ಗೋ ಶಾಲೆ ಡೆಮಾಲಿಷ್- ಹಸುಗಳು ಬೀದಿಗೆ : ಕೂಡಲೇ ಸೂಕ್ತ ವ್ಯವಸ್ಥೆಯಾಗಲೆಂದ ಖಾದರ್

By Kannadaprabha NewsFirst Published Mar 8, 2021, 2:54 PM IST
Highlights

ಮಂಗಳೂರಿನ ಕೆಂಜಾರಿನಲ್ಲಿ  ಗೋಶಾಲೆ ಡೆಮಾಲಿಷ್ ಮಾಡಿದ್ದು ಇದರಿಂದ ನೂರಾರು ಗೋವುಗಳು ಬೀದಿಗೆ ಬಿದ್ದು ಅವುಗಳ ಸ್ಥಿತಿ ನೋಡದಂತಾಗಿದೆ, ಜಿಲ್ಲಾಡಳಿತ ಕೂಡ ಈ ಬ್ಗಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. 

ಮಂಗಳೂರು (ಮಾ.08):  ಮಂಗಳೂರಿನ ಕೆಂಜಾರಿನಲ್ಲಿರುವ ಕಪಿಲಾ ಗೋ ಶಾಲೆ ಡೆಮಾಲಿಷ್ ಮಾಡಿದ್ದರಿಂದ ನೂರಾರು ಗೋವುಗಳು ಬೀದಿಗೆ ಬಿದ್ದು ಅವುಗಳ ಸ್ಥಿತಿ ಶೋಚನೀಯವಾಗಿದೆ ಎಂದರು. 

ಮಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್  ಗೋವುಗಳ ಸ್ಥಿತಿ ಕಂಡು ಬೇಸರವಾಗುತ್ತಿದೆ.  ಈ ಕೂಡಲೇ ಜಿಲ್ಲಾಡಳಿತ ಬೀದಿಗೆ ಬಿದ್ದಿರುವ ಗೋವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.  ಗೋವುಗಳ ರಕ್ಷಣೆಗೆ ಜಿಲ್ಲಾಡಳಿತ ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಗೋಶಾಲೆ ಅಕ್ರಮ ಅಂತಾದರೆ ಅದನ್ನು ಒಡೆಯುವ ಮೊದಲು ಗೋವುಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡ ಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು. 

ಗೋವುಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ತೋರಿದ್ದೇಕೆ ? ಗೋವುಗಳಿಗೆ ಈ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡ ಬೇಕು. ಅವುಗಳನ್ನು ಬೀದಿಯಲ್ಲಿ ಬಿಟ್ಟಿರುವುದು ಸರಿಯಲ್ಲ ಎಂದು ಖಾದರ್ ಹೇಳಿದರು. 

ಗೋಶಾಲೆ ನೆಲಸಮ: 300 ಹಸುಗಳು ಬೀದಿಪಾಲು

 ಸಿಸಿಬಿ ಪೊಲೀಸರ ವಿರುದ್ದ ಸರಣಿ ದೂರು ವಿಚಾರ :  ಸಿಸಿಬಿ ಪೊಲೀಸರ ಮೇಲಿನ ಆರೋಪದ ಬಗ್ಗೆ ಗೃಹಸಚಿವರ ಗಮನಕ್ಕೆ ತಂದಿದ್ದೇನೆ. ಸರ್ಕಾರ ಇದನ್ನ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ನಾನು ಸಚಿವನಾಗಿದ್ದಾಗಲೂ ಇವರ ವಿರುದ್ಧ ಬೇರೆ ಬೇರೆ ವಿಚಾರದಲ್ಲಿ ದೂರು ಬಂದಿದೆ. ಆವತ್ತೇ ನಾನು ಮೇಲಾಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದ್ದೆ ಎಂದು ಸಿಸಿಬಿ ಪೊಲೀಸರ ವಿರುದ್ಧದ ಸರಣಿ ದೂರಿನ ಬಗ್ಗೆ ಪ್ರತಿಕ್ರಿಯಿಸಿದರು. 

ನನ್ನ ಅವಧಿಯಲ್ಲಿ ಇಸ್ಪೀಟ್, ಗೇಮ್ಸ್, ಮಸಾಜ್ ಪಾರ್ಲರ್ ಎಲ್ಲವೂ ಬಂದ್ ಆಗಿತ್ತು. ಇಷ್ಟೆಲ್ಲಾ ಮಾಡಲು ಆಗ ಸುಲಭ ಇರಲಿಲ್ಲ. ಸಿಸಿಬಿಯಲ್ಲಿ ನಾಲ್ಕು ವರ್ಷಕ್ಕಿಂತ ಹೆಚ್ಚಿನ ಅವಧಿ ಯಾರನ್ನೂ ಇಡಬಾರದು. ಮೂರು ವರ್ಷ ಆದ ಬಳಿಕ ತಕ್ಷಣ ಅವರನ್ನ ವರ್ಗಾವಣೆ ಮಾಡಬೇಕು. ಇದನ್ನ ಇಡೀ ರಾಜ್ಯಕ್ಕೆ ಸರ್ಕಾರಿ ಒಂದು ವ್ಯವಸ್ಥೆ ತರಬೇಕು. 10-15 ವರ್ಷದಿಂದ ಅವರೇ ಸಿಸಿಬಿಯಲ್ಲಿ ಇದ್ದಾರೆ, ಯಾಕೆ ಬೇರೆ ಪೊಲೀಸರೇ ಇಲ್ವಾ ಎಂದು ಖಾದರ್ ಪ್ರಶ್ನೆ ಮಾಡಿದರು. 

ಅಕ್ರಮ ಮರಳು ಗಣಿಗಾರಿಕೆ :  ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆ ಅಧಿಕಾರಿ ನಿರಂಜನ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಖಾದರ್ ಗಂಭೀರ ಆರೋಪ ಮಾಡಿದರು. 

ಯಾವುದೇ ಅಕ್ರಮ ಕೆಲಸದಲ್ಲಿ ಸ್ಥಳೀಯ ಇಲಾಖೆ ಶಾಮೀಲಾಗದಿದ್ದರೆ ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಇಲಾಖೆ ಮುಖ್ಯಸ್ಥರು ಆತ್ಮಾವಲೋಕನ ಮಾಡಲಿ.  ಡಿಸಿ, ಕಮಿಷನರ್ ಹೋದಾಗ ಮರಳು ಅಕ್ರಮ ಹಿಡಿಯುತ್ತಾರೆ. ಹಾಗಾದ್ರೆ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಏನ್ ಮಾಡ್ತಿದಾರೆ

ಅಕ್ರಮ ಮರಳುಗಾರಿಕೆಗೆ ಜಿಲ್ಲೆಯ ಗಣಿ ಅಧಿಕಾರಿ ನೇರ ಕಾರಣ. ತಕ್ಷಣ ಅವನ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗಣಿ ಅಧಿಕಾರಿ ನಿರಂಜನ್ ಬೇಕಾದವರಿಗೆ ಪರ್ಮಿಟ್ ಕೊಡುತ್ತಿದ್ದಾನೆ.  ನಿರಂಜನ್ ಜಿಲ್ಲೆಯ ಎಲ್ಲಾ ಗಣಿ ಅಕ್ರಮಗಳಿಗೆ ಕಾರಣ.  ಅವರ ವಿರುದ್ದ ಸಮಗ್ರ ಮಾಹಿತಿ ಸರ್ಕಾರ ‌ಮತ್ತು ಮುಖ್ಯ ಕಾರ್ಯದರ್ಶಿಗೆ ಕೊಡುತ್ತೇನೆ.  ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದು ಖಾದರ್ ಹೇಳಿದರು. 

click me!