ಬಾಗಲಕೋಟೆ: ಸತ್ತವರಿಗೂ ಕೋವಿಡ್‌ ಲಸಿಕೆ ಹಾಕ್ತಾರಾ?

By Suvarna NewsFirst Published Sep 12, 2021, 11:29 AM IST
Highlights

*  ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ವಿಚಿತ್ರ ಪ್ರಕರಣ
*  ತೀವ್ರ ಚರ್ಚೆಗೆ ಕಾರಣವಾದ ವ್ಯಾಕ್ಸಿನೇಷನ್ ಪ್ರಕರಣ
*  ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮೆಸೇಜ್ ಕಂಡು ಕುಟುಂಬಸ್ಥರು ಶಾಕ್ 
 

ಬಾಗಲಕೋಟೆ(ಸೆ.12):  ಕೊರೋನಾ ವ್ಯಾಕ್ಸಿನೇಷನ್‌ ಸಿಬ್ಬಂದಿ ಯಡವಟ್ಟೋ ಅಥವಾ ತಾಂತ್ರಿಕ ತೊಂದರೆಯೋ? ಗೊತ್ತಿಲ್ಲ. 6 ತಿಂಗಳ ಹಿಂದೆ ಮೃತಪಟ್ಟವರ ಹೆಸರಿನಲ್ಲಿ ಕೋವಿಡ್‌ ಲಸಿಕೆ ವಿತರಣೆ ಬಗ್ಗೆ ಈಗ ಮೆಸೆಜ್‌ ಬಂದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ನಗರದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದೆ.

ರಬಕವಿ-ಬನಹಟ್ಟಿ ಪಟ್ಟಣದ ಮಾಲಾ ಪಾವಟೆ ಎಂಬುವರು 6 ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಆದರೆ, ಈಗ ಸತ್ತ ಮಹಿಳೆ ಹೆಸರಲ್ಲಿ ಸೆಕೆಂಡ್ ಡೋಸ್ ವ್ಯಾಕ್ಸಿನ್ ಮೆಸೆಜ್‌ ಬಂದಿದೆ. ಮಾಲಾ ಎಂಬುವರ ಹೆಸರಿನಲ್ಲಿ ವ್ಯಾಕ್ಸಿನೇಷನ್ ಮೆಸೇಜ್ ಬಂದಿದೆ.

ಶ್ರೀಮಂತ ದೇಶವನ್ನೇ ಹಿಂದಿಕ್ಕಿದ ಕರುನಾಡು: ರಾಜ್ಯದಲ್ಲಿ ಲಸಿಕೆ ರಷ್ಯಾಗಿಂತ ವೇಗ!

ಏಪ್ರಿಲ್ 28 ರಂದು ಮೃತಪಟ್ಟಿರುವ ಮಾಲಾ ಪಾವಟೆ ಅವರಿಗೆ ಎರಡನೇ ದೋಸ್ ಲಸಿಕೆ ಪಡೆದ ಬಗ್ಗೆ ಕುಟುಂಬಸ್ಥರ ಮೊಬೈಲ್‌ಗೆ ಮೆಸೇಜ್ ಬಂದಿರೋದು ಅಚ್ಚರಿಗೆ ಕಾರಣವಾಗಿದೆ. ಸೆ. 08 ರಂದು ಎರಡನೇ ಡೋಸ್ ಲಸಿಕೆ ಪಡೆದ ಬಗ್ಗೆ ಮೆಸೇಜ್ ಬಂದಿದೆ. ಮಾಲಾ ಪಾವಟೆ ಮೃತಪಡುವ ಮೊದಲು ಮೊದಲ ಕೋವಿಡ್‌ ಡೋಸ್ ಲಸಿಕೆ ಪಡೆದಿದ್ದರು. 

ಮೃತರ ಹೆಸರಿನಲ್ಲಿ ಎರಡನೇ ಡೋಸ್ ಲಸಿಕೆ ಪಡೆದ ಮೆಸೇಜ್ ಬಂದಿದ್ದರಿಂದ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಮೃತ ಪತ್ನಿಯ ಹೆಸರಿನಲ್ಲಿ ಬಂದ ವ್ಯಾಕ್ಸಿನೇಷನ್ ಮೆಸೇಜ್ ಕುರಿತು ಪತಿ ಪ್ರಕಾಶ ಪಾವಟೆ ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. 
 

click me!