ಕಳ್ಳದಾರಿಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರವೇಶ: ಜಿಲ್ಲಾಡಳಿತದ ಮುಂದಿದೆ ದೊಡ್ಡ ಸವಾಲು

Kannadaprabha News   | Asianet News
Published : May 17, 2020, 11:00 AM ISTUpdated : May 18, 2020, 05:13 PM IST
ಕಳ್ಳದಾರಿಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರವೇಶ: ಜಿಲ್ಲಾಡಳಿತದ ಮುಂದಿದೆ ದೊಡ್ಡ ಸವಾಲು

ಸಾರಾಂಶ

ಬೆಳಗಾವಿಗೆ ಕಳ್ಳಮಾರ್ಗದ ವಲಸಿಗರ ಹಾವಳಿ: ಜಿಲ್ಲಾಡಳಿತಕ್ಕೆ ತಲೆನೋವು| ಹೊರ ರಾಜ್ಯಗಳಿಂದ ಆಗಮಿಸುವ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತದಿಂದ ಸಕಲ ಕ್ರಮ| ಈವರೆಗೆ ಅಧಿಕೃತ ಇ-ಪಾಸ್‌ ಮೂಲಕ 1800ಕ್ಕೂ ಅಧಿಕ ಜನರು ಹೊರರಾಜ್ಯಗಳಿಂದ ಆಗಮಿಸಿದ್ದಾರೆ| ಕಳ್ಳದಾರಿ ಮೂಲಕ ಜಿಲ್ಲೆಯ ಗಡಿ ಪ್ರವೇಶಿಸುವ ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯ| ಕಳ್ಳದಾರಿ ಮೂಲಕ ಆಗಮಿಸಿದ ಜನರನ್ನು ಪತ್ತೆಹಚ್ಚುವ ಕಾರ್ಯವೂ ಜಿಲ್ಲಾಡಳಿತಕ್ಕೆ ಸವಾಲು|

ಬೆಳಗಾವಿ(ಮೇ.17): ದೇಶದಲ್ಲಿಯೇ ಅತಿ ಹೆಚ್ಚು ಕೊರೋನಾ ವೈರಸ್‌ ಪೀಡಿತರನ್ನು ಹೊಂದಿರುವ ಮಹಾರಾಷ್ಟ್ರದಿಂದ ಕಾರ್ಮಿಕರು ಕಳ್ಳಮಾರ್ಗದಲ್ಲಿ ಅನಧಿಕೃತವಾಗಿ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. ಇದು ಬೆಳಗಾವಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. 

ಹೊರ ರಾಜ್ಯಗಳಿಂದ ಆಗಮಿಸುವ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಸಕಲ ಕ್ರಮ ಕೈಗೊಂಡಿದೆ. ಈವರೆಗೆ ಅಧಿಕೃತ ಇ-ಪಾಸ್‌ ಮೂಲಕ 1800ಕ್ಕೂ ಅಧಿಕ ಜನರು ಹೊರರಾಜ್ಯಗಳಿಂದ ಆಗಮಿಸಿದ್ದಾರೆ. ಆದರೆ, ಕಳ್ಳದಾರಿ ಮೂಲಕ ಜಿಲ್ಲೆಯ ಗಡಿ ಪ್ರವೇಶಿಸುವ ಜನರನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಅಲ್ಲದೇ, ಕಳ್ಳದಾರಿ ಮೂಲಕ ಆಗಮಿಸಿದ ಜನರನ್ನು ಪತ್ತೆಹಚ್ಚುವ ಕಾರ್ಯವೂ ಜಿಲ್ಲಾಡಳಿತಕ್ಕೆ ಸವಾಲಾಗಿದೆ. 

ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ

ಬೆಳಗಾವಿ ಜಿಲ್ಲೆಯ ಕೊಗನೊಳ್ಳಿ ಚೆಕ್‌ಪೋಸ್ಟ್‌, ಗೋವಾ ಕಣಕುಂಬಿ ಚೆಕ್‌ ಪೋಸ್ಟ್‌ ಬಿಗಿಗೊಳಿಸಿ ಉಳಿದ ಕಡೆಗಳಲ್ಲಿ ಜಿಲ್ಲಾಡಳಿತ ಮೈಮರೆತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

"

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!