ಬೆಲೆ ಏರಿಕೆಯಿಂದ ಕುಗ್ಗಿದ ಹಬ್ಬದ ಸಡಗರ : ಹಸಿರು ಪಟಾಕಿಗಳನ್ನೇ ಬಳಸಲು ತಾಕೀತು

By Kannadaprabha NewsFirst Published Nov 4, 2021, 2:43 PM IST
Highlights
  • ಜನರ ಮತ್ತು ಪರಿಸರ ಹಿತದೃಷ್ಟಿಯಿಂದ ಸಾರ್ವಜನಿಕರು ದೀಪಾವಳಿ ಹಬ್ಬಕ್ಕೆ ಹೆಚ್ಚಿಗೆ ಹಸಿರು ಪಟಾಕಿ ಬಳಕೆ
  •  ಹಸಿರು ಪಟಾಕಿಗಳನ್ನೇ ಬಳಸಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತ ತಾಕೀತು

ಕೋಲಾರ (ಅ.04):  ಜನರ ಮತ್ತು ಪರಿಸರ ಹಿತದೃಷ್ಟಿಯಿಂದ ಸಾರ್ವಜನಿಕರು ದೀಪಾವಳಿ (Deepavali) ಹಬ್ಬಕ್ಕೆ ಹೆಚ್ಚಿಗೆ ಹಸಿರು ಪಟಾಕಿಗಳನ್ನೇ (Green crackers) ಬಳಸಬೇಕು ಎನ್ನುವ ಉದ್ದೇಶದಿಂದ ಜಿಲ್ಲಾಡಳಿತ ತಾಕೀತು ಮಾಡಿದೆ.

ಪರಿಸರ ಮತ್ತು ಜನರ ಹಾಗು ಮಕ್ಕಳ ಹಿತದೃಷ್ಟಿಯಿಂದ ಶಬ್ದ ಮಾಡುವ ಮತ್ತು ಸಿಡಿಯುವ ಹಾಗೂ ಜನತೆಗೆ ಹಾನಿಯನ್ನುಂಟು ಮಾಡುವ ಪಟಾಕಿಗಳನ್ನು ಬಳಸದಂತೆ ಸೂಚನೆ ನೀಡಿದೆ. ಈ ಬಾರಿ ಜನರಲ್ಲಿ ಪಟಾಕಿ ಸಿಡಿಸುವ ಉತ್ಸವವೂ ಕಡಿಮೆಯಾಗಿದೆ. ಮಾರಾಟವೂ ಕಡಿಮೆಯಾಗಿದೆ ಕೋಲಾರ (Kolar) ನಗರದ ಜೂನಿಯರ್‌ ಕಾಲೇಜು (collage) ಮೈದಾನದಲ್ಲಿ ಕೇವಲ ಏಳೆಂಟು ಪಟಾಕಿಗಳನ್ನು ಮಾತ್ರ ಪಟಾಕಿ ಮಾರಾಟಕ್ಕೆ ತೆರೆಯಲಾಗಿದೆ. ಇದರಲ್ಲಿ ಹೆಚ್ಚಿಗೆ ಹಸಿರು ಪಟಾಕಿಗಳನ್ನೇ ಹೆಚ್ಚಿಗೆ ಮಾರಾಟ ಮಾಡಲಾಗುತ್ತಿದೆ.

ಹಸಿರು ಪಟಾಕಿಗಳು ಜನರಿಗೆ ವಿಶೇಷವಾಗಿ ಮಕ್ಕಳಿಗೆ ಸುರಕ್ಷಿತ, ಸಿಡಿಯುವ ಪಟಾಕಿಗಳಿಂದ ಹೆಚ್ಚಿಗೆ ಕಣ್ಣು, ಕೈ ಹಾಗೂ ಮುಖಕ್ಕೆ ಅಪಾಯವನ್ನು ತಂದೊಡ್ಡುತ್ತದೆ. ಜಿಲ್ಲೆಯಲ್ಲಿ ಪ್ರತಿ ವರ್ಷವೂ 150ರಿಂದ 200 ಮಂದಿ ಪಟಾಕಿಗಳಿಂದ ಗಾಯಗೊಳ್ಳುತ್ತಾರೆ ಮತ್ತು ಕೆಲವರು ಕಣ್ಣುಗಳನ್ನು (Eye) ಕಳೆದುಕೊಳ್ಳುತ್ತಾರೆ ಎನ್ನುವುದು ಪರಿಸರವಾದಿಗಳ ಕೂಗು.

ವರ್ಷದಿಂದ ವರ್ಷಕ್ಕೆ ಜನರಲ್ಲಿ ಪಟಾಕಿ ಸಿಡಿಸುವ ಉತ್ಸಾಹ ಕಡಿಮೆಯಾಗುತ್ತಿದೆ. ಜನರಲ್ಲಿ ಶಿಕ್ಷಣ (education) ಹೆಚ್ಚಿದಂತೆ ಪರಿಸರ ಕುರಿತ ಕಾಳಜಿಯೂ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಪವರ್‌ ಸ್ಟಾರ್‌ ಪುನೀತ್‌ ಕುಮಾರ್‌ (Puneeth Rajkumar) ಅವರ ದಿಢೀರ್‌ ಸಾವು ಕೂಡಾ ಜನರಲ್ಲಿ ಅದರಲ್ಲೂ ಯುವಕರಲ್ಲಿ ಪಟಾಕಿ ಸಿಡಿಸುವ ಉತ್ಸಾಹವನ್ನು ಕಡಿಮೆ ಮಾಡಿದೆ. ರಾಜ್ಯದ ಅತ್ಯುತ್ತಮ ಚಿತ್ರ ನಟನಾಗಿದ್ದ ಪುನೀತ್‌ ಸಾವು ಜನರನ್ನು ದುಃಖಕ್ಕೆ ಈಡು ಮಾಡಿದೆ ಈ ಹಿನ್ನೆಲೆಯಲ್ಲಿ ಯುವಕರು ಪಟಾಕಿ ಸಿಡಿಸುವ ಉತ್ಸಾಹದಿಂದ ದೂರ ಆಗಿದ್ದಾರೆ ಎನ್ನುವುದು ಪರಿಸರ ವಾದಿಗಳ ಅಂಬೋಣ.

ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಪಟಾಕಿ ಸಿಡಿಸುವ ಉತ್ಸಾಹವನ್ನು ಕುಂದಿಸಿತ್ತು ಅದರಂತೆ ಈ ವರ್ಷವೂ ಉತ್ಸಾಹವನ್ನು ಕುಗ್ಗಿಸಿದೆ. ಈ ಬಾರಿ ಪಟಾಕಿ ಬೆಲೆ ಗಗನಕ್ಕೇರಿದೆ, ಹಿಂದೆ 2 ಸಾವಿರ ರೂಪಾಯಿ ಕೊಟ್ಟರೆ ಮನೆ ಮಂದಿಯೆಲ್ಲಾ ಪಟಾಕಿಯನ್ನು ಸಿಡಿಸುವಷ್ಟುನೀಡುತ್ತಿದ್ದರು ಈ ವರ್ಷ 5 ಸಾವಿರ ಕೊಟ್ಟರೂ ಮನೆ ಮಂದಿಯೆಲ್ಲಾ ಸಿಡಿಸುವಷ್ಟುಪಟಾಕಿ ಪಡೆಯಲು ಸಾಧ್ಯವಾಗುತ್ತಿಲ್ಲ, ದುಬಾರಿ ಖರ್ಚು ಮಾಡಿ ಪಟಾಕಿ ಕೊಳ್ಳಲು ಸಾಧ್ಯವಾಗದೆ ಇರುವುದು ಕೂಡಾ ಪಟಾಕಿ ಸಿಡಿಸುವ ಉತ್ಸಾಹವನ್ನು ಕುಂದಿಸಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ಧಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಪಟಾಕಿ ದರ ಶೇ 30 ರಷ್ಟುಹೆಚ್ಚಾಗಿದೆ ಎಂದು ನಗರದ ಕುರುಬರಪೇಟೆಯ ಚಂದ್ರು ಹೇಳುತ್ತಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಜನರಲ್ಲಿ ಪಟಾಕಿ ಸಿಡಿಸುವ ಉತ್ಸಾಹ ಕಡಿಮೆಯಾಗಿದೆ, ಈ ಬಾರಿ ಕೇವಲ 7 ಅಂಗಡಿಗಳನ್ನು ಮಾತ್ರ ತೆರೆಯಲಾಗಿದೆ, ಪಟಾಕಿ ಬೆಲೆಯೂ ದುಬಾರಿಯಾಗಿದೆ ಅಲ್ಲದೆ ನಟ ಪುನೀತ್‌ ಕುಮಾರ್‌ ಅವರ ದಿಢೀರ್‌ ಸಾವು ಯುವಕರಲ್ಲಿ ಹಬ್ಬದ ಉತ್ಸಾಹವನ್ನು ತಣ್ಣಗೆ ಮಾಡಿದೆ. ಸಾರ್ವಜನಿಕರು ಹಸಿರು ಪಟಾಕಿಗಳನ್ನು ಉಪಯೋಗಿಸಬೇಕು ದೇಹಕ್ಕೆ ಯಾವುದೇ ಹಾನಿ ಉಂಟಾಗದಂತೆ ಎಚ್ಚರ ವಹಿಸಬೇಕು.

ಪ್ರಸಾದ್‌, ನಗರಸಭೆ ಆಯುಕ್ತರು. ಕೋಲಾರ.

ಪಟಾಕಿ ಬೆಲೆ ಭಾರೀ ಏರಿಕೆ

 

ಕಚ್ಚಾ ವಸ್ತುಗಳ ಕೊರತೆಯಿಂದ ಕುಸಿದ ಉತ್ಪಾದನೆ ಪ್ರಮಾಣ, ಇಂಧನ(Fuel) ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯಲ್ಲಿ(Deepavali) ಪಟಾಕಿ ಬೆಲೆಯಲ್ಲಿ ಶೇ.30ರ ವರೆಗೆ ಹೆಚ್ಚಳವಾಗಿದೆ. ಹೀಗಾಗಿ ಖರೀದಿಯ ಪ್ರಮಾಣವೂ ಕಡಿಮೆಯಾಗಿದೆ.

ಪಟಾಕಿ(Fireworks) ತಯಾರಿಕೆಗೆ ಬೇಕಾದ ಅಗತ್ಯ ಕಚ್ಚಾ ವಸ್ತುಗಳಾದ(Raw Material) ಸೀಸ, ಕಾರ್ಬನ್‌ ಡೈ ಆಕ್ಸೈಡ್‌, ಕ್ರೋಮಿಯಂ ಮತ್ತು ನೈಟ್ರೈಡ್‌ ಆಕ್ಸೈಡ್‌ಗೆ ವಿದೇಶಗಳನ್ನು(Foreign) ಅವಲಂಬಿಸಲಾಗಿದೆ. ಆದರೆ, ಕೊರೋನಾ(Coronavirus) ಕಾರಣದಿಂದ ಅಂತಾರಾಷ್ಟ್ರೀಯ ವ್ಯಾಪಾರಕ್ಕೂ(International Trade) ಅಡ್ಡಿಯಾಗಿರುವುದರಿಂದ ಕಚ್ಚಾವಸ್ತುಗಳ ಕೊರತೆ ಉಂಟಾಗಿ ಉತ್ಪಾದನೆಯಲ್ಲಿ(Production) ಕುಸಿತವಾಗಿದೆ. ಹೀಗಾಗಿ ನಿರೀಕ್ಷಿತ ಪ್ರಮಾಣದ ಪಟಾಕಿ ಮಾರುಕಟ್ಟೆಗೆ(Market)ಬಂದಿಲ್ಲ. ಇದರ ಪರಿಣಾಮ ಪಟಾಕಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ವರ್ತಕರು(Traders) ಹೇಳುತ್ತಾರೆ.

click me!