ 2 ನಾಮಪತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗೋವಿಂದಪ್ಪ ವಿ., ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀನಿವಾಸ್‌ ಎಸ್‌.ಎಚ್‌. ನಾಮಪತ್ರ ಸಲ್ಲಿಸಿದ್ದಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯತೀತ) ಪಕ್ಷದಿಂದ ಎಂ.ವಿ.ವೀರಭದ್ರಯ್ಯ ಅವರು ನಾಮಪತ್ರ ಸಲ್ಲಿಸಿದ್ದಾರೆ.

ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಜ್ಯೋತಿ ಗಣೇಶ್‌ ಹಾಗೂ ಸುರೇಶಗೌಡ ರೋಡ್‌ ಶೋ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ರೋಡ್‌ ಶೋನಲ್ಲಿ ರಾಜ್ಯಸಭಾ ಸದಸ್ಯ ಜಗ್ಗೇಶ್‌, ಸಂಸದ ಜಿಎಸ್‌ ಬಸವರಾಜು ಹಾಗೂ ಎಂಎಲ… ಸಿ ಚಿದಾನಂದ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ತುಮಕೂರು ಬಿಎಚ್‌ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ರೋಡ್‌ ಶೋ ಆರಂಭಿಸಿ ಗುಂಚಿ ಸರ್ಕಲ… ವರೆಗೆ ರೋಡ್‌ ಶೋ ನಡೆಸಿದರು.

ತುಮಕೂರು ತಾಲೂಕು ಕಚೇರಿಯಲ್ಲಿ ಸುರೇಶ್‌ ಗೌಡ ನಾಮಪತ್ರ ಸಲ್ಲಿಸಿದರೆ, ಜ್ಯೋತಿ ಗಣೇಶ್‌ ಅವರು ತುಮಕೂರು ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.

click me!