ದೇಶದ ಶ್ರೀಮಂತ ಸಚಿ​ವರ ಪಟ್ಟಿಯಲ್ಲಿ ಡಿಕೆ​ಶಿಗೆ ಎಷ್ಟನೇ ಸ್ಥಾನ..?

By Kannadaprabha NewsFirst Published Mar 12, 2020, 11:42 AM IST
Highlights

ಕನಕಪುರ ಶಾಸಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

ಕನಕಪುರ [ಮಾ.12]:  ಅಸೋ​ಸಿ​ಯೇ​ಷನ್‌ ಫಾರ್‌ ಡೆಮಾ​ಕ್ರ​ಟಿಕ್‌ ರಿಫಾಮ್‌ರ್‍ (ಎ​ಡಿ​ಆರ್‌) 2016ರಲ್ಲಿ ನಡೆ​ಸಿದ ಅಧ್ಯ​ಯನದಲ್ಲಿ ಡಿ.ಕೆ.​ ಶಿ​ವ​ಕು​ಮಾರ್‌ ದೇಶದ ಸಿರಿ​ವಂತ ಸಚಿ​ವ​ರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕ​ರಿ​ಸಿ​ದ್ದ​ರು.

ಡಿ.ಕೆ.ಶಿವಕುಮಾರ್‌ 2018ರ ವಿಧಾ​ನ​ಸಭಾ ಚುನಾ​ವಣೆ ವೇಳೆ 619 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ.

2004ರ ಚುನಾವಣೆಯಲ್ಲಿ ಸಚಿವ ಶಿವಕುಮಾರ್‌ 7.84 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದರು. ಕೇವಲ 14 ವರ್ಷಗಳಲ್ಲಿ ಅಂದರೆ 2018ರ ವೇಳೆಗೆ ಸುಮಾರು 611 ಕೋಟಿ ರುಪಾಯಿಗಳಷ್ಟುಆಸ್ತಿಯನ್ನು ಸಂಪಾದನೆ ಮಾಡಿದ್ದರು.

ಟ್ರಬಲ್ ಶೂಟರ್ ಆಗಿದ್ದ ಡಿಕೆಶಿ ನಿದ್ದೆಗೆಡಿಸುತ್ತಿದ್ದದ್ದು ಮಾತ್ರ ಡಿಎಂವಿ!..

2013ರ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಬಳಿ 251 ಕೋಟಿ ರು.ಗಳಿದ್ದ ಚರಾಸ್ತಿ ಮತ್ತು ಸ್ಥಿರಾಸ್ತಿ ಕಳೆದ ಐದು ವರ್ಷಗಳಲ್ಲಿ 368 ಕೋಟಿ ರುಪಾಯಿಗಳಷ್ಟು ಹೆಚ್ಚಳವಾಗಿದೆ.

ಸಚಿವ ಶಿವಕುಮಾರ್‌ 2016-17ನೇ ಸಾಲಿಗೆ 87.54 ಲಕ್ಷ ರು. ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ. 2011-12ನೇ ಸಾಲಿನಲ್ಲಿ ಇವರ ವಾರ್ಷಿಕ ಆದಾಯ 58 ಲಕ್ಷ ರು. ಇತ್ತು. ಅಂದರೆ ಇವರ ವಾರ್ಷಿಕ ಆದಾಯ ಕಳೆದ 5 ವರ್ಷಗಳಲ್ಲಿ ಸರಾಸರಿ 30 ಲಕ್ಷ ರು.ಗಳಿಗೆ ಏರಿಕೆಯಾಯಿತು.

ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಅವರ ಕುಟುಂಬದ ಆಸ್ತಿ ಗಳಿಕೆ ಚುನಾ​ವ​ಣೆ​ಯಿಂದ ಚುನಾ​ವ​ಣೆಗೆ ಭಾರೀ ಪ್ರಮಾ​ಣ​ದಲ್ಲಿ ಹಿಗ್ಗುತ್ತಲೇ ಸಾಗಿದೆ. ಅವರ ಕುಟುಂಬದಲ್ಲಿ ಹಾಲಿ ಮಾರುಕಟ್ಟೆ ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಲೆಕ್ಕ ಹಾಕಿದರೆ ಸುಮಾರು 800ಕ್ಕೂ ಹೆಚ್ಚು ಕೋಟಿ ರುಪಾಯಿ ಮೌಲ್ಯದ ಆಸ್ತಿಯಿದೆ ಎನ್ನ​ಲಾ​ಗಿ​ದೆ.

click me!