ಇಬ್ಭಾಗವಾಗಿರುವ ರೈತ ಸಂಘಟನೆ ಒಗ್ಗೂಡಿಸುವೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

By Kannadaprabha News  |  First Published Oct 4, 2024, 9:19 AM IST

ರೈತ ದಿನಾಚರಣೆ ವೇಳೆಗೆ ಇಬ್ಬಾಗವಾಗಿರುವ ರೈತ ಸಂಘಟನೆಗಳನ್ನು ಒಂದುಗೂಡಿಸಲು ಮುಂದಾಗಿದ್ದೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. 


ಮದ್ದೂರು (ಅ.04): ರೈತ ದಿನಾಚರಣೆ ವೇಳೆಗೆ ಇಬ್ಬಾಗವಾಗಿರುವ ರೈತ ಸಂಘಟನೆಗಳನ್ನು ಒಂದುಗೂಡಿಸಲು ಮುಂದಾಗಿದ್ದೇನೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಬೆಸಗರಹಳ್ಳಿ ಸಮೀಪ ರೈತ ಮುಖಂಡರನ್ನು ಭೇಟಿ ಮಾಡಿ ಸಂಘಟನೆ ವಿಚಾರ ಮಾತುಕತೆ ನಡೆಸಿದರು. ಸ್ಥಳೀಯ ರೈತ ನಾಯಕರ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ರೈತ ಸಂಘಟನೆಯಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತಾವು ಪ್ರವಾಸ ಮಾಡುವ ಮೂಲಕ ಇಬ್ಬಾಗವಾಗಿರುವ ಎಲ್ಲಾ ರೈತ ಸಂಘಗಳನ್ನು ಒಂದುಗೂಡಿಸಲು ಕೈ ಹಾಕಿದ್ದೇನೆ. ರೈತರ ನಾಯಕರೊಂದಿಗೆ ಮಾತುಕತೆ ನಡೆಸಿ ಬಲ ತುಂಬುವ ಕೆಲಸ ಮಾಡಲಾಗುವುದು ಎಂದರು.

ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ರೈತ ಮುಖಂಡರು ಕಾರ್ಯಕರ್ತರ ಸಭೆ ನಡೆಸಿ ಒಂದೇ ವೇದಿಕೆಯಲ್ಲಿ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ. ರೈತ ದಿನಾಚರಣೆ ವೇಳೆಗೆ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಭರವಸೆ ನೀಡಿದರು. ಈ ವೇಳೆ ವರದರಾಜು. ಸೋಶಿ ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಗೊಲ್ಲರ ದೊಡ್ಡಿ ಅಶೋಕ, ಚೆನ್ನಪ್ಪ, ರಾಮಕೃಷ್ಣ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.

Tap to resize

Latest Videos

ಮುಡಾ ಹಗರಣ ಉಪ್ಪು ತಿಂದವರು ನೀರು ಕುಡಿಯಬೇಕು: ಮುಡಾ ಹಗರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇದು ವಿಧಿನಿಯಮ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಕಾನೂನಿನ ಅಡಿಯಲ್ಲಿ ತಪ್ಪು ಮಾಡಿದರೆ ಅದು ತಪ್ಪು. ಇದಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು.

ಮುಡಾ ಕೇಸ್‌ನಲ್ಲಿ ಸಾಕ್ಷ್ಯನಾಶ: ಸಿದ್ದರಾಮಯ್ಯ ವಿರುದ್ಧ ಇ.ಡಿ.ಗೆ 2ನೇ ಕಂಪ್ಲೇಂಟ್

ಸಿಎಂಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮುಡಾದಿಂದ ಪಡೆದ ಎಲ್ಲಾ 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಹಗರಣ ತನಿಖಾ ಹಂತದಲಿದೆ. ಹೀಗಾಗಿ ಅವರು ಶಿಕ್ಷೆ ಅನುಭವಿಸುತಾರೋ ಅಥವಾ ಇಲ್ಲವೇ ಎಂಬ ಬಗ್ಗೆ ಕಾದು ನೋಡೋಣ ಎಂದರು. ತಮ್ಮ ರಾಜಕಾರಣದ ಜೀವನದಲ್ಲಿ ಒಂದು ತಪ್ಪು ಮಾಡದ ಸಿದ್ದರಾಮಯ್ಯ ಮುಡಾ ಹಗರಣ ಮರೆಮಾಚಲು ಹೋಗಿ ಗಾಯ ಮಾಡಿಕೊಂಡಿದ್ದಾರೆ. ರಾಜಕೀಯ ಜೀವನದಲ್ಲಿ ಆತ್ಮಸಾಕ್ಷಿ ಎನ್ನುವುದು ಇರಬೇಕು. ಮುಡಾ ಹಗರಣದಲ್ಲಿ ಒಂದು ವೇಳೆ ಅವರು ತಮ್ಮ ಸ್ಥಾನ ತೖಜಿಸಬೇಕಾಗಿ ಬಂದರೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಸಲಹೆ ನೀಡಿದರು.

click me!