ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿ, ಶಾಂತಿ ಭಂಗ ತರುವುದು ಸೇರಿದಂತೆ ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ ಬಾಗಲಕೋಟೆ ಉಪ ವಿಭಾಗಾಧಿಕಾರಿಗಳು ಮೂವರಿಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜ.27): ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿ, ಶಾಂತಿ ಭಂಗ ತರುವುದು ಸೇರಿದಂತೆ ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ ಬಾಗಲಕೋಟೆ ಉಪ ವಿಭಾಗಾಧಿಕಾರಿಗಳು ಮೂವರಿಗೆ ಗಡಿಪಾರು ಮಾಡಿ ಆದೇಶಿಸಿದ್ದಾರೆ. ಜಿಲ್ಲೆಯ ಕುಮಾರ್ ನಾಯಕ್, ಸಂಜು ರಾಠೋಡ, ಪೀತಪ್ಪ ಲಮಾಣಿ ಎಂಬ ಮೂವರನ್ನು ಗಡಿ ಪಾರು ಮಾಡಿ ಆದೇಶಿಸಲಾಗಿದೆ. ಇನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಮೂವರನ್ನು ಪ್ರತ್ಯೇಕವಾಗಿ ರಾಯಚೂರು, ಕೋಲಾರ, ಯಾದಗಿರಿ ಜಿಲ್ಲೆಗಳಿಗೆ ಗಡಿಪಾರು ಮಾಡಿದ್ದಾರೆ.
undefined
ಕಳ್ಳಬಟ್ಟಿ ಸರಾಯಿ ಮಾರಾಟ, ಜೀವ ಬೆದರಿಕೆ, ಶಾಂತಿ ಭಂಗಯತ್ನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಈ ಆದೇಶ ಹೊರಡಿಸಿದ್ದಾರೆ. ಬಾದಾಮಿ ಸರ್ಕಲ್ ಪೋಲಿಸ ಠಾಣೆ ಮತ್ತು ಬಾಗಲಕೋಟೆ ಗ್ರಾಮೀಣ ಪೋಲಿಸ ಠಾಣೆಯ ಪೋಲಿಸರ ಮನವಿ ಮೇರೆಗೆ ಗಡಿಪಾರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿದಿನ ಗಡಿಪಾರು ಮಾಡಿದ ಜಿಲ್ಲೆಗಳಲ್ಲಿ ಸಮೀಪದ ಪೋಲಿಸ್ ಠಾಣೆಯಲ್ಲಿ ಹಾಜರಾತಿ ಕಡ್ಡಾಯವಿದ್ದು, ಅಲ್ಲದೆ ಪ್ರಕರಣ ದಾಖಲಾದ ಆಯಾ ಪೋಲಿಸ ಠಾಣೆಗಳಿಗೆ ಪ್ರತಿ 15 ದಿನಕ್ಕೊಮ್ಮೆ ಮಾಹಿತಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ
ಸಂವಿಧಾನದ ಅಧ್ಯಯನ ಪ್ರತಿ ಪ್ರಜೆಗೂ ಕಡ್ಡಾಯ: ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ದಿನವನ್ನು ನಾವು ಗಣರಾಜ್ಯೋತ್ಸವವನ್ನಾಗಿ ಆಚರಿಸುತ್ತೇವೆ. ಪ್ರಜೆಗಳು ಸಹ ಸಂವಿಧಾನವನ್ನು ಅಧ್ಯಯನ ಮಾಡಬೇಕು. ಯೋಗ್ಯರಾದ ಜನಪ್ರತಿನಿಧಿಗಳ ಆಯ್ಕೆ ಮಾಡಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕಾಮಧೇನು ಸಂಸ್ಥೆಯ ಅಧ್ಯಕ್ಷ ರವಿ ಕುಮಟಗಿ ಹೇಳಿದರು. ನಗರದ ಕಾಮಧೇನು ಸಂಸ್ಥೆಯ ಕಚೇರಿಯ ಆವರಣದಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಮಾಜಸೇವಕಿ ರಾಷ್ಟ್ರ ಸೇವಿಕಾ ಸಮಿತಿ ಪ್ರಮುಖರಾದ ಸುಧಾ ದೇಸಾಯಿ, ಯುವ ಮುಖಂಡ ಹಾಗೂ ಸಂಸ್ಥೆಯ ನಿರ್ದೇಶಕ ಸಂತೋಷ ಹೋಕ್ರಾಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಬಾ ಕನಸಿನಲ್ಲಿ ಬಂದಿದ್ದಕ್ಕೆ ಭವ್ಯ ಸಾಯಿ ಮಂದಿರ ನಿರ್ಮಿಸಿದ ಉದ್ಯಮಿ ಮಹಾರಾಜ್ ದಿಗ್ಗಿ
ಕಾರ್ಯಕ್ರಮದಲ್ಲಿ ಹಾಲುಮತ ಸಮುದಾಯದ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲು ವಡಗೇರಿ ಅವರಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಅಶೋಕ ಮುತ್ತಿನಮಠ, ಸಂಸ್ಥೆಯ ನಿರ್ದೇಶಕ ಬಸವರಾಜ ಕಟಗೇರಿ, ಅರುಣ ಲೋಕಾಪುರ, ಗುರು ಅನಗವಾಡಿ, ಮುತ್ತು ಸಜ್ಜನ, ಮಲ್ಲು ಮಳ್ಳಿಯಪ್ಪನವರ, ಅಶೋಕ ಮಹೇಂದ್ರಕರ, ರಾಜು ಬಾಸೂತಕರ, ಮುತ್ತು ಶಾಬಾದಿ, ರಾಜು ಮೂಲಿಮನಿ, ನಾಗರಾಜ ಕೆರೂರ, ಯಮನೂರಿ ಕಮಿತಕರ, ಹರೀಶ ರಂಗರೇಜ, ವಿನಾಯಕ ಹಾಸಲಕರ, ಯಶವಂತ ಅನಂತಪುರ, ರಾಘು ಯಾದಗಿರಿ, ನಾಗರಾಜ ಬಾಸೂತಕರ, ರಾಜು ಬಾಸುತಕರ, ಪಾಂಡುರಂಗ ಜಾಧವ ಮುಂತಾದವರು ಉಪಸ್ಥಿತರಿದ್ದರು. ಕಾಮಧೇನು ಸಂಸ್ಥೆ ಕಾರ್ಯದರ್ಶಿ ವಿಜಯ ಸುಲಾಖೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.